ಜೈಪುರ: ಕಾಂಗ್ರೆಸ್ ಪಕ್ಷವು ಕೊರೋನವೈರಸ್ ಸಾಂಕ್ರಾಮಿಕ ರೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ದಿನಾ ಒಂದಲ್ಲಾ ಒಂದು ಆರೋಪಗಳನ್ನು ಮಾಡುತ್ತಲೇ ಇದೆ. ಆದರೆ ಸ್ವತಃ ಕಾಂಗ್ರೆಸ್ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದೆ. ಒಂದು ದಿನವೂ ತನ್ನ ವರ್ತನೆಯ ಬಗ್ಗೆ ಅದು ಆತ್ಮಾವಲೋಕನ ಮಾಡಿಕೊಂಡಿಲ್ಲ.
ಉತ್ತರಪ್ರದೇಶ ಮತ್ತು ರಾಜಸ್ಥಾನ ಗಡಿಯಲ್ಲಿ ಕಾಂಗ್ರೆಸ್ ಪಕ್ಷವು ವಲಸಿಗರ ಸ್ಥಳಾಂತರಕ್ಕಾಗಿ ನಿಯೋಜನೆಗೊಳಿಸಿರುವ ಬಸ್ಸುಗಳ ಚಾಲಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಳೆದ 36 ಗಂಟೆಗಳಿಂದ ಅನ್ನ, ನೀರು ಇಲ್ಲದೆ ಅವರು ಪರದಾಡುತ್ತಿದ್ದಾರೆ. ಮಂಗಳವಾರದಿಂದ ಅವರಿಗೆ ಆಹಾರದ ವ್ಯವಸ್ಥೆಯನ್ನು ಯಾರೂ ಮಾಡಿಕೊಟ್ಟಿಲ್ಲ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಹಿತಿ ಸಲಹೆಗಾರ ಶಲಬ್ ಮಣಿ ತ್ರಿಪಾಠಿ ಅವರು ಹಂಚಿಕೊಂಡಿರುವ ಒಂದು ವಿಡಿಯೋದಲ್ಲಿ, ಚಾಲಕರೊಬ್ಬರು ತಮ್ಮ ಕಷ್ಟವನ್ನು ಅವಲತ್ತುಕೊಂಡಿದ್ದಾರೆ.
“ನಾನು ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಮಂಗಳವಾರದಿಂದ ನಮಗೆ ಕಾಂಗ್ರೆಸ್ ಪಕ್ಷದವರು ಆಹಾರವನ್ನು ತಂದುಕೊಟ್ಟಿಲ್ಲ. ನೀರನ್ನು ನೀಡಿಲ್ಲ. ಔಷಧಿಯನ್ನು ತೆಗೆದುಕೊಳ್ಳಲು ಆಗುತ್ತಿಲ್ಲ” ಎಂದಿದ್ದಾರೆ.
“ಸಮರ್ಪಕವಾದ ಆಹಾರದ ವ್ಯವಸ್ಥೆಯನ್ನು ಮಾಡಲಾಗಿಲ್ಲದ ಕಾರಣ ಎಲ್ಲಾ ಚಾಲಕರ ಪರಿಸ್ಥಿತಿ ಕೂಡ ನನ್ನಂತೆಯೇ ಆಗಿದೆ. ವಿಪರೀತ ಬಿಸಿಲಲ್ಲಿ ಬಸ್ಸಿನ ಒಳಗೆ ನಾವು ಕಾಲಕಳೆಯುವಂತಾಗಿದೆ” ಎಂದಿದ್ದಾರೆ.
ಆರ್ ಟಿ ಓ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ಮೊದಲು ಅಧಿಕಾರಿಗಳು ಅಲ್ವಾರಗೆ ತೆರಳಲು ಸೂಚಿಸಿದ್ದರು. ಬಳಿಕ ಬಸ್ಸನ್ನು ಭರತ್ಪುರಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದರು” ಎಂದಿದ್ದಾರೆ.
“ಇದೀಗ ನಾನು ಕಳೆದ 36 ಗಂಟೆಗಳಿಂದ ಆಹಾರ ಮತ್ತು ನೀರು ಇಲ್ಲದೆ ಪರದಾಡುತ್ತಿದ್ದೇನೆ” ಎಂದಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದು, ಸರ್ಕಾರದ ಸಂಪನ್ಮೂಲವನ್ನು ಬಳಸಿ ಕಾಂಗ್ರೆಸ್ ರಾಜಕೀಯ ಆಟವಾಡುತ್ತಿದೆ. ಚಾಲಕರನ್ನು ಒತ್ತಡ ಹಾಕಿ ಕರೆತರಲಾಗಿದೆ. ಇದೀಗ ಅವರನ್ನು ಹಸಿವಿನಿಂದ ನರಳುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ज़रा देखिए, सियासी आका को खु़श करने के लिए राजस्थान सरकार ने कैसे बेगुनाह बस चालकों को पीट पीट कर गाड़ियाँ इकट्ठा कराईं, पिछले 24 घंटे से उन्हें ना तो खाना दिया, ना ही पानी, राजनीति नहीं सेवा का दावा करने वालों का ज़रा ये घिनौना सच देखिए #योगी_की_हजार_ट्रेन pic.twitter.com/VQd9wdSjDG
— Shalabh Mani Tripathi (@shalabhmani) May 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.