ಮುಂಬೈ: ಕೊರೋನಾ ವಿರುದ್ಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸರಿಬ್ಬರ ಕಾರ್ಯಕ್ಕೆ ಗೌರವ ಸಲ್ಲಿಸಿರುವ ಬಾಲಿವುಡ್ ನಟ ಅಕ್ಷಯ ಕುಮಾರ್ ಅವರು ಮುಂಬೈ ಪೊಲೀಸ್ ಫೌಂಡೇಷನ್ಗೆ 2 ಕೋಟಿ ರೂ. ಗಳನ್ನು ದೇಣಿಗೆ ನೀಡಿದ್ದಾರೆ. ಆ ಮೂಲಕ ಇಂತಹ ಕಠಿಣ ಸಂದರ್ಭದಲ್ಲಿ ಜನ ಸೇವೆ ಮಾಡುತ್ತಿರುವ ಪೊಲೀಸರ ನೆರವಿಗೆ ಅಕ್ಷಯ್ ಧಾವಿಸಿದ್ದಾರೆ.
ಅಕ್ಷಯ್ ಕುಮಾರ್ ಅವರು 2 ಕೋಟಿ ರೂ. ಗಳ ದೇಣಿಗೆ ನೀಡಿರುವ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿರುವ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್, ಫೌಂಡೇಷನ್ ಗೆ 2 ಕೋಟಿ ರೂ. ಗಳನ್ನು ದೇಣಿಗೆ ನೀಡಿರುವ ಅಕ್ಷಯ್ ಕುಮಾರ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಈ ನೀವು ನೀಡಿರುವ ಈ ಮೊತ್ತವನ್ನು ಮುಂಬೈನ ಜನರ ರಕ್ಷಣೆ ಮಾಡುತ್ತಿರುವ ರಕ್ಷಕರ ಜೀವನ ರಕ್ಷಣೆಗಾಗಿ ಉಪಯೋಗಿಸುವುದಾಗಿಯೂ ಇಲಾಖೆಯ ಪರವಾಗಿ ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ ಕುಮಾರ್ ಕೊರೋನಾ ವಿರುದ್ಧ ಹೋರಾಟ ಮಾಡಿ ಜೀವ ತೆತ್ತಿರುವ ಹೆಡ್ ಕಾನ್ಸ್ಟೇಬಲ್ ಚಂದ್ರಕಾಂತ ಪೆಂಡೂರ್ಕರ್ ಮತ್ತು ಸಂದೀಪ್ ಸರ್ವೆ ಅವರ ಕಾರ್ಯಕ್ಕೆ ನಾನು ನನ್ನ ಗೌರವ ಸಲ್ಲಿಸಿದ್ದೇನೆ. ನಮ್ಮನ್ನು ಉಳಿಸುವ ಕರ್ತವ್ಯ ಮಾಡಿದ ಪೊಲೀಸರಿಗೆ ಹೆಗಲಾಗುವ ನನ್ನ ಕರ್ತವ್ಯ ನಾನು ಮಾಡಿದೆ. ನೀವೂ ಸಹ ಮಾಡುತ್ತೀರಲ್ಲವೇ ಎಂದು ನಟ ಅಕ್ಷಯ್ ತಮ್ಮ ಅಭಿಮಾನಿಗಳಲ್ಲಿಯೂ ಪೊಲೀಸ್ ಫೌಂಡೇಶನ್ಗೆ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದಾರೆ.
ಈ ಹಿಂದೆಯೂ ಕೊರೋನಾ ವಿರುದ್ಧ ಹೋರಾಟಕ್ಕೆ ಪಿಎಂ ಕೇರ್ಸ್ ಡೆ 25 ಕೋಟಿ ರೂ. , ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಗೆ ಅಗತ್ಯ ಪಿಪಿಇ ಖರೀದಿಗೆ 3 ಕೋಟಿ ರೂ. ಗಳನ್ನು ನೀಡುವ ಮೂಲಕವೂ ಅಕ್ಷಯ್ ಹೃದಯವಂತಿಕೆ ಮೆರೆದಿದ್ದರು. ಇದೀಗ ಪೊಲೀಸ್ ಇಲಾಖೆಯ ಜೊತೆಗೆ ಕೈ ಜೋಡಿಸುವ ಮೂಲಕ ಅಕ್ಷಯ್ ಕುಮಾರ್ ನಿಜ ಜೀವನದಲ್ಲಿಯೂ ನಾಯಕನೇ ಎಂಬುದನ್ನು ಸಾಬೀತು ಮಾಡಿದ್ದಾರೆ.
I salute @MumbaiPolice headconstables Chandrakant Pendurkar & Sandip Surve, who laid their lives fighting Corona. I have done my duty, I hope you will too. Let’s not forget we are safe and alive because of them 🙏🏻 https://t.co/mgJyxCdbOP pic.twitter.com/nDymEdeEtT
— Akshay Kumar (@akshaykumar) April 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.