ನವದೆಹಲಿ: ನಗರದಲ್ಲಿ ವಾಸಿಸುವ ಭಾರತೀಯರಿಗಿಂತ ಗ್ರಾಮೀಣ ಭಾಗದಲ್ಲಿ ವಾಸಿಸುವ ಭಾರತೀಯರು ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂಬುದು ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.
ಗ್ರಾಮೀಣ ಭಾಗದ ಜನರು ಆಸ್ಪತ್ರೆಗೆ ದಾಖಲಾಗದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆಂದು 509 ರೂಪಾಯಿ ಖರ್ಚು ಮಾಡಿದರೆ, ನಗರವಾಸಿಗಳು 639 ರೂಪಾಯಿ ಖರ್ಚು ಮಾಡುತ್ತಾರೆ.
ಖಾಸಗಿ ಆಸ್ಪತ್ರೆಗಳಿಗೆ ಶೇ.58 ರಷ್ಟು ಗ್ರಾಮೀಣ ಭಾಗದ ಜನರು ದಾಖಲಾಗುತ್ತಾರೆ, ಶೇ. 98 ರಷ್ಟು ನಗರವಾಸಿಗಳು ದಾಖಲಾಗುತ್ತಾರೆ,
45-59 ಪ್ರಾಯದ ಶೇ.13ರಷ್ಟು ಗ್ರಾಮೀಣ ಜನರಿಗೆ ಮಾತ್ರ ಆರೋಗ್ಯ ಸಂಬಂಧಿ ಸಮಸ್ಯೆಯಿದೆ, ಆದರೆ ನಗರವಾಸಿಗಳಲ್ಲಿ ಇದರ ಪ್ರಮಾಣ ಶೇ.21 ರಷ್ಟಿದೆ.
70 ಕ್ಕಿಂತ ಮೇಲ್ಪಟ್ಟ ಶೇ.31 ರಷ್ಟು ಗ್ರಾಮೀಣ ಜನರು ಮಾತ್ರ ಅನಾರೋಗ್ಯ ಪೀಡಿತರು, ಆದರೆ ಶೇ.37 ರಷ್ಟು ನಗರವಾಸಿಗಳು ಅನಾರೋಗ್ಯ ಪೀಡಿತರು ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಆದರೆ ಗ್ರಾಮೀಣ ಮತ್ತು ನಗರವಾಸಿಗಳು ಸೇರಿದಂತೆ ಬಹುತೇಕ ಭಾರತೀಯರು ತಮ್ಮ ಆರೋಗ್ಯ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.