ನವದೆಹಲಿ: ದೇಶದ ಮಹಿಳೆಯರು ಉಡುವ ಸಾಂಪ್ರದಾಯಿಕ ಉಡುಗೆ ಸೀರೆ. ಆದರೆ ಸೀರೆ ಈಗ ಸಭೆ, ಸಮಾರಂಭಗಳಿಗೆ ಮೀಸಲಾಗಿದೆಯೇ ಹೊರತು ಮಹಿಳೆಯ ನಿತ್ಯದ ಉಡುಪಾಗಿ ಉಳಿದಿಲ್ಲ. ಈ ಅದ್ಭುತ ಸೀರೆಯ ಸಂಸ್ಕೃತಿಯನ್ನು ಉಳಿಸಲು ಇಬ್ಬರು ಮಹಿಳೆಯರು ಸೇರಿ ಒಂದು ಅದ್ಭುತ ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಅವರು ಬಳಸಿಕೊಂಡಿರುವುದು ಸಾಮಾಜಿಕ ಜಾಲ ತಾಣ ಎಂಬ ವೇದಿಕೆಯನ್ನು.
ಅಂಜು ಮುದ್ಗಲ್ ಅದಮ್ ಎಂಬ ಬ್ಯುಸಿನೆಸ್ ಪತ್ರಕರ್ತೆ ಮತ್ತು ಸುಗಂಧ ದ್ರವ್ಯ ತಯಾರಕಿ ಎಲಿ ಮಥನ್ ‘ಸಾಮಾನ್ಯ ಮಹಿಳೆಯರು, ಅಸಾಮಾನ್ಯ ಕ್ಷಣಗಳು’ ಎಂಬ ಘೋಷ ವಾಕ್ಯದೊಂದಿಗೆ #100sareepact ಫೇಸ್ಬುಕ್ ಪೇಜ್ ಸೃಷ್ಟಿಸಿದರು.
365 ದಿನದಲ್ಲಿ 100 ಸೀರೆಗಳನ್ನು ಉಡುವ ಚಾಲೆಂಜನ್ನು ದೇಶ, ವಿದೇಶಗಳ ಮಹಿಳೆಯರಿಗೆ ಇವರು ನೀಡಿದ್ದಾರೆ. ಪ್ರತಿನಿತ್ಯ ಉಡುವ ಸೀರೆಯ ಚಿತ್ರ ಮತ್ತು ಆ ಸೀರೆಯ ಹಿಂದಿರುವ ಸವಿ ನೆನಪು ಮತ್ತು ಅದನ್ನು ಯಾಕೆ ಉಟ್ಟೆ ಎಂಬುದನ್ನು ವಿವರಿಸಬೇಕು. ಅವರ ಫೇಸ್ಬುಕ್ ಪೋಸ್ಟ್ #sareepactನಲ್ಲಿ ಹ್ಯಾಶ್ ಟ್ಯಾಗ್ ಆಗುತ್ತದೆ.
ಸೀರೆಯ ಬಗೆಗಿರುವ ತಮ್ಮ ಪ್ರೀತಿ ಅಭಿಮಾನವನ್ನು ವ್ಯಕ್ತಪಡಿಸುವುದಕ್ಕಾಗಿ, ಭಾರತದ ಸೀರೆಯ ಸಂಸ್ಕೃತಿಯನ್ನು ನವೀಕರಣಗೊಳಿಸುವುದಕ್ಕಾಗಿ ಅವರು ಇದನ್ನು ಆರಂಭಿಸಿದ್ದಾರೆ. ಆದೀಗ ಸೋಶಲ್ ಮೀಡಿಯಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ದೇಶದ ಮಾತ್ರವಲ್ಲ ವಿದೇಶದಲ್ಲಿರುವ ಮಹಿಳೆಯರೂ ಸೀರೆ ಉಟ್ಟು, ತಮ್ಮ ಸೀರೆ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ.
ಸೀರೆ ಎಂದಿಗೂ ಕಪಾಟಿನ ಮೂಲೆಯನ್ನು ಸೇರಬಾರದು, ಅದು ನಮ್ಮ ಸಂಸ್ಕೃತಿಯ ಭಾಗವಾಗಿ ಉಳಿಯಬೇಕೆಂಬ ಆಶಯದೊಂದಿಗೆ ಅಂಜು ಮತ್ತು ಎಲಿ ಆರಂಭಿಸಿದ ಅಭಿಯಾನಕ್ಕೆ ಈಗ ಅಪಾರ ಸಂಖ್ಯೆಯ ಮಹಿಳೆಯರು ಸಾಥ್ ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.