ನವದೆಹಲಿ: ಕರಾವಳಿ ರಾಜ್ಯ ಗೋವಾ ಮತ್ತು ಈಶಾನ್ಯ ರಾಜ್ಯವಾದ ಮಣಿಪುರ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಮುಕ್ತವಾದ ರಾಜ್ಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಏಪ್ರಿಲ್ 3 ರ ಬಳಿಕ ಅಲ್ಲಿ ಯಾವುದೇ ಧನಾತ್ಮಕ ಪ್ರಕರಣಗಳು ಗೋವಾದಲ್ಲಿ ಪತ್ತೆಯಾಗಿಲ್ಲ.
ಗೋವಾದ ಆರೋಗ್ಯ ಸಚಿವ ಪ್ರಮೋದ್ ಸಾವಂತ್ ಅವರು ಈ ವಿಷಯವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಬಹಿರಂಗಗೊಳಿಸಿದ್ದಾರೆ.
“ಗೋವಾದ ಎಲ್ಲಾ ಕೋವಿಡ್-19 ರೋಗಿಗಳ ರಿಪೋರ್ಟ್ ನೆಗೆಟಿವ್ ಆಗಿದ್ದು, ಇದು ಸಂತೃಪ್ತಿ ಮತ್ತು ನಿರಾಳತೆಯ ಕ್ಷಣವಾಗಿದೆ. ವೈದ್ಯರ ತಂಡ ಮತ್ತು ಸಂಪೂರ್ಣ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಅವಿರತ ಪರಿಶ್ರಮದಿಂದಾಗಿ ಶ್ಲಾಘನೆಗೆ ಪಾತ್ರರು. ಎಪ್ರಿಲ್ 3ರ ಬಳಿಕ ಯಾವುದೇ ಧನಾತ್ಮಕ ಪ್ರಕರಣಗಳು ಗೋವಾದಲ್ಲಿ ಪತ್ತೆಯಾಗಿಲ್ಲ” ಎಂದಿದ್ದಾರೆ.
A moment of satisfaction and relief for Goa as the last active Covid-19 case tests negative. Team of Doctors and entire support staff deserves applause for their relentless effort. No new positive case in Goa after 3rd April 2020.#GoaFightsCOVID19 @narendramodi
— Dr. Pramod Sawant (@DrPramodPSawant) April 19, 2020
ಗೋವಾದಲ್ಲಿ ಒಟ್ಟು ಏಳು ಧನಾತ್ಮಕ ಪ್ರಕರಣಗಳು ಪತ್ತೆಯಾಗಿದ್ದವು, ಈಗ ಅವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎಪ್ರಿಲ್ 3 ರ ಬಳಿಕ ಯಾವುದೇ ಧನಾತ್ಮಕ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಗೋವಾ ಇದೀಗ ದೇಶದ ಕೊರೋನಾ ವೈರಸ್ ಮುಕ್ತ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.
ಆದರೂ ಅಲ್ಲಿ ಲಾಕ್ ಡೌನ್ ನಿಯಮ ಮತ್ತು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. “ರಾಜ್ಯದಲ್ಲಿ ಪ್ರಸ್ತುತ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲದಿದ್ದರೂ ಲಾಕ್ ಡೌನ್ ನಿಯಮವನ್ನು ಪಾಲಿಸುವುದಕ್ಕೆ, ಸಾಮಾಜಿಕ ಅಂತರವನ್ನು ಕಾಪಾಡುವುದಕ್ಕೆ ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ನಿಯಮ ಮತ್ತು ನಿರ್ದೇಶನಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ ” ಎಂದು ಸಾವಂತ್ ಹೇಳಿದ್ದಾರೆ.
ಇನ್ನೊಂದೆಡೆ ಮಣಿಪುರದಲ್ಲಿ ಇಬ್ಬರು ಕೊರೋನಾ ರೋಗಿಗಳು ಇದ್ದರು. ಇದೀಗ ಅವರಿಬ್ಬರು ಗುಣಮುಖರಾಗಿ ಹೊರಹೊಮ್ಮಿದ್ದಾರೆ. ಅಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಹೀಗಾಗಿ ಮಣಿಪುರ ಈಗ ಕೊರೋನಾ ಮುಕ್ತಗೊಂಡಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಬಿರೇನ್ ಸಿಂಗ್ ಟ್ವೀಟ್ ಮೂಲಕ ಘೋಷಿಸಿದ್ದಾರೆ.
I am glad to share that Manipur is now Corona free.Both patients hv fully recovered and have tested negative.There are no fresh cases of the virus in the state.This has been possible because of cooperation of public &medical staff and strict enforcement of lockdown @PMOIndia
— N.Biren Singh (@NBirenSingh) April 19, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.