ಸ್ವರಾಜ್ವ ನನ್ನ ಜನ್ಮ ಸಿದ್ಧಹಕ್ಕು ಅದನ್ನು ಪಡೆದೇ ತಿರುತ್ತೇನೆ ಎಂಬ ಫೋಷಣೆ ಮೊಳಗಿಸಿದ ಬಾಲಗಂಗಾಧರ ತಿಲಕರ ಹುಟ್ಟುಹಬ್ಬವಿಂದು. ತಿಲಕರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.
1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬ ಜನಿಸಿದ ತಿಲಕರು ಎಲ್.ಎಲ್.ಬಿ ಪದವಿಧರರು. ಆದರು ಅವರು ಪ್ರತಿಕಾರಂಗವನ್ನು ಕಾರ್ಯಕ್ಷೇತ್ರವಾಗಿ ಆರಿಸಿದರು. ತಿಲಕರು ‘ಕೇಸರಿ’ ಎಂಬ ಮರಾಠಿ ಪತ್ರಿಕೆಯನ್ನು ಮತ್ತು ಮರಾಠ ಪತ್ರಿಕೆಯನ್ನು ಆರಂಭಿಸಿ ಅದರ ಮೂಲಕ ರಾಷ್ಟ್ರೀಯ ವಿಚಾರಗಳನ್ನು ಮತ್ತು ಬ್ರಿಟಿಷರ ರಾಜಸತ್ತೆ ಮತ್ತು ಅನ್ಯಾಯದ ವಿರುದ್ಧ ಬರೆಯುತ್ತಿದ್ದರು. ಕೇಸರಿ ಪತ್ರಿಕೆಯು ತುಂಬಾ ಬೇಗ ಪ್ರಸಿದ್ಧಿ ಪಡೆಯಿತು. ತಿಲಕರ ರಾಷ್ಟ್ರೀಯ ವಿಚಾರಧಾರೆಗೆ ಬೆಂಬಲ ವ್ಯಕ್ತಪಡಿಸಿದವರಲ್ಲಿ ಲಾಲಾ ಲಜಪತ್ರಾಯ್ ಮತ್ತು ಬಿಪಿನ್ ಚಂದ್ರಪಾಲ್ ಪ್ರಮುಖರು ಆದುದರಿಂದ ಲಾಲ್-ಬಾಲ್-ಪಾಲ್ ಎಂದು ಈ ಮೂವರು ಪ್ರಸಿದ್ಧರಾದರು
ಸಾಮಾಜಿಕ ಚಿಂತನೆ : ಸಮಾಜಕ್ಕೆ ಬಾಲಗಂಗಾಧರ ತಿಲಕರ ಕೊಡುಗೆ ಅನನ್ಯ. ದೇವನಾಗರಿಯಲ್ಲಿ ಬರೆವ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಅಳವಡಿಸುವ ಚಿಂತನೆ ಪ್ರಥಮ ಬಾರಿಗೆ ಮುಂದಿಟ್ಟಿದ್ದೇ ತಿಲಕರು.
ಮದ್ಯಪಾನ ನಿಷೇಧ ಮತ್ತು ವಿವಾಹಕ್ಕೆ ವಿವಾಹಕ್ಕೆ ಕನಿಷ್ಠ ವಯೋಮಿತಿ ನಿಗದಿಯಂತಹ ಪ್ರಸ್ತಾಪ ಮುಂದಿಟ್ಟದ್ದು ತಿಲಕರೇ.
ಸಾರ್ವಜನಿಕ ಗಣೇಶೋತ್ಸವ ಮತ್ತು ಶಿವಾಜಿ ಜಯಂತಿಗಳನ್ನು ಪ್ರಪ್ರಥಮವಾಗಿ ಸಂಯೋಜಿಸಿ ಆಮೂಲಕ ರಾಷ್ಟ್ರೀಯ ಚಿಂತನೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಲು ವೇದಿಕೆ ಸಿದ್ದಪಡಿಸಿದರು. ಅಲ್ಲದೇ ಇಂಗ್ಲೀಷ್ ಸಂವಹನ ಮತ್ತು ಗೋಹತ್ಯೆಗೂ ವಿರೋಧವಿತ್ತು.
ತಿಲಕರ ವಿಚಾರಗಳು ಜನಮನವನ್ನು ತಟ್ಟಿತ್ತು. ಅಲ್ಲದೇ ಅವರು ಜನರ ಪ್ರೀತಿ ಮತ್ತು ಪ್ರಸಿದ್ಧಿಗಳಿಸಿದ ಕಾರಣ ಲೋಕಮಾನ್ಯರಾದರು ಆದುದರಿಂದ ಅವರನ್ನು ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಎಂದು ಕರೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.