ನವದೆಹಲಿ: ಜಗತ್ತು ಕೊರೋನಾವೈರಸ್ ಬಗ್ಗೆ ಆತಂಕಕ್ಕೆ ಒಳಗಾಗಿದ್ದರೂ ಪಾಕಿಸ್ಥಾನಕ್ಕೆ ಮಾತ್ರ ಕಾಶ್ಮೀರವನ್ನು ಹೇಗೆ ಕಬಳಿಸುವುದು ಎಂಬುದೇ ಚಿಂತೆ. ಸಾರ್ಕ್ ನಾಯಕರುಗಳು ಕೊರೋನಾವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾತುಕತೆಯನ್ನು ನಡೆಸಲು ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಪಾಕಿಸ್ಥಾನ ಅಲ್ಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ.
ಸಾರ್ಕ್ ನಾಯಕರ ಸಭೆಯಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾಗಿಯಾಗಿರಲಿಲ್ಲ, ಆದರೆ ಅವರ ಆರೋಗ್ಯ ಸಹಾಯಕ ಭಾಗಿಯಾಗಿದ್ದ. ನಾಯಕರುಗಳು ವೈರಸ್ ತಡೆಯುವ ಸಲುವಾಗಿ ಗಂಭೀರವಾದ ಚಿಂತನೆಯಲ್ಲಿ ತೊಡಗಿದ್ದರೆ ಆತ ಮಾತ್ರ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಸಭೆಯ ಗಾಂಭಿರ್ಯತೆಗೆ ಧಕ್ಕೆ ತಂದಿದ್ದಾನೆ.
‘ಕೊರೋನಾವೈರಸ್ ತಡೆಗಟ್ಟುವ ಕ್ರಮಗಳನ್ನು ಅನುಮತಿಸಲು ಕಣಿವೆಯಲ್ಲಿನ ಸ್ಥಗಿತವನ್ನು ತಕ್ಷಣವೇ ತೆಗೆದುಹಾಕಬೇಕು” ಎಂದು ಹೇಳಿದ್ದಾನೆ.
ಪಾಕಿಸ್ಥಾನದ ಈ ಮಾತನ್ನು ಭಾರತ ತೀವ್ರವಾಗಿ ಖಂಡಿಸಿದೆ. ಕೊರೋನಾವೈರಸ್ ಕುರಿತ ನಿರ್ಣಾಯಕ ವಿಡಿಯೋ ಸಭೆಯಲ್ಲಿ ಕಾಶ್ಮೀರದ ಬಗ್ಗೆ ಅನಗತ್ಯ ಹೇಳಿಕೆಯನ್ನು ಎತ್ತುವ ಮೂಲಕ ಮಾನವೀಯ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಪಾಕಿಸ್ಥಾನ ಮಾಡಿದೆ ಎಂದು ಭಾರತ ಸರ್ಕಾರ ಆರೋಪಿಸಿದೆ.
ವಿಡಿಯೋ ಕಾನ್ಫರೆನ್ಸ್ನಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಷೆ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಭೂತಾನ್ ಪ್ರಧಾನಿ ಲೋಟೇ ಶೆರಿಂಗ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾಗಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.