ಮುಂಬಯಿ: ಚೀನಾದ ಟಿಕ್ ಟಾಕ್ ಭಾರತದಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಸಬಲ್ಲಂತಹ ವಿಷಯಗಳನ್ನು ಯಥೇಚ್ಛವಾಗಿ ಟಿಕ್ ಟಾಕ್ ಮೂಲಕ ಹರಿ ಬಿಡಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಇತ್ತೀಚಿಗೆ ಒಬ್ಬ ಆ್ಯಸಿಡ್ ದಾಳಿಯನ್ನು ಸಮರ್ಥಿಸಿಕೊಳ್ಳುವಂತಹ ವಿಡಿಯೋವನ್ನು ಟಿಕ್ ಟಾಕ್ ಮೂಲಕ ಹರಿಬಿಟ್ಟಿದ್ದಾನೆ.
ನಮ್ಮ ದೇಶದಲ್ಲಿ ಯುವತಿಯರ ಮೇಲೆ ಆ್ಯಸಿಡ್ ದಾಳಿಯಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಪ್ರಚೋದಿಸುವಂತೆ ವಿಷಯಗಳು ಹರಿದಾಡುತ್ತಿರುವ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.
13.4 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಫೈಝಲ್ ಸಿದ್ದೀಕಿ ಎಂಬ ಟಿಕ್ ಟಾಕ್ ಬಳಕೆದಾರನ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ. ಬಿಜೆಪಿ ಮುಖಂಡ ತೇಜೆಂದರ್ ಪಾಲ್ ಬಗ್ಗಾ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ಈ ವಿಡಿಯೋವನ್ನು ತಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಜರುಗಿಸಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥ ರೇಖಾ ಶರ್ಮಾ ಅವರು ಟಿಕ್ ಟಾಕ್ ಇಂಡಿಯಾಗೆ ಮನವಿ ಮಾಡಿ, ಟಿಕ್ ಟಾಕ್ನಿಂದ ವಿಡಿಯೋ ತೆಗೆಯುವಂತೆ ತಿಳಿಸಿದ್ದರು. ಇದೀಗ ವಿಡಿಯೋ ಟಿಕ್ ಟಾಕ್ ನಿಂದ ಅಳಿಸಿಹೋಗಿದೆ.
Written to @DGPMaharashtra DGP to take action against #FaizalSiddiqui. Also wrote to @TikTok_IN to block this person from the platform, though they have deleted the video from it after a call from @NCWIndia https://t.co/drBqy9ykji pic.twitter.com/X1CpM8soBt
— Rekha Sharma (@sharmarekha) May 18, 2020
ಈ ವಿಡಿಯೋದಲ್ಲಿ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡುವಂತಹ ವಿಷಯವಿದೆ. ಇದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪ್ರೋತ್ಸಾಹ ಮಾಡಿದಂತಿದೆ.
“ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ಗಂಭೀರವಾಗಿದೆ. ಈ ವಿಡಿಯೋ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪ್ರಚಾರಪಡಿಸಲು ಮಾತ್ರವಲ್ಲದೇ, ಪುರುಷಪ್ರಧಾನ ಮನಸ್ಥಿತಿಯನ್ನು ಪ್ರತಿಬಿಂಬಿಸಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನೆ ಮಾಡುತ್ತಿದೆ” ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
ಇದೀಗ ಫೈಝಲ್ ಸಿದ್ದೀಕಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಕ್ರಮವನ್ನು ಜರುಗಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.