ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯು ಉಭಯ ದೇಶಗಳ ನಡುವೆ ಹೊಸ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರದ ಬಾಗಿಲನ್ನು ತೆರೆದಿದೆ. ಅಂತಹ ಒಂದು ಬೆಳವಣಿ ಬ್ಲೂ ಡಾಟ್ ನೆಟ್ವರ್ಕ್ ಬಗೆಗಿನ ಚರ್ಚೆ, ಇದು ಉಭಯ ದೇಶಗಳನ್ನು ಹತ್ತಿರಕ್ಕೆ ತಂದಿದೆ ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ.
ಬ್ಲೂ ಡಾಟ್ ನೆಟ್ವರ್ಕ್ (ಬಿಡಿಎನ್) ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಗೆ ಉನ್ನತ-ಗುಣಮಟ್ಟದ, ವಿಶ್ವಾಸಾರ್ಹ ಮಾನದಂಡಗಳನ್ನು ಉತ್ತೇಜಿಸಲು ಸರ್ಕಾರಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಒಟ್ಟುಗೂಡಿಸುವ ಬಹು-ಪಾಲುದಾರರ ಉಪಕ್ರಮವಾಗಿದೆ. ಇದು ನವೆಂಬರ್ 4, 2019ರಂದು ಥೈಲ್ಯಾಂಡಿನ ಬ್ಯಾಂಕಾಕ್ನಲ್ಲಿ ನಡೆದ ಇಂಡೋ-ಪೆಸಿಫಿಕ್ ಉದ್ಯಮ ವೇದಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು.
ಮೂಲಸೌಕರ್ಯ ಹೂಡಿಕೆಗಳಿಗಾಗಿ ಬಿಡಿಎನ್ ಜಾಗತಿಕವಾಗಿ ಮಾನ್ಯತೆ ಪಡೆದ ಸರ್ಟಿಫಿಕೇಟ್ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ವಿಶೇಷ ಒತ್ತು ನೀಡಿ ರಸ್ತೆಗಳು, ಬಂದರುಗಳು ಮತ್ತು ಸೇತುವೆಗಳಿಗೆ ಸರ್ಟಿಫಿಕೇಶನ್ ವ್ಯವಸ್ಥೆಯನ್ನು ರಚಿಸುತ್ತದೆ.
ಬಿಡಿಎನ್ ಜೊತೆಗೆ, ಹೂಡಿಕೆಯ ಪ್ರಮಾಣದಿಂದ ಹೂಡಿಕೆಯ ಗುಣಮಟ್ಟಕ್ಕೆ ಗಮನವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಇದು ಪರಿಸರ ಕಾಳಜಿಗಳು, ಕಾರ್ಮಿಕ ಮಾನದಂಡಗಳು ಮತ್ತು ಮುಖ್ಯವಾಗಿ ಸಾಲದಂತಹ ವಿಷಯಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ.
ಚೀನಾದ ಬಿಆರ್ಐಗಿಂತ ಭಿನ್ನವಾಗಿರುವ ಬ್ಲೂ ಡಾಟ್ ನೆಟ್ವರ್ಕ್ ಮೂಲಸೌಕರ್ಯ ಯೋಜನೆಗಳಿಗೆ ಹೂಡಿಕೆ ಮತ್ತು ಸಾಲವನ್ನು ನೀಡುವುದಿಲ್ಲ. ಇದು ಒಂದು ಸಂಸ್ಥೆಯಾಗಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದ್ದು, ಅದು ಯೋಜನೆಯು ಸುಸ್ಥಿರವಾಗಿದೆಯೇ ಮತ್ತು ಶೋಷಣೆ ಮುಕ್ತವಾಗಿದೆಯೇ ಎಂಬುದನ್ನು ಜನರಿಗೆ ತಿಳಿಸುತ್ತದೆ.
ಬಿಡಿಎನ್ ಉಪಕ್ರಮದ ಭಾಗವಾಗಿ, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಯೋಜನೆಯ ಪ್ರಸ್ತಾಪಗಳು ಇವೆ ಎಂಬುದನ್ನು ಅವಲಂಬಿಸಿ ಮೂಲಸೌಕರ್ಯ ಯೋಜನೆ ಪ್ರಸ್ತಾಪಗಳನ್ನು ನೆಟ್ವರ್ಕ್ ವಿಶ್ಲೇಷಿಸುತ್ತದೆ ಮತ್ತು ಅನುಮೋದಿಸುತ್ತದೆ. ಅಂತಹ ಮಾನದಂಡಗಳಿಗೆ ಅನುಗುಣವಾಗಿರುವ ಯೋಜನೆಗಳಿಗೆ “ಬ್ಲೂ ಡಾಟ್” ಸಿಗುತ್ತದೆ.
ಒಂದು ಅರ್ಥದಲ್ಲಿ, ಇದನ್ನು ಚೈನೀಸ್ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್ ಐ) ಗೆ ನೇರ ಟಕ್ಕರ್ ಆಗಿ ಕಾಣಬಹುದು. ಚೀನಾದ ಬಿಆರ್ ಐ ಶೋಷಣೆಯ ಸಾಲದ ಬಲೆಗೆ ಸಿಕ್ಕಿದೆ ಮತ್ತು ಬ್ಲೂ ಡಾಟ್ ನೆಟ್ವರ್ಕ್ ದೇಶಗಳಿಗೆ ಆ ಸ್ಥಿತಿ ಬರದಂತೆ ನೋಡಿಕೊಳ್ಳಲಾಗುತ್ತದೆ.
ಉಪಖಂಡ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಬಿಆರ್ಐ ಗಂಭೀರ ಕಾಳಜಿಯ ವಿಷಯವಾಗಿ ಪರಿವರ್ತನೆಗೊಂಡಿದೆ. ಚೀನಾದ ಪ್ರಮುಖ ಟ್ರಾನ್ಸ್-ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಯೋಜನೆಯು ಅಭಿವೃದ್ಧಿಯಾಗದ ದೇಶಗಳಿಗೆ ಭಾರಿ ಸಾಲದ ಬಿಕ್ಕಟ್ಟನ್ನು ಉಂಟುಮಾಡಬಹುದು, ಆದರೆ ಇದೆಲ್ಲಾ ಬಿಆರ್ ಐ ಉಪಕ್ರಮದ ಒಂದು ಭಾಗ. ಈ ಬೃಹತ್ ಯೋಜನೆಯ ವೆಚ್ಚ $1 ಟ್ರಿಲಿಯನ್ ಎಂದು ಅಂದಾಜಿಸಲಾಗಿದೆ. ಪ್ರಾದೇಶಿಕ ಪಾಲುದಾರರಿಗೆ ತಮ್ಮ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಈ ಉಪಕ್ರಮವು ಒಂದು ದೊಡ್ಡ ಅವಕಾಶ ಎಂದು ಚೀನಾ ಹೇಳಿಕೊಂಡರೂ, ಬಿಆರ್ಐಗೆ ಸೇರುವವರಿಗೆ ಚೀನಾ ಅನುದಾನವನ್ನು ನೀಡುವುದಿಲ್ಲ, ಆದರೆ ಅದು ವಾಣಿಜ್ಯ ದರದಲ್ಲಿ ಸಾಲವನ್ನು ವಿಸ್ತರಿಸುತ್ತದೆ.
ಲಾವೋಸ್ನ ವಿಷಯವನ್ನೇ ತೆಗೆದುಕೊಂಡರೆ, ಉದಾಹರಣೆಗೆ, ಆ ದೇಶದ ಜಿಡಿಪಿಯ ಅರ್ಧದಷ್ಟು ವೆಚ್ಚ ತಗಲುವ ಹೈಸ್ಪೀಡ್ ರೈಲು ಯೋಜನೆಗೆ ಚೀನಾ ಹಣ ನೀಡುತ್ತಿದೆ. ಆದ್ದರಿಂದ, ಬಿಆರ್ಐ ಶ್ರೀಲಂಕಾದ ಹಂಬಂಟೋಟ ಬಂದರಿನ ಭೀಕರತೆಯನ್ನು ಮರುಶೋಧಿಸುತ್ತದೆ.
ಈಗಾಗಲೇ ಆಸ್ಟ್ರೇಲಿಯಾ ಮತ್ತು ಜಪಾನ್ನ ಬೆಂಬಲವನ್ನು ಹೊಂದಿರುವ ಬ್ಲೂ ಡಾಟ್ ನೆಟ್ವರ್ಕ್ನೊಂದಿಗೆ, ಟ್ರಂಪ್ ಆಡಳಿತವು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚೀನಿಯರೊಂದಿಗೆ ನೇರವಾಗಿ ಸ್ಪರ್ಧಿಸಲು ಪ್ರಯತ್ನಿಸುತ್ತಿಲ್ಲ.
ಚೀನಾದ ಹೂಡಿಕೆಗಳಿಗೆ ಪರ್ಯಾಯವನ್ನು ರಚಿಸಲು ಅಮೆರಿಕಾ ಸಾಲವನ್ನು ನೀಡುವುದಿಲ್ಲ, ಇದು ಕೇವಲ ಭೌತಿಕ ಮೂಲಸೌಕರ್ಯದಲ್ಲಿನ ಹೂಡಿಕೆಗಳ ಗುಣಮಟ್ಟವನ್ನು ನಿರ್ಧರಿಸಲು ಕಾರ್ಯ ವೇದಿಕೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಚೀನಾ ಈ ವಿಷಯದಲ್ಲೇ ಮುಗ್ಗರಿಸಿದೆ.
ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿನ ಅಭಿವೃದ್ಧಿ ಹೊಂದುತ್ತಿರುವ ಅಥವಾ ಕಡಿಮೆ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳನ್ನು ಸಾಲದ ಬಲೆಗೆ ಬೀಳಿಸಲು ಬೀಜಿಂಗ್ ಅವಕಾಶವನ್ನು ನೋಡುತ್ತಿದೆ. ಇದಕ್ಕಾಗಿಯೇ ಅದರ ಬಿಆರ್ಐ ಹೂಡಿಕೆಗಳು ಈಗಾಗಲೇ $1 ಟ್ರಿಲಿಯನ್ ಮೊತ್ತವನ್ನು ತಲುಪಿವೆ, ಆದರೆ ಬಿಡಿಎನ್ ಆ ಎಲ್ಲಾ ಆರ್ಥಿಕತೆಗಳನ್ನು ಚೀನಾದಿಂದ ದೂರ ಸೆಳೆಯಬಲ್ಲದು.
ಚೀನಾದ ಬಿಆರ್ಐ ಟ್ರಂಪ್ ಆಡಳಿತದ ನೇರ ಟೀಕೆಗೆ ಗುರಿಯಾಗಿದೆ. ಅಮೆರಿಕಾ ಉಪ ಅಧ್ಯಕ್ಷ ಮೈಕ್ ಪೆನ್ಸ್ ಅವರು 2018 ರಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ (ಎಪಿಇಸಿ) ಬೀಜಿಂಗ್ನಿಂದ ಸಾಲ ಪಡೆಯುವುದರ ವಿರುದ್ಧ ಏಷ್ಯಾದ ಆರ್ಥಿಕತೆಗಳಿಗೆ ನೇರವಾಗಿ ಎಚ್ಚರಿಕೆ ನೀಡಿದ್ದರು.
“ಚೀನಾ ಬೆಂಬಲಿಸುವ ಯೋಜನೆಗಳು ಸಾಮಾನ್ಯವಾಗಿ ಸಮರ್ಥನೀಯವಲ್ಲ ಮತ್ತು ಕಳಪೆ ಗುಣಮಟ್ಟದ್ದಾಗಿರುತ್ತವೆ” ಎಂದು ಅವರು ಹೇಳಿದ್ದಾರೆ.
ಈಗ, ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿ ಮತ್ತು ಇಬ್ಬರು ನಾಯಕರ ನಡುವಿನ ಸಂಭಾಷಣೆಯ ನಂತರ ಶ್ವೇತಭವನವು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಪ್ರಕಾರ, “ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಬ್ಲೂ ಡಾಟ್ ನೆಟ್ವರ್ಕ್ ಪರಿಕಲ್ಪನೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.”
ವಾಸ್ತವವಾಗಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಭಾರತವನ್ನು ಬ್ಲೂ ಡಾಟ್ ನೆಟ್ವರ್ಕ್ಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮೂರು ದೇಶಗಳಿಗೆ ಸೇರ್ಪಡೆಗೊಳ್ಳುವಂತೆಗಿ ಒತ್ತಾಯಿಸಿದ್ದಾರೆ. ಅವರು “ಕ್ವಾಡ್” ಅನ್ನು ಉಲ್ಲೇಖಿಸಿದ್ದಾರೆ, ಅಂದರೆ Quadrilateral Security Dialogue-ಯುನೈಟೆಡ್ ಸ್ಟೇಟ್ಸ್, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಅನೌಪಚಾರಿಕ ಕಾರ್ಯತಂತ್ರದ ಸಂವಾದ ಇದಾಗಿದೆ. ಜೊತೆಗೆ ಬ್ಲೂ ಡಾಟ್ ನೆಟ್ವರ್ಕ್ ಅನ್ನು ಕೂಡ ಉಲ್ಲೇಖಿಸಿದ್ದಾರೆ.
ಡ್ರ್ಯಾಗನ್ ದೇಶ ಚೀನಾದ ಬಿಆರ್ಐ ಅನ್ನು ಎದುರಿಸುವ ಹೊರತಾಗಿಯೂ, ನವದೆಹಲಿಯನ್ನು ಬಿಡಿಎನ್ಗೆ ಸೇರಲು ಮನವೊಲಿಸುವ ಮೂಲಕ ಕ್ವಾಡ್ ಅನ್ನು ಪುನರುಜ್ಜೀವನಗೊಳಿಸುವ ಅವಕಾಶವನ್ನು ಯುಎಸ್ ಎದುರು ನೋಡುತ್ತಿದೆ.
ಬಿಆರ್ಐ ಮೂಲಕ ಚೀನಾದ ಪ್ರಾದೇಶಿಕ ಪ್ರಾಬಲ್ಯವನ್ನು ನಿಭಾಯಿಸುವುದು ಭಾರತದ ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರಬೇಕು. ಹಿಮಾಲಯನ್ ದೇಶವಾದ ನೇಪಾಳದಲ್ಲಿನ ಟ್ರಾನ್ಸ್-ಹಿಮಾಲಯನ್ ರೈಲು ಮಾರ್ಗ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಹಣ ಸಹಾಯ ಮಾಡುವ ಮೂಲಕ ಈ ಪ್ರದೇಶದಲ್ಲಿ ಭಾರತದ ಪ್ರಭಾವವನ್ನು ಬಿಆರ್ಐ ಪ್ರಶ್ನಿಸುತ್ತಿದೆ, ಇದು ಕಠ್ಮಂಡುವಿನಲ್ಲಿ ಸಾಲದ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ತೀವ್ರವಾದ ಸಾಲದ ಬಿಕ್ಕಟ್ಟಿನಿಂದಾಗಿ ನೇಪಾಳದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು ಈ ಪ್ರದೇಶದ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲ್ಗಿಟ್ ಮತ್ತು ಬಲ್ಟಿಸ್ತಾನ್ ಮೂಲಕವೂ ಬಿಆರ್ಐ ಹಾದು ಹೋಗುತ್ತದೆ, ಹೀಗಾಗಿಯೇ ಭಾರತವು ಬಿಆರ್ಐ ಅನ್ನು ಭಾರತದ ಭೌಗೋಳಿಕ ರಾಜಕೀಯ ಗುರಿಗಳು ಮತ್ತು ನ್ಯಾಯಸಮ್ಮತ ಪ್ರಾದೇಶಿಕ ಹಕ್ಕುಗಳ ವಿರುದ್ಧದ ಪಿತೂರಿಯ ವಿಷಯವಾಗಿ ನೋಡುತ್ತದೆ. ಪಾಕಿಸ್ಥಾನದ ಸಾಲದ ಬಿಕ್ಕಟ್ಟು ಮತ್ತು ಪಿಒಕೆಯಲ್ಲಿ ಚೀನಾದ ಹೂಡಿಕೆಗಳು ಈ ಪ್ರದೇಶದಲ್ಲಿ ನ್ಯಾಯಸಮ್ಮತವಲ್ಲದ ಪ್ರಭಾವ ಮತ್ತು ಹಿತಾಸಕ್ತಿಗಳನ್ನು ಪಡೆದುಕೊಳ್ಳುತ್ತವೆ.
ಹೀಗಾಗಿ ಬಿಡಿಎನ್ ಭಾರತ ಮತ್ತು ಅಮೆರಿಕಾ ಎರಡಕ್ಕೂ ಭರವಸೆಯನ್ನು ನೀಡುತ್ತದೆ. ಅನೇಕ ದೇಶಗಳು ಚೀನಾದ “ಸಾಲದ ಬಲೆ” ರಾಜತಾಂತ್ರಿಕತೆಯ ವಿರುದ್ಧ ಕಳವಳ ವ್ಯಕ್ತಪಡಿಸಿವೆ. ಆದ್ದರಿಂದ, ಬಿಡಿಎನ್ ಪ್ರಪಂಚದಾದ್ಯಂತದ ದೇಶಗಳ ಬೆಂಬಲವನ್ನು ಪಡೆಯಬಲ್ಲದು. ಅಧ್ಯಕ್ಷ ಟ್ರಂಪ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಭೇಟಿಯಲ್ಲಿ ಬಿಡಿಎನ್ಗೆ ಭಾರತದ ಬೆಂಬಲವನ್ನು ಪಡೆಯಲು ಬಹುತೇಕ ಸಫಲರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.