1990 ರ ಜನವರಿ 19 ರ ರಾತ್ರಿಯಲ್ಲಿ ಕಾಶ್ಮೀರಿ ಕಣಿವೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ “ಕಾಶ್ಮೀರ ಪಂಡಿತರನ್ನು ಮುಸಲ್ಮಾನರಾಗಿ ಇಲ್ಲವಾದಲ್ಲಿ ಈ ಕೂಡಲೇ ಈ ಜಾಗ ಖಾಲಿ ಮಾಡಿ! ನಿಮ್ಮ ಹೆಂಡತಿ ಮತ್ತು ಹೆಣ್ಣು ಮಕ್ಕಳನ್ನು ಬಿಟ್ಟು ತೆರಳಿ! ಇಲ್ಲವಾದಲ್ಲಿ ಕೊಲ್ಲಲ್ಪಡುತ್ತೀರಾ ಎಂದು ಮಸೀದಿಗಳಿಂದ ಘೋಷಣೆಗಳು ಕೂಗುವುದರೊಂದಿಗೆ ಆರಂಭವಾದ ಭೀಕರತೆ ಹೆಣ್ಣು ಮಕ್ಕಳು ಪುಟ್ಟ ಮಕ್ಕಳು ಎಂದು ನೋಡದೆ ಬಲಾತ್ಕಾರ ನಡೆಸಲಾಗುತ್ತದೆ ಕೊಚ್ಚಿ ಕೊಲೆ ಮಾಡಲಾಗುತ್ತದೆ! ಅಲ್ಲಿ ನಡೆದ ಕ್ರೂರತೆ ನೋಡಿಯೇ ಹಲವರ ಜೀವ ಹಾರಿಹೋಗಿರಬಹುದೇನೋ… ಕಾಶ್ಮೀರ ಪಂಡಿತರ ಎಲ್ಲಾ ಮನೆಗಳಿಗೂ ಬೆಂಕಿ ಇಡಲಾಯಿತು!! ಕಾಶ್ಮೀರ ಮುಸಲ್ಮಾನರ ಕ್ರೂರ ಮುಖ ನೋಡಿದ ಸುಮಾರು 4 ಲಕ್ಷ ಕಾಶ್ಮೀರಿ ಪಂಡಿತರು ತಮ್ಮ ಜೀವ ಉಳಿಸಿಕೊಳ್ಳಲು ಜಮ್ಮು ಸೇರಿದಂತೆ ದೇಶದ ಹಲವು ಭಾಗಗಳಿಗೆ ಉಟ್ಟಬಟ್ಟೆಯಲ್ಲೇ ತೆರಳಿದ್ದು ನಮ್ಮ ದೇಶದ ಇತಿಹಾಸದಲ್ಲಿ ನಡೆದಿರುವ ಒಂದು ಭೀಕರ ಘಟನೆ!!!
ಇಂತಾ ಘಟನೆಯನ್ನು ಅಲ್ಲಿಗೆ ಮುಚ್ಚಿ ಹಾಕಿದ ನಮ್ಮ ದೇಶದ ರಾಜಕೀಯ ವ್ಯವಸ್ಥೆಯಿಂದಾಗಿ ಕಾಶ್ಮೀರ ಪಂಡಿತರು ಇಂದಿಗೂ 30 ವರ್ಷಗಳ ನಂತರವೂ ಬೀದಿ ಬೀದಿಗಳಲ್ಲಿ ತಮ್ಮ ಜೀವನವನ್ನು ನಿರಾಶ್ರಿತರಂತೆ ಸಾಗಿಸುತ್ತಿದ್ದರೂ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವವರಿಲ್ಲ! ಅವರಿಗೆ ನ್ಯಾಯ ಒದಗಿಸುವವರಿಲ್ಲ!!
ಹೀಗಿರುವಾಗ ಈ ಹಿಂದೆ PK ಎಂಬ ಸಿನಿಮಾ ಮಾಡಿ ಅದರಲ್ಲಿ ಹಿಂದೂ ದೇವರುಗಳನ್ನು ಕಾಮಿಡಿ ಪೀಸ್ಗಳಂತೆ ತೋರಿಸಿ ದುಡ್ಡು ಮಾಡಿದ್ದ ಜೊತೆಗೆ ಸಂಜಯ್ ದತ್ನ ಜೀವನ ಕಥೆ ಎಂದು ಸುಳ್ಳು ಕಥೆ ತೋರಿಸಿ ಆತನ ಡ್ರಗ್, ಹುಡುಗಿಯರ ಶೋಕಿ, AK 47 ಎಲ್ಲವನ್ನೂ ವೈಭವೀಕರಿಸಿ ತೋರಿಸಿ ಆತ ಅಮಾಯಕ ಎಂದೆಲ್ಲಾ ಬಿಂಬಿಸುವ ಪ್ರಯತ್ನ ಮಾಡಿದ್ದ ವಿದು ವಿನೋದ್ ಚೋಪ್ರಾ ಕಾಶ್ಮೀರ ಪಂಡಿತರ untold story ಎಂಬ ಒಕ್ಕಣೆಯೊಂದಿಗೆ “Shikara” ಎಂಬ ಸಿನಿಮಾವನ್ನು ತೆರೆಗೆ ತರುತ್ತಾರೆ!!
ಇಷ್ಟು ದಿನ ಕಾಶ್ಮೀರ ಪಂಡಿತರಿಗಾದ ಅನ್ಯಾಯದ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಯಾರೂ ಮಾಡಿರಲಿಲ್ಲ. ಈಗಲಾದರೂ ಮಾಡಿದರಲ್ಲಾ ಎಂಬ ಸಮಾಧಾನದೊಂದಿಗೆ ಸಿನಿಮಾ ನೋಡಲು ಹೋದವರಿಗೆ ಗಾಯದ ಮೇಲೆ ಉಪ್ಪು ಹುಳಿ ಖಾರ ಹಿಂಡಿದ ಅನುಭವವಾಗಿದ್ದು ಮಾತ್ರ ಸುಳ್ಳಲ್ಲ!!
ಸಿನಿಮಾ ಟ್ರೈಲರ್ನ ಮೂಲಕ ಇಬ್ಬರು ಕಾಶ್ಮೀರಿ ಪಂಡಿತ ಪ್ರೇಮಿಗಳ ಮೂಲಕ ವಸ್ತುಸ್ಥಿತಿಯನ್ನು ತೋರಿಸುತ್ತಿರುವಂತೆ ಜನರ ಮುಂದಿಟ್ಟ ವಿದು ವಿನೋದ್ ಚೋಪ್ರಾ ಸಿನಿಮಾದಲ್ಲಿ ತೋರಿಸಿದ ಕಥೆಯೇ ಬೇರೆ!! ಸಿನಿಮಾದಲ್ಲಿ ಲತೀಫ್ ಎಂಬ ವ್ಯಕ್ತಿ ಆರತಿ ಎಂಬವಳನ್ನು ಪ್ರೀತಿ ಮಾಡುತ್ತಿರುತ್ತಾನೆ. ಆತ ದೇವತಾ ಮನುಷ್ಯ ಎಂಬಷ್ಟು ಒಳ್ಳೆಯವನಾಗಿರುತ್ತಾನೆ! ಆದರೆ ಭಾರತೀಯ ಮಿಲಿಟರಿ ಮತ್ತು ಪೋಲಿಸ್ ಕಾಶ್ಮೀರಿ ಮುಸಲ್ಮಾನರ ಮೇಲೆ ಲಾಟಿಚಾರ್ಜು ಇತ್ಯಾದಿ ರೂಪದಲ್ಲಿ ದೌರ್ಜನ್ಯ ನಡೆಸುತ್ತನೇ ಇರುತ್ತದೆ..!! ಅಂತಾ ದೌರ್ಜನ್ಯದಲ್ಲಿ ಲತೀಫ್ನ ತಂದೆಯ ಸಾವಾಗುತ್ತದೆ! ಇದರಿಂದಾಗಿ ದೇವತಾಮನುಷ್ಯನಂತಿದ್ದವನು ಟೆರರಿಸ್ಟ್ ಆಗಿ ಬದಲಾಗುತ್ತಾನೆ ! ಈ ಟೆರರಿಸ್ಟ್ ಆಗುವವರಿಗೆ ಪಾಕಿಸ್ತಾನ ಟ್ರೈನಿಂಗ್ ನೀಡುತ್ತದೆ ಜೊತೆಗೆ ಅಮೇರಿಕಾ ಗನ್ಗಳನ್ನು ನೀಡಿ ಪ್ರೋತ್ಸಾಹ ನೀಡುತ್ತದೆ!!
ಆದ್ದರಿಂದ ಕಾಶ್ಮೀರಿ ಪಂಡಿತರ ನರಸಂಹಾರ ಮತ್ತು ಅವರನ್ನು ಓಡಿಸಿದ ಪೂರ್ಣ ಶ್ರೇಯ ಕಾಶ್ಮೀರದಲ್ಲಿ ದೇಶವಿರೋಧಿ ಚಟುವಟಿಕೆ ನಡೆಸುತ್ತಿದ್ದ ಕೆಲವು ಸಂಘಟನೆ, ಪಾಕಿಸ್ತಾನ ಮತ್ತು ಮದ್ದುಗುಂಡುಗಳನ್ನು supply ಮಾಡುತ್ತಿದ್ದ ಅಮೇರಿಕಾವೇ ಕಾರಣ ಹೊರತು ಕಾಶ್ಮೀರ ಕಣಿವೆಯಲ್ಲಿನ ಮುಸಲ್ಮಾನರ ಕೈವಾಡ ಏನೇನೂ ಇಲ್ಲ!! ಎಷ್ಟರ ಮಟ್ಟಿಗೆ ಅಲ್ಲಿನವರು ಒಳ್ಳೆಯವರೆಂದರೆ ಕಾಶ್ಮೀರ ಪಂಡಿತರನ್ನು ರಕ್ಷಿಸಲು ಅವರು ಬಹಳಷ್ಟು ಸಹಾಯ ಮಾಡಿದ್ದಾರೆ! ತಂದೆಯನ್ನು ಭಾರತೀಯ ಮಿಲಿಟರಿ ಕೊಂದಿದ್ದಕ್ಕಾಗಿ ಟೆರರಿಸ್ಟ್ ಆಗಿ ಬದಲಾದ ಲತೀಫ್ ಆ ನಂತರವೂ ತನ್ನ ಸ್ನೇಹಿತನ ಲವ್ ಸ್ಟೋರಿ ಮತ್ತು ಆತನ ಮನೆಯವರು ಜಾಗ ಖಾಲಿ ಮಾಡಿ ಜೀವ ಉಳಿಸಿಕೊಳ್ಳಲು ಸಹಾಯ ಮಾಡುತ್ತಾನೆ ಜೊತೆಗೆ ತಾನು ಪ್ರೀತಿಸುತ್ತಿದ್ದ ಆರತಿಯ ಮನೆಯವರೆಲ್ಲರ ಕೊಲೆಗೆ ಕ್ಷಮೆ ಕೇಳುತ್ತಾನೆ!! ಹಾಗೆಯೇ ಭಾರತೀಯ ಮಿಲಿಟರಿಗೆ ಈ ಗನ್ನ ಹೋರಾಟದಿಂದ ಏನೂ ಲಾಭವಿಲ್ಲ ನೀವು ನನ್ನ ತಂದೆಯನ್ನು ಕೊಂದಿರಿ ನಾನು ನಿಮ್ಮವರನ್ನು ಕೊಂದೆ ಆದರೆ ನಮ್ಮ ಕೈಗೆ ಗನ್ ನೀಡಿದವರು ಆರಾಮವಾಗಿದ್ದಾರೆ ಎಂದೆಲ್ಲಾ ಟೆರರಿಸ್ಟ್ ಲತೀಫ್ ಉಪದೇಶವನ್ನೂ ನೀಡುತ್ತಾನೆ!!!!
ಇದೆಲ್ಲದರ ನಡುವೆ ವಿದು ವಿನೋದ್ ಚೋಪ್ರಾ ಸಣ್ಣಮಕ್ಕಳು “ಮಂದಿರ್ ವಹೀ ಬನಾಯೆಂಗೇ!” ಘೋಷಣೆ ಕೂಗಿಸುತ್ತಾನೆ! ಆಗ ಮಕ್ಕಳಿಗೆ ಇಂತಾ ತೀವ್ರವಾದ ಒಳ್ಳೆಯದಲ್ಲ ಎಂಬ ಉಪದೇಶ ನೀಡುವುದನ್ನೂ ನಾವು ಈ ಸಿನಿಮಾದಲ್ಲಿ ಕಾಣಬಹುದು!!!
ಇನ್ನೊಂದು ವಿಚಿತ್ರವೆಂದರೆ ಸಿನಿಮಾದಲ್ಲಿನ ಕಾಶ್ಮೀರ ಪಂಡಿತ ಪ್ರೇಮಿ ಈ ಕಾಶ್ಮೀರಿ ಪಂಡಿತರ ನರಸಂಹಾರಕ್ಕೆ ಮೂಲ ಕಾರಣ ಅಮೇರಿಕಾ ಎಂದು ಹೇಳುತ್ತಾ ಅಮೇರಿಕಾ ಅಧ್ಯಕ್ಷರಿಗೆ ಕಾಶ್ಮೀರಿ ಪಂಡಿತರು ಇಂದಿಗೂ ನಿರಾಶ್ರಿತರಾಗಿ ಇದ್ದಾರೆ ಎಂದೆಲ್ಲಾ ನಿರಂತರವಾಗಿ ಪತ್ರ ಬರೆಯುವುದು!!
ಇದು ವಿದುವಿನೋದ್ ಚೋಪ್ರಾರವರ untold story of Kashmir pandit…!!!!
ಒಟ್ಟಾರೆಯಾಗಿ ಈ ಸಿನಿಮಾ ಜನರಿಗೆ ಹೇಳಲು ಹೊರಟಿರುವುದು ಏನೆಂದರೆ ಕಾಶ್ಮೀರ ಪಂಡಿತರ ಇಂದಿನ ಸ್ಥಿತಿಗೆ ಕಾರಣ ಅಮೇರಿಕಾ, ಪಾಕಿಸ್ತಾನ ಮತ್ತು ಕೆಲವು ಉಗ್ರವಾದಿ mind set ನವರು ಕಾರಣ ಹೊರತು ಕಾಶ್ಮೀರದ ಮುಸಲ್ಮಾನರಲ್ಲ!! ಹಾಗೆಯೇ ಉಗ್ರವಾದಿ ಮನೋಭಾವ ಹುಟ್ಟಿಕೊಳ್ಳಲು ಕಾರಣ ಭಾರತೀಯ ಪಡೆಗಳ ದೌರ್ಜನ್ಯ!!! ಆನಂತರ ಹಲವು ಸರಕಾರಗಳು ಬಂದರೂ ಕಾಶ್ಮೀರ ಪಂಡಿತರ ನಿರಾಶ್ರಿತ ಬದುಕಿಗೆ ಸಹಾಯ ಮಾಡಿದವರು ಯಾರೂ ಇಲ್ಲ!! ಈಗಿನ ಪರಿಸ್ಥಿತಿಯಲ್ಲಿ ಹಿಂದೆ ಏನಾಗಿತ್ತು ಎಂಬ ಬಗ್ಗೆ ಯೋಚಿಸುವ ಬದಲು ಕಾಶ್ಮೀರಿ ಪಂಡಿತರಿಗೆ ವ್ಯವಸ್ಥೆ ಮಾಡುವುದೇ ಮುಖ್ಯ !!!!
ನಿಜಕ್ಕೂ ವಿದುವಿನೋದ್ ಚೋಪ್ರಾನಂತವರ ಮನಸ್ಥಿತಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ!! ಕಾಶ್ಮೀರಿ ಪಂಡಿತರ ಬಗ್ಗೆ ಸಿನಿಮಾ ಎಂದು ಪ್ರಚಾರ ಮಾಡಿ ಜನರನ್ನು ಸೆಳೆದು ದುಡ್ಡು ಮಾಡುವುದರೊಂದಿಗೆ 1990 ರ ಘಟನೆಗೆ ಒಂದು clean chit ನೀಡುವ ಈತನಷ್ಟು ದೊಡ್ಡ ದೇಶದ್ರೋಹಿ ಇನ್ನೊಬ್ಬನಿಲ್ಲವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಇಂತಹ ಸಿನಿಮಾಗಳಿಗೆ ನಮ್ಮ ದೇಶದ Censor ಮಂಡಳಿ ಒಪ್ಪಿಗೆ ನೀಡುತ್ತಿದೆಯಲ್ಲಾ ಎಂಬ ದುಃಖವೂ ಕಾಡುತ್ತಿದೆ.
✍ ರಾಮಕಿಶೋರ್ ಶಾಸ್ತ್ರಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.