ಬೆಂಗಳೂರು : ಪಾಕಿಸ್ಥಾನದ ಪರ ಘೋಷಣೆಯನ್ನು ಕೂಗಿ ದೇಶದ್ರೋಹದ ಆರೋಪವನ್ನು ಎದುರಿಸುತ್ತಿರುವ ಯುವತಿ ಅಮೂಲ್ಯ ಲಿಯೋನಾಳ ವಿರುದ್ಧ ಸ್ವತಃ ಆಕೆಯ ತಂದೆಯೇ ಕಿಡಿಕಾರಿದ್ದಾರೆ. “ಆಕೆ ಹೇಳಿದ್ದು ತಪ್ಪು, ನಾವು ಆಕೆಗೆ ಜಾಮೀನು ದೊರಕಿಸಿಕೊಡುವ ಪ್ರಯತ್ನ ಮಾಡುವುದಿಲ್ಲ” ಎಂದು ಆಕೆಯ ತಂದೆ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ‘ಪಾಕಿಸ್ಥಾನ್ ಜಿಂದಾಬಾದ್’ ಎಂದು ಘೋಷಣೆಯನ್ನು ಕೂಗಿ ದೊಡ್ಡ ಮಟ್ಟದ ವಿವಾದವನ್ನು ಸೃಷ್ಟಿಸಿದ್ದಾಳೆ. ಇದೀಗ ಆಕೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದ್ದು, 14 ತಿಂಗಳುಗಳ ಕಾಲ ಆಕೆಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕೆಯ ತಂದೆ ವಾಜಿ (ಓಸ್ವಲ್ಡ್ ನರೋನ್ಹ), “ಅಮೂಲ್ಯ ಹೇಳಿದ್ದು ತಪ್ಪು. ಆಕೆ ಕೆಲವು ಮುಸ್ಲಿಮರೊಂದಿಗೆ ಸೇರಿ ಈ ರೀತಿ ಮಾಡುತ್ತಿದ್ದಾಳೆ, ನನ್ನ ಮಾತನ್ನು ಆಕೆ ಕೇಳುತ್ತಿಲ್ಲ” ಎಂದಿದ್ದಾರೆ.
ಅಲ್ಲದೇ ”ಕಳೆದ ಐದು ದಿನದಿಂದ ಆಕೆ ನನ್ನ ಸಂಪರ್ಕದಲ್ಲೇ ಇಲ್ಲ, ನಾವು ಆಕೆಗೆ ಜಾಮೀನು ನೀಡುವ ಪ್ರಯತ್ನ ಮಾಡುವುದಿಲ್ಲ, ಆಕೆ ಜೈಲಲ್ಲೇ ಇರಲಿ” ಎಂದಿದ್ದಾರೆ.
”ನನಗೆ ಆರೋಗ್ಯ ಸಮಸ್ಯೆ ಇದೆ ಆಸ್ಪತ್ರೆಗೆ ಹೋಗಬೇಕು, ಬೆಂಗಳೂರಿನಿಂದ ಬಾ ಅಂತ ಆಕೆಯ ಬಳಿ ಕೇಳಿಕೊಂಡಿದ್ದೆ. ಆದರೆ ಅವಳು ನೀನು ನಿನ್ನ ಜವಾಬ್ದಾರಿ ಅಲ್ಲ, ನಾನು ಬರುವುದಿಲ್ಲ ಅಂದು ಬಿಟ್ಟಳು. ಆಮೇಲೆ ಆಕೆಯನ್ನು ನಾನು ಸಂಪರ್ಕಿಸಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.