ನವದೆಹಲಿ: ಇದು ನಾಗರಿಕ ಸೇವಾ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ನಾಗರಿಕ ಸೇವಕರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಕಾಮನೆಗಳನ್ನು ತಿಳಿಸಿದ್ದಾರೆ. ಕೋವಿಡ್-19 ಅನ್ನು ಸೋಲಿಸಲು ನಾಗರಿಕ ಸೇವಕರು ನಡೆಸುತ್ತಿರುವ ಪ್ರಯತ್ನಗಳನ್ನು ಮೋದಿ ಶ್ಲಾಘಿಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, “ಇಂದು, ನಾಗರಿಕ ಸೇವಾ ದಿನ. ಎಲ್ಲ ನಾಗರಿಕ ಸೇವಕರಿಗೆ ಮತ್ತು ಅವರ ಕುಟುಂಬಗಳಿಗೆ ನಾನು ಶುಭಕಾಮನೆಗಳನ್ನು ತಿಳಿಸುತ್ತೇನೆ” ಎಂದಿದ್ದಾರೆ.
“ಕೋವಿಡ್-19 ಅನ್ನು ಯಶಸ್ವಿಯಾಗಿ ಸೋಲಿಸಲು ಅವರು ನಡೆಸುತ್ತಿರುವ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ದಿನದ 24 ಗಂಟೆಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ, ಅಗತ್ಯ ಇರುವವರಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಪ್ರತಿಯೊಬ್ಬರ ಆರೋಗ್ಯದ ರಕ್ಷಣೆ ಮಾಡುತ್ತಿದ್ದಾರೆ” ಎಂದಿದ್ದಾರೆ.
ಸರ್ದಾರ್ ಪಟೇಲ್ ಅವರನ್ನೂ ಸ್ಮರಿಸಿದ ಮೋದಿ, ನಮ್ಮ ಆಡಳಿತಾತ್ಮಕ ಚೌಕಟ್ಟನ್ನು ದೂರದೃಷ್ಟಿಯೊಂದಿಗೆ ಅವರು ರಚನೆ ಮಾಡಿದರು ಮತ್ತು ಪ್ರಗತಿ ಕೇಂದ್ರಿತ ರಸ್ತೆಯನ್ನು ನಿರ್ಮಾಣ ಮಾಡಿದರು” ಎಂದಿದ್ದಾರೆ.
“ನಾಗರಿಕ ಸೇವಾ ದಿನದಂದು, ಸರ್ದಾರ್ ಪಟೇಲ್ ಅವರಿಗೆ ನಮ್ಮ ಗೌರವಾರ್ಪಣೆಗಳು” ಎಂದಿದ್ದಾರೆ.
On Civil Services Day, tributes to the great Sardar Patel, who envisioned our administrative framework and emphasised on building a system that is progress-oriented and compassionate.
Sharing my speech from Civil Services Day in 2018. https://t.co/KANhpFsTkd
— Narendra Modi (@narendramodi) April 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.