2016ರಲ್ಲಿ, ಉತ್ತರ ಕೇರಳದ ಕಣ್ಣೂರಿನ ಕನಕಮಲದಲ್ಲಿ ನಡೆದ ರಹಸ್ಯ ಸಭೆಯ ವಿವರವನ್ನು ಬೇಧಿಸಿದಾಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಆಘಾತಕ್ಕೊಳಗಾಗಿತ್ತು. ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನಿಂದ ಪ್ರೇರಿತರಾಗಿ, ಯುವಕರ ಗುಂಪು ದೇಶದ ವಿರುದ್ಧ ಯುದ್ಧ ಮಾಡಲು ಮತ್ತು ವಿವಿಧ ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡಲು ‘ಅಲ್ ಜರುಲ್ ಖಲ್ಲೆಫಾ’ ಎಂಬ ಸಾಮೂಹಿಕ ರಚನೆಯನ್ನು ಅಲ್ಲಿ ಮಾಡಿಕೊಳ್ಳಲಾಗಿತ್ತು.
ಎನ್ಐಎ ಇದನ್ನು ಕೇರಳದ ಮೊದಲ ಐಎಸ್ ಮಾಡ್ಯೂಲ್ ಎಂದು ಹೆಸರಿಸಿದೆ. ಬಂಧನಕ್ಕೊಳಗಾದವರಲ್ಲಿ ಕೆಲವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರಾಗಿದ್ದಾರೆ ಎಂದು ಕೇಂದ್ರ ಸಂಸ್ಥೆ ನಂತರ ಕಂಡುಹಿಡಿದಿದೆ. ಇದಾದ ಒಂದೆರಡು ತಿಂಗಳ ನಂತರ, ಉತ್ತರ ಕೇರಳ ಗ್ರಾಮದಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ನಾಪತ್ತೆಯಾಗಿದ್ದಾರೆ. ಗುಪ್ತಚರ ಅಧಿಕಾರಿಗಳು, ಇವರುಗಳು ಅಫ್ಘಾನಿಸ್ಥಾನದಲ್ಲಿ ಐಎಸ್ಐ ಸೇರಿದ್ದಾರೆಂದು ನಂಬಿದ್ದಾರೆ.
ದೇಶದಲ್ಲಿ ನಡೆಯುವ ಪ್ರತಿಯೊಂದು ಕೋಮು ಗಲಭೆ ಅಥವಾ ಭಯೋತ್ಪಾದಕ ಮಾದರಿ ಬಹಿರಂಗಗೊಂಡ ಬಳಿಕ ಸಾಮಾನ್ಯ ಎಂಬಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರು ಕೇಳಿ ಬರುತ್ತದೆ. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರದ ನಂತರ ಈ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಗುಪ್ತಚರ ಈ ಬಗ್ಗೆ ಕಣ್ಗಾವಲು ಇರಿಸಿದೆ. ಮುಸ್ಲಿಂ ಯುವಕರನ್ನು ತೀವ್ರಗಾಮಿಗಳಾಗಿ ಈ ಸಂಘಟನೆ ರೂಪಿಸುತ್ತಿದೆ ಮತ್ತು ಕೆಲವು ರಾಷ್ಟ್ರ ವಿರೋಧಿ ಸಂಸ್ಥೆಗಳೊಂದಿಗೆ ಸ್ಥಿರವಾದ ಸಂಬಂಧವನ್ನು ಇದು ಹೊಂದಿದೆ ಎಂದು ಆಗಾಗ್ಗೆ ಆರೋಪಿಸಲ್ಪಡುವ ಪಿಎಫ್ಐ ನಿಷೇಧದ ಬೇಡಿಕೆ ಈಗ ಜೋರಾಗಿ ಬರುತ್ತಿದೆ.
ಆದರೆ ಈ ಸಂಘಟನೆ ಹೇಗೆ ಹುಟ್ಟಿಕೊಂಡಿತು? ಮತ್ತು ಅಲ್ಪಾವಧಿಯಲ್ಲಿ ಅದು ದೇಶವ್ಯಾಪಿ ಉಪಸ್ಥಿತಿಯನ್ನು ಸಾಧಿಸಿದ ಹಿಂದಿನ ಕಾರಣವೇನು? 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಮೂರು ಮುಸ್ಲಿಂ ಸಂಘಟನೆಗಳನ್ನು ವಿಲೀನಗೊಳಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು 2006 ರಲ್ಲಿ ಪ್ರಾರಂಭಿಸಲಾಯಿತು. ಕೇರಳದ ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್, ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮಣಿತಾ ನೀತಿ ಪಸಾರಿ ಈ ಮೂರು ಸಂಘಟನೆಗಳಾಗಿವೆ. ಬಾಬ್ರಿ ಮಸೀದಿಯನ್ನು ಧ್ವಂಸಪಡಿಸಿದ ನಂತರ, ದಕ್ಷಿಣ ಭಾರತದಲ್ಲಿ ಅನೇಕ ಫ್ರಿಂಜ್ ಔಟ್ಫಿಟ್ಗಳು ಕಾಣಿಸಿಕೊಂಡವು ಮತ್ತು ಅವುಗಳಲ್ಲಿ ಕೆಲವು ವಿಲೀನಗೊಂಡ ನಂತರ ಪಿಎಫ್ಐ ರಚನೆಯಾಯಿತು.
ಈಗ ಪಿಎಫ್ಐ 22 ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ಇದರ ಬೆಳವಣಿಗೆ ಅಸಾಧಾರಣವಾಗಿದೆ, ಗುಪ್ತಚರ ಸಂಸ್ಥೆಗಳು ಕೂಡ ಇದನ್ನು ಒಪ್ಪಿಕೊಂಡಿದೆ, ಇದು ಮುಸ್ಲಿಂ ಸಮುದಾಯದಲ್ಲಿ ಬೆಳೆಯುತ್ತಿರುವ ಸಮಸ್ಯೆಯನ್ನು ಯಶಸ್ವಿಯಾಗಿ ಬಳಸಿಕೊಂಡು ತಾನು ಸಂರಕ್ಷಕ ಎಂದು ಫೋಸ್ ಕೊಡುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಶ್ರೀಮಂತ ಮಧ್ಯಪ್ರಾಚ್ಯ ದೇಶಗಳಿಂದ ಪಿಎಫ್ಐಗೆ ಹಣವನ್ನು ಸಂಗ್ರಹಿಸಲು ಯಶಸ್ವಿಯಾಗುತ್ತಿದೆ. ಪಿಎಫ್ಐನ ಹಿಂದಿನ ಪ್ರಧಾನ ಕಚೇರಿ ಕೋಝಿಕೊಡೆಯಲ್ಲಿತ್ತು, ಆದರೆ ಅದರ ನೆಲೆಯನ್ನು ವಿಸ್ತರಿಸಿದ ನಂತರ ಅದನ್ನು ದೆಹಲಿಗೆ ಸ್ಥಳಾಂತರಿಸಲಾಯಿತು. ಪಿಎಫ್ಐನ ರಾಜ್ಯ ಅಧ್ಯಕ್ಷ ನಸರುದ್ದೀನ್ ಎಲಮಾರೊಮ್ ಇದರ ಸ್ಥಾಪಕರಲ್ಲಿ ಒಬ್ಬ ಮತ್ತು ಅದರ ಆಲ್ ಇಂಡಿಯಾ ಅಧ್ಯಕ್ಷ ಇ ಅಬೂಬಕರ್ ಕೂಡ ಕೇರಳ ಮೂಲದವರು.
ಕೇರಳದಲ್ಲಿ, ಅದರ ಹಿಂದಿನ ನಾಯಕರಲ್ಲಿ ಹೆಚ್ಚಿನವರು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಯ ಸದಸ್ಯರಾಗಿದ್ದರು. ಪಿಎಫ್ಐ ತನ್ನನ್ನು ತಾನು ಅಲ್ಪಸಂಖ್ಯಾತ ಸಮುದಾಯಗಳು, ದಲಿತರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸೇರಿದ ಜನರನ್ನು ಸಬಲೀಕರಣಗೊಳಿಸಲು ಬದ್ಧವಾಗಿರುವ ನವ-ಸಾಮಾಜಿಕ ಚಳುವಳಿ ಎಂದು ವಿವರಿಸುತ್ತದೆ. ಕೇರಳದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ ಕೋಯಾ ಅವರನ್ನು ಈ ಸಂಘಟನೆಯ ಅತಿ ಎತ್ತರದ ನಾಯಕ ಎಂದು ಪರಿಗಣಿಸಲಾಗಿದೆ.
ಪಿಎಫ್ಐ ತನ್ನದೇ ಆದ ಸಮವಸ್ತ್ರವನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಡ್ರಿಲ್ಗಳನ್ನು ನಡೆಸುತ್ತದೆ. 2013 ರಲ್ಲಿ, ಕೇರಳ ಸರ್ಕಾರವು ಅದರ ಸ್ವಾತಂತ್ಸೋತ್ಸವದ ಪರೇಡ್ ಅನ್ನು ನಿಷೇಧಿಸಿತ್ತು, ಅದರ ಕಾರ್ಯಕರ್ತರು ಸಮವಸ್ತ್ರದಲ್ಲಿ ಸ್ಟಾರ್ ಮತ್ತು ಎಬ್ಲಂಮ್ಗನ್ನು ಹೊಂದಿದ್ದಾರೆ ಎಂದು ಪೊಲೀಸರು ಕಂಡುಕೊಂಡ ನಂತರ ಈ ನಿಷೇಧ ಹೇರಲಾಗಿತ್ತು. ಪ್ರತಿ ವರ್ಷ ಫೆಬ್ರವರಿ 17 ರಂದು ಇದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕತಾ ಮೆರವಣಿಗೆಗಳನ್ನು ನಡೆಸುತ್ತದೆ. ಇದು ಅನೇಕ ಜಿಲ್ಲೆಗಳಲ್ಲಿ ಕೇಡರ್ ತರಬೇತಿ ಕೇಂದ್ರಗಳನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಅನೇಕ ಮಾನವ ಹಕ್ಕುಗಳ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಪಡೆಯುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಪ್ರಾರಂಭದಿಂದಲೂ, ಈ ಸಂಘಟನೆ ಅನೇಕ ಘರ್ಷಣೆಗಳು ಮತ್ತು ರಾಜಕೀಯ ಕೊಲೆಗಳಲ್ಲಿ ಸಿಲುಕಿಕೊಂಡಿದೆ. ಇದು ಕೇರಳದಲ್ಲಿ ಕನಿಷ್ಠ 30 ರಾಜಕೀಯ ಕೊಲೆಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. 2015 ರಲ್ಲಿ, ಅದರ 13 ಕಾರ್ಮಿಕರಿಗೆ ಧರ್ಮನಿಂದೆಯೆಂದು ಆರೋಪಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಕಾಲೇಜು ಪ್ರಾಧ್ಯಾಪಕ ಟಿ ಜೆ ಜೋಸೆಫ್ ಅವರ ಅಂಗೈ ಕತ್ತರಿಸಿದ್ದಕ್ಕಾಗಿ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಎರಡು ವರ್ಷಗಳ ಹಿಂದೆ ಕಣ್ಣೂರಿನಲ್ಲಿ ಎಬಿವಿಪಿ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಆರು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಮತ್ತು ಕಳೆದ ವರ್ಷ ಎರ್ನಾಕುಲಂನ ಮಹಾರಾಜಸ್ ಕಾಲೇಜಿನಲ್ಲಿ ಎಸ್ಎಫ್ಐ ನಾಯಕ ಅಭಿಮನ್ಯು ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು.
2014 ರಲ್ಲಿ ಕೇರಳ ಸರ್ಕಾರ ಹೈಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಇದರಲ್ಲಿ ಅದರ ಕಾರ್ಯಕರ್ತರು ಕನಿಷ್ಠ 27 ರಾಜಕೀಯ ಕೊಲೆಗಳು, 86 ಕೊಲೆ ಪ್ರಕರಣಗಳು ಮತ್ತು 125 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೋಮು ಪ್ರಚೋದನೆಯನ್ನು ಮಾಡಿದ್ದಾರೆ ಎಂದು ಆರೋಪಿಸಿದೆ.
ಎರಡು ವರ್ಷಗಳ ಹಿಂದೆ ಹದಿಯಾ ಜೆಹಾನ್ ಪ್ರಕರಣ ನಡೆದಾಗ, ಹದಿಯಾ ಅಲಿಯಾಸ್ ಅಖಿಲಾ ಅವರ ತಂದೆ ಕೆ ಅಶೋಕನ್ ಅವರು ಆಕೆಯ ಪತಿ ಶೆಫಿನ್ ಜೆಹನ್ ಅನ್ನು ಪಿಎಫ್ಐನ ಸಕ್ರಿಯ ಸದಸ್ಯ ಎಂದು ಆರೋಪಿಸಿದ್ದರು. ಮಲ್ಲಪ್ಪುರಂ ಜಿಲ್ಲೆಯ ಪಿಎಫ್ಐನಿಂದ ನಿಯಂತ್ರಿಸಲ್ಪಡುವ ಧಾರ್ಮಿಕ ಶಾಲೆಯಾದ ಸತ್ಯ ಸರಾನಿಯಲ್ಲಿ ಅಖಿಲಾಳನ್ನು ಮತಾಂತರಗೊಳಿಸಲಾಗಿದೆ ಎಂದು ಪೊಲೀಸರಿಗೆ ನಂತರ ತಿಳಿಯಿತು. “ಲವ್ ಜಿಹಾದ್” (ಒಂದು ಸಮುದಾಯಕ್ಕೆ ಸೇರಿದ ಹುಡುಗಿಯರನ್ನು ಪ್ರೀತಿಯಿಂದ ಪ್ರಚೋದಿಸುವ ಮೂಲಕ ಪರಿವರ್ತಿಸಲಾಗುತ್ತದೆ ಎಂದು ಹೇಳಲಾದ ಚಟುವಟಿಕೆ) ಪ್ರಕರಣಗಳಲ್ಲಿ ಇದರ ಹೆಸರು ಕೂಡ ಮುನ್ನಲೆಯಲ್ಲಿ ಇದೆ.
“ಅನೇಕ ವಿಷಯಗಳ ಬಗೆಗೆ ಪಿಎಫ್ಐ ಹೊಂದಿರುವ ತೀವ್ರಗಾಮಿ ಮತ್ತು ಉಗ್ರಗಾಮಿ ನಿಲುವು ಬಹಳಷ್ಟು ಯುವಕರನ್ನು ಆಕರ್ಷಿಸಿದೆ. ಜಾತ್ಯತೀತ ಪಕ್ಷವೆಂದು ಪರಿಗಣಿಸಲ್ಪಟ್ಟ ಮುಸ್ಲಿಂ ಲೀಗ್ ಅನ್ನು ದುರ್ಬಲಗೊಳಿಸಲು, ಸಿಪಿಐ (ಎಂ) ಸೇರಿದಂತೆ ಕೆಲವು ಮುಖ್ಯ ರಾಜಕೀಯ ಪಕ್ಷಗಳು ಇದನ್ನು ಹಲವಾರು ಸಂದರ್ಭಗಳಲ್ಲಿ ಬೆಂಬಲಿಸಿದವು. ಇದೇ ಕಾರಣದಿಂದಾಗಿ ಈಗ ಅದು ಅಸಾಧಾರಣ ಶಕ್ತಿಯಾಗಿ ಬೆಳೆದಿದೆ ”ಎಂದು ಗುರುತಿಸಲು ಇಚ್ಛಿಸದ ಉತ್ತರ ಕೇರಳದ ರಾಜಕೀಯ ವಿಶ್ಲೇಷಕರೊಬ್ಬರು ಹೇಳುತ್ತಾರೆ.
ಆದರೆ ಪಿಎಫ್ಐ ಈ ಆರೋಪಗಳನ್ನು ತಳ್ಳಿಹಾಕುತ್ತಲೇ ಬಂದಿದೆ, ಇತ್ತೀಚಿನ ಅಭಿಯಾನಗಳಲ್ಲಿ ಹೆಚ್ಚಿನವು ಮುಖ್ಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಗುರಿಯನ್ನು ಹೊಂದಿವೆ ಎಂದು ಅದು ಹೇಳುತ್ತದೆ. “ಈಗ ಕೆಲವು ಟಿವಿ ಚಾನೆಲ್ಗಳು ಮತ್ತು ರಾಜಕೀಯ ಪಕ್ಷಗಳು ಪಿಎಫ್ಐ ಅನ್ನು ದೂಷಿಸಲು ಸ್ಪರ್ಧೆಯಲ್ಲಿವೆ. ಅವರಿಗೆ ಗಮನವನ್ನು ಬೇರೆಡೆ ಸೆಳೆಯುವುದು ಮುಖ್ಯ ಉದ್ದೇಶವಾಗಿದೆ ”ಎಂದು ಅದರ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಹೇಳುತ್ತಾನೆ. ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಮುಂಚೂಣಿಯಲ್ಲಿ ಪಿಎಫ್ಐ ಕಾರ್ಯಕರ್ತರು ಇದ್ದುದ್ದನ್ನು ಗಮನಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಇತ್ತೀಚಿನ ಹೇಳಿಕೆ ದೊಡ್ಡ ತಮಾಷೆಯಾಗಿದೆ ಎನ್ನುತ್ತಾನೆ.
“ನಮಗೆ ಯಾರಿಂದಲೂ ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ. ದೇಶದ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವವನ್ನು ನಾವು ಬಲವಾಗಿ ನಂಬುತ್ತೇವೆ. ‘ಘನತೆಯಿಂದ ಮತ್ತು ಭಯವಿಲ್ಲದೆ ಬದುಕು’ ಎಂಬುದು ನಮ್ಮ ಧ್ಯೇಯ. ಮುಸ್ಲಿಂ ಸಮುದಾಯವನ್ನು ಸಬಲೀಕರಣಗೊಳಿಸಲು ನಾವು ಇಲ್ಲಿದ್ದೇವೆ, ”ಎಂದಿದ್ದಾನೆ.
“ಸಣ್ಣ ಪ್ರಕರಣಗಳನ್ನು ಉಲ್ಲೇಖಿಸಿ ನೀವು ಪಿಎಫ್ಐ ಅನ್ನು ದೂಷಿಸಲು ಸಾಧ್ಯವಿಲ್ಲ” ಎಂದು ಬಶೀರ್ ಹೇಳಿದ್ದಾನೆ. ಪಿಎಫ್ಐ ವಿರುದ್ಧ ಇತ್ತೀಚಿನ ಅಭಿಯಾನ ಪೂರ್ವ ಆಯೋಜಿಸಲಾಗಿದೆ ಮತ್ತು ಅದು ಎಂದಿಗೂ ಯಶಸ್ವಿಯಾಗುವುದಿಲ್ಲ ಎನ್ನುತ್ತಾನೆ. ಅಲ್ಲದೇ, ಪಿಎಫ್ಐ ತನ್ನ ಕಾರ್ಯಕರ್ತರಿಗೆ ನಿಯಮಿತವಾಗಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾನೆ.
ಆದರೆ ದೇಶದಲ್ಲಿ ನಡೆಯುತ್ತಿರುವ ಪ್ರತಿ ಕೋಮು ಗಲಭೆಯ ಹಿಂದೆ, ಲವ್ ಜಿಹಾದ್ ಪ್ರಕರಣದ ಹಿಂದೆ ಪಿಎಫ್ಐ ಕೈವಾಡ ಇರುವುದು ಸಹಜ ಎಂಬಂತಾಗಿದೆ. ಇತ್ತೀಚಿಗೆ ಇದು ಸಿಎಎ ಪ್ರಾಯೋಜಿಸಲು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸೇರಿದಂತೆ ಅನೇಕರಿಗೆ ಹಣ ಸಂದಾಯವನ್ನು ಮಾಡಿದೆ ಎಂಬ ಆರೋಪವೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.