ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಗುರುದ್ವಾರದಲ್ಲಿ ಪರಿಕ್ರಮವನ್ನು ನೆರವೇರಿಸಿದ್ದಾರೆ.
ನಿತ್ಯ 1 ಲಕ್ಷ ಜನರಿಗೆ ಆಹಾರವನ್ನು ಒದಗಿಸುವ ಸಲುವಾಗಿ ಗುರುದ್ವಾರ ಶ್ರೀ ಬಾಂಗ್ಲಾ ಸಾಹೇಬ್ ಗುರುದ್ವಾರದಲ್ಲಿ ನಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯುತ್ತದೆ. ಸೋಮವಾರ ದೆಹಲಿ ಪೊಲೀಸರು ಈ ಗುರುದ್ವಾರಕ್ಕೆ ಆಗಮಿಸಿ ಪರಿಕ್ರಮವನ್ನು ನೆರವೇರಿಸಿದ್ದಾರೆ.
35 ಪೊಲೀಸ್ ವ್ಯಾನ್ ಸೇರಿದಂತೆ 100 ಪೊಲೀಸ್ ವಾಹನ, 60 ಮೋಟಾರ್‌ಸೈಕಲ್ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಐಶ್ ಸಿಂಘಾಲ್ ಅವರ ನೇತೃತ್ವದಲ್ಲಿ ಗುರುದ್ವಾರಕ್ಕೆ ಆಗಮಿಸಿ ಪರಿಕ್ರಮದ ಮೂಲಕ ಸೇವೆಯನ್ನು ಸಲ್ಲಿಸಿದ್ದಾರೆ ಮತ್ತು ಕೆಲವರು ಲಂಗರ್ ಸೇವಾದಲ್ಲೂ ಪಾಲ್ಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಪೊಲೀಸರ ಈ ಕಾರ್ಯವನ್ನು ಟ್ವಿಟರ್ ಮೂಲಕ ಶ್ಲಾಘಿಸಿದ್ದಾರೆ. “ದೆಹಲಿ ಪೊಲೀಸರಿಂದ ಅತ್ಯುತ್ತಮ ಕಾರ್ಯ. ನಮ್ಮ ಗುರುದ್ವಾರಗಳು ಜನರಿಗೆ ಸೇವೆಯನ್ನು ನೀಡುವ ಮೂಲಕ ಸಾಧಾರಣ ಕಾರ್ಯವನ್ನು ನಡೆಸುತ್ತಿವೆ. ಅವರ ಸಹಾನುಭೂತಿ ಮೆಚ್ಚುವಂತದ್ದು” ಎಂದಿದ್ದಾರೆ.
ದೆಹಲಿ ಪೊಲೀಸರು ನಡೆಸಿದ ಪರಿಕ್ರಮ ನನ್ನ ಹೃದಯವನ್ನು ತಟ್ಟಿತು ಎಂದು ದೆಹಲಿ ಸಿಖ್ ಗುರುದ್ವಾರ ಮ್ಯಾನೇಜಿಂಗ್ ಕಮಿಟಿ ಅಧ್ಯಕ್ಷ ಮಂಜಿಂಧರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
Good gesture by the @DelhiPolice.
Our Gurudwaras have been doing exceptional work in serving people. Their compassion is appreciable. https://t.co/hdTn6vDFtj
— Narendra Modi (@narendramodi) April 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.