ಕೋಲ್ಕತ್ತಾ: ಮಾವೋವಾದಿ ನಾಯಕ ಕಿಶನ್ ಅವರನ್ನು ಕೊಲೆ ಮಾಡಿದ್ದು ಮಮತಾ ಬ್ಯಾನರ್ಜಿ ಸರ್ಕಾರ ಎಂದು ಟಿಎಂಸಿ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಕಾಡಿನಲ್ಲಿ ನಡೆದ ಎನ್ಕೌಂಟರ್ನಲ್ಲಿ ಕಿಶಾನ್ ಹತ್ಯೆಯಾಗಿದ್ದಾರೆ ಎಂದು ಟಿಎಂಸಿ ಸರ್ಕಾರ ಹೇಳಿಕೊಳ್ಳುತ್ತಾ ಬಂದಿದೆ. ಆದರೀಗ ಸ್ವತಃ ಸರ್ಕಾರವೇ ಮುಂದೆ ನಿಂತು ಅವರನ್ನು ಕೊಲೆ ಮಾಡಿದೆ ಎಂದು ಅಭಿಷೇಕ್ ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ.
ಕಿಶನ್ ಅವರನ್ನು ಹತ್ಯೆ ಮಾಡಿರುವುದು ಮಮತಾ ಸರ್ಕಾರದ ದೊಡ್ಡ ಯಶಸ್ಸು. ಶಸ್ತ್ರಾಸ್ತ್ರವನ್ನು ಸ್ವಂತ ದೇಶ ರಕ್ಷಿಸಲಷ್ಟೇ ಬಳಸಬೇಕು. ಅದನ್ನು ಬಿಟ್ಟು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಶಸ್ತ್ರಾಸ್ತ್ರ ಬಳಸುವ ವ್ಯಕ್ತಿಗೆ ರಾಜ್ಯದಲ್ಲಿ ಇದೇ ರೀತಿ ಪಾಠ ಹೇಳಿಕೊಡಲಾಗುತ್ತದೆ ಎಂದು ಮಮತಾ ಅವರ ಸೋದರಳಿಯನೂ ಆಗಿರುವ ಅಭಿಷೇಕ್ ಹೇಳಿಕೊಂಡಿದ್ದಾರೆ.
ಅವರ ಈ ಹೇಳಿಕೆ ಮಮತಾ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ, ಈ ಬಗ್ಗೆ ಎಡಪಕ್ಷಗಳು ಸರ್ಕಾರದ ವಿರುದ್ಧ ಸಮರ ಸಾರುವ ಸಾಧ್ಯತೆಯೂ ಇದೆ.
ಮಾವೋವಾದಿಗಳ ನಾಯಕನಾಗಿದ್ದ ಕಿಶಾನ್ ಅವರನ್ನು 2011ರ ನವೆಂಬರ್ 11ರಂದು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.