ಲಕ್ನೋ: ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯಾದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಿರ್ಮಾಣ ದಿಗ್ಗಜ ಲಾರ್ಸೆನ್ ಆ್ಯಂಡ್ ಟರ್ಬೋ (ಎಲ್&ಟಿ)ಯು ರಾಮಮಂದಿರದ ವಿನ್ಯಾಸ ಮತ್ತು ನಿರ್ಮಾಣವನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡುವುದಾಗಿ ಘೋಷಿಸಿದೆ.
ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ವಿನ್ಯಾಸ ಕಾರ್ಯವನ್ನು ನಡೆಸಲು ಎಲ್&ಟಿಯು ಭಾರೀ ಉತ್ಸಾಹವನ್ನು ತೋರಿಸಿದೆ. ಮಾತ್ರವಲ್ಲ, ಯಾವುದೇ ಶುಲ್ಕವನ್ನು ವಿಧಿಸದೆ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.
“ಈ ಯೋಜನೆಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕದೆಯೇ ಕಾರ್ಯವನ್ನು ನಡೆಸಲು ಸಂಸ್ಥೆ ಸಿದ್ಧವಿದೆ” ಎಂದು ಹಿರಿಯ ವಿಎಚ್ಪಿ ನಾಯಕರೊಬ್ಬರು ಹೇಳಿದ್ದಾರೆ. ವಿಎಚ್ಪಿಯ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಹೊಸದಾಗಿ ಸ್ಥಾಪನೆಯಾದ ಶ್ರೀ ರಾಮ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಎಲ್ & ಟಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಗುಲ ನಿರ್ಮಾಣ ಕಾರ್ಯಾರಂಭದ ದಿನಾಂಕವನ್ನು ನಿರ್ಧರಿಸಲು ಟ್ರಸ್ಟಿಗಳ ಮಂಡಳಿಯು ಮಾರ್ಚ್ ಮೊದಲ ವಾರದಲ್ಲಿ ಅಯೋಧ್ಯೆಯಲ್ಲಿ ತಮ್ಮ ಎರಡನೇ ಸಭೆಯನ್ನು ನಡೆಸುವ ಸಾಧ್ಯತೆಯಿದೆ, ಸಭೆಯ ವೇಳೆ ಎಲ್ & ಟಿ ಹಿರಿಯ ವಿನ್ಯಾಸಕ ಆರ್.ಎಂ. ವೀರಪ್ಪನ್ ಹಾಜರಿದ್ದು ಸಂಸ್ಥೆಯನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.
”ರಾಮ ದೇವಾಲಯದ ತಾಂತ್ರಿಕ ಮತ್ತು ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಏಜೆನ್ಸಿಯನ್ನು ಆಯ್ಕೆ ಮಾಡುವ ಬಗ್ಗೆ ಅಂತಿಮ ತೀರ್ಮಾನವನ್ನು ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು” ಎಂದು ಚಂಪತ್ ರಾಯ್ ಹೇಳಿದರು.
ಅಯೋಧ್ಯೆಯಲ್ಲಿ 67 ಎಕರೆ ಪ್ರದೇಶದಲ್ಲಿ ರಾಮ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. 270 ಅಡಿ ಉದ್ದದ ಈ ದೇವಾಲಯವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗುವುದು, ಇದು ಪ್ರಮುಖ ವಾಸ್ತುಶಿಲ್ಪ ಪ್ರಕಾರವಾಗಿದ್ದು, ಇದನ್ನು ಉತ್ತರ ಭಾರತದ ವೈಷ್ಣವರು ಅನುಸರಿಸುತ್ತಾರೆ.
“ನಾಗರ ಶೈಲಿಯನ್ನು ಆಯ್ಕೆ ಮಾಡಲಾಗಿದೆ ಏಕೆಂದರೆ ನೆಲಸಮಗೊಂಡ ಹಿಂದಿನ ರಾಮ ಮಂದಿರ ಕೂಡ ಅದೇ ಶೈಲಿಯಲ್ಲಿತ್ತು” ಎಂದು ರಾಮ ಜನ್ಮಭೂಮಿ ನ್ಯಾಸ್ನ ಹಿರಿಯ ಸದಸ್ಯ ಮತ್ತು ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರ ಶಿಷ್ಯರಾದ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.
ಎರಡು ಅಂತಸ್ತಿನ ದೇವಾಲಯದ ವಿನ್ಯಾಸವನ್ನು ಕಲ್ಲಿನ ಚಪ್ಪಡಿಗಳನ್ನು ಬಳಸಿ ನಿರ್ಮಿಸುವ ನಿರೀಕ್ಷೆ ಇದೆ. ಯಾವುದೇ ಸಿಮೆಂಟ್ ಅಥವಾ ಕಬ್ಬಿಣವನ್ನು ಬಳಸಲಾಗುವುದಿಲ್ಲ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.