ಅರಣ್ಯನಾಶ ಮತ್ತು ನಗರೀಕರಣದ ಸಮಸ್ಯೆ ಜಗತ್ತಿನ ಮೇಲೆ ದೊಡ್ಡ ಹೊಡೆತವನ್ನು ನೀಡುತ್ತಿದೆ. ನಮ್ಮ ಪರಿಸರ ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗುತ್ತದೆ. ಅನೇಕ ಪರಿಸರವಾದಿಗಳು ಮತ್ತು ಸ್ವಯಂಸೇವಕರು ನಮ್ಮ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆಗಾಗಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಕಾಡುಗಳನ್ನು ಉಳಿಸುವ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ವಿಶ್ವಸಂಸ್ಥೆಯು ಪ್ರತಿವರ್ಷ ವಿಶ್ವ ಅರಣ್ಯ ದಿನವನ್ನು ಆಚರಿಸುತ್ತದೆ.
ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿಶ್ವಸಂಸ್ಥೆಯ ಘೋಷಣೆಯಂತೆ ಪ್ರತಿವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನಾಂಕವನ್ನು ವಿಶ್ವ ಅರಣ್ಯ ದಿನವೆಂದು ಆಚರಿಸಲು 2012ರಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಆಚರಣೆಯಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳೆಂದರೆ ವಿಶ್ವಸಂಸ್ಥೆಯ ಅರಣ್ಯ ಮತ್ತು ಆಹಾರ ಮತ್ತು ಕೃಷಿ ಸಂಘಟನಾ (ಎಫ್ಎಒ). ಪರಿಸರ ಸಮತೋಲನದ ಒಂದು ಭಾಗವಾಗಿ ಕಾಡುಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಜಾತಿಯ ಮರಗಳನ್ನು ನೆಡುವಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಪಂಚದಾದ್ಯಂತದ ಸರ್ಕಾರಗಳನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅರಣ್ಯ ದಿನ 2020ರ ಥೀಮ್
ಪ್ರತಿವರ್ಷ ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆಗೆ ವಿಭಿನ್ನ ವಿಷಯವನ್ನು ನಿರ್ಧರಿಸಲಾಗುತ್ತದೆ. ದಿನದ ಬಗ್ಗೆ ಮತ್ತು ಕಾಡುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಲೋಗೊಗಳು ಮತ್ತು ಬ್ಯಾನರ್ಗಳನ್ನು ರಚಿಸಲಾಗುತ್ತದೆ. ಥೀಮ್ ಅನ್ನು ಅರಣ್ಯಗಳ ಸಹಕಾರಿ ಸಹಭಾಗಿತ್ವದಿಂದ ನಿರ್ಧರಿಸಲಾಗುತ್ತದೆ. ‘ಅರಣ್ಯ ಮತ್ತು ಜೀವವೈವಿಧ್ಯ’ ಎಂಬುದು 2020ರ ವಿಶ್ವ ಅರಣ್ಯ ದಿನದ ಥೀಮ್ ಆಗಿದೆ.
ವಿಶ್ವ ಅರಣ್ಯ ದಿನದಂದು, ಅರಣ್ಯ ಹೋರಾಟಗಾರರಿಂದ ಹಿಡಿದು ಶಿಕ್ಷಣ ತಜ್ಞರವರೆಗೆ ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ. ಅರಣ್ಯ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡುವುದನ್ನು ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಒಳಗೊಂಡಿದೆ. ಅನೇಕ ಸಂಸ್ಥೆಗಳು ಸಭೆಗಳು, ಸಮಾವೇಶಗಳು, ಪ್ರಸ್ತುತಿ, ಮರಗಳನ್ನು ನೆಡುವುದು ಮುಂತಾದ ವಿಶೇಷ ಚಟುವಟಿಕೆಗಳನ್ನು ಈ ದಿನ ನಡೆಸಲಾಗುತ್ತದೆ.
ಅರಣ್ಯ ನಮ್ಮ ಪ್ರಕೃತಿಯ ಅತ್ಯಂತ ಪ್ರಮುಖವಾದ ಅಂಗ. ಅಗಾಧ ಸಸ್ಯ ಸಂಪತ್ತನ್ನು ಅದು ಹೊಂದಿರುತ್ತದೆ. ಸಾವಿರಾರು ಜಾತಿ ಮರಗಳು ಅಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ, ಲಕ್ಷಾಂತರ ಜೀವವೈವಿಧ್ಯಗಳಿಗೆ ಅಲ್ಲಿ ಆಶ್ರಯವನ್ನು ನೀಡುತ್ತದೆ. ಆದರೆ ಮಾನವ ಜೀವಿ ಅರಣ್ಯಗಳ ಮಹತ್ವವನ್ನು ತಿಳಿಯದೆ ಅದನ್ನು ನಾಶಪಡಿಸಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು, ಕಾರ್ಖಾನೆಗಳನ್ನು ನಿರ್ಮಾಣ ಮಾಡಿ ಪ್ರಕೃತಿಯನ್ನು ಮಲಿನಗೊಳಿಸುತ್ತಿದ್ದಾನೆ. ಪ್ರಸ್ತುತ ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮನುಷ್ಯನ ಈ ಕೃತ್ಯಗಳ ಕಾರಣವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.