ಸಿಎಎ ವಿರೋಧಿ ಪ್ರತಿಭಟನೆಗಳು ಅಭೂತಪೂರ್ವ ರೀತಿಯಲ್ಲಿ ದೇಶವ್ಯಾಪಿಯಾಗಿ ನಡೆಯುತ್ತಿದೆ, ಇದರ ಶ್ರೇಯಸ್ಸು ಇಸ್ಲಾಮಿಕ್ ಮೂಲಭೂತವಾದಿಗಳಾದ ಶೆಹ್ಲಾ ರಶೀದ್, ಶಾರ್ಜೀಲ್ ಇಮಾಮ್, ಲಡೀಡಾ ಮತ್ತು ಇಲ್ಕ್ ಅವರಿಗೆ ಸಲ್ಲಬೇಕು. ಪ್ರತಿಭಟನೆಗಳ ಬಿಸಿ ತಗ್ಗದಂತೆ ನೋಡಿಕೊಳ್ಳುವ ಸಲುವಾಗಿ ಎಡ ಉದಾರವಾದಿಗಳು ಶತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪ್ರತಿಭಟನೆಗೆ ಬೆಂಬಲವನ್ನು ಗಳಿಸಲು ಮತ್ತು ಪ್ರತಿಭಟನೆಯ ವಿಷಯದಲ್ಲಿ ವಿಶ್ವಾಸಾರ್ಹತೆಯನ್ನು ಸ್ಥಾಪಿಸಲು ರಾಷ್ಟ್ರೀಯತಾವಾದಿ ಅಜೆಂಡಾವನ್ನು ಸ್ವೀಕರಿಸಿದ್ದಾರೆ ಮತ್ತು ವಿಶೇಷವಾಗಿ ಶಾಹೀನ್ ಬಾಗ್ನಲ್ಲಿ ಈ ಕಾರ್ಯ ಭರದಲ್ಲಿ ನಡೆಯುತ್ತಿದೆ. ಜೈ ಹಿಂದ್ ಮತ್ತು ವಂದೇ ಮಾತರಂ ಘೋಷಣೆ ಕೂಗುವುದರಿಂದ ಹಿಡಿದು ಭಾರತಸ ಧ್ವಜಗಳನ್ನು ಹಾರಿಸುವ ಮತ್ತು ರಾಷ್ಟ್ರಗೀತೆ ಹಾಡುವ ಮತ್ತು ಸಂವಿಧಾನದ ಬಗ್ಗೆ ವಿಪರೀತ ಪ್ರೀತಿ ಮತ್ತು ಗೌರವವನ್ನು ತೋರಿಸುವ ಇವರ ನಾಟಕಗಳು ಇದನ್ನು ಸ್ಪಷ್ಟಪಡಿಸುತ್ತಿವೆ. ಈ ಹಿಂದೆ ಈ ಜನರಿಗೆ ವಂದೇ ಮಾತರಂ ಹೇಳುವುದಕ್ಕೆ ಸಮಸ್ಯೆಯಾಗುತ್ತಿತ್ತು, ಆದರೀಗ ಅದು ಸರಾಗವಾಗಿ ಹೊರಹೊಮ್ಮುತ್ತಿದೆ. ರಾಷ್ಟ್ರೀಯತಾವಾದಿ ಘೋಷಣೆಗಳು ಇವರ ಬಾಯಲ್ಲಿ ಹೊರಹೊಮ್ಮುತ್ತಿರುವುದು ನೋಡಿದರೆ ಅಮಿತ್ ಷಾ ಅವರ ಕನಸು ಅವರ ಮುಂದೆಯೇ ಸಾಕಾರಗೊಳ್ಳುತ್ತಿದೆ.
ಒಂದು ಸೆಕೆಂಡು ಕೂಡ ರಾಷ್ಟ್ರ ವಿರೋಧಿ ಶಕ್ತಿಗಳು ರಾಷ್ಟ್ರೀಯತಾವಾದಿ ಘೋಷಣೆಗಳನ್ನು ನಂಬುವುದಿಲ್ಲ, ಆದರೆ ಈಗ ಅವರು ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ರಾಷ್ಟ್ರೀಯತಾವಾದಿ ಘೋಷಣೆಗಳ ಅಡಿಯಲ್ಲಿ ಮುಂದುವರಿಸಲು ಬಯಸುತ್ತಿದ್ದಾರೆ. ಇದು ಕಪಟವಾಗಿದ್ದರೂ ಕೂಡ, ಪ್ರತಿಭಟನೆಯ ಹಿಂದಿರುವ ರಾಷ್ಟ್ರ ವಿರೋಧಿಗಳು ತಮ್ಮ ಬೇಡಿಕೆಗಳನ್ನು ಮೌಲ್ಯೀಕರಿಸಲು ಮತ್ತು ನ್ಯಾಯಸಮ್ಮತಗೊಳಿಸಲು ದೇಶಪ್ರೇಮದ ಪಿಆರ್ ಸಾಹಸಗಳನ್ನು ಆಶ್ರಯಿಸಲು ಮುಂದಾಗಿದ್ದಾರೆ, ಇದು ಅವರಿಗೆ ಅನಿವಾರ್ಯವೂ ಕೂಡ.
ಜಿಹಾದಿ ಅಜೆಂಡಾ ಬಹಿರಂಗಪಡಿಸುತ್ತಿದ್ದಂತೆ ಬರ್ಖಾ ಅವರ ‘ಶೇರೋಸ್’ ಆಯೆಷಾ ಮತ್ತು ಲಡೀಡಾ ಚಡಪಡಿಕೆಗೆ ಒಳಗಾದರು. ಸ್ವತಂತ್ರ ಪ್ರತಿಭಟನಾಕಾರ್ತಿಯಾಗಿದ್ದ ಶೆಹ್ಲಾ ರಶೀದ್ ಅವರು ಇಸ್ಲಾಮಿಕ್ ಆಗಿ ಹೊರಬಂದು ಇಡೀ ಸಿಎಎ ವಿರೋಧಿ ಪ್ರತಿಭಟನೆಗಳ ವಿಶ್ವಾಸಾರ್ಹತೆಯನ್ನು ತಗ್ಗಿಸಿದರು, ಇದರಿಂದ ಸಿಎಎ ವಿರೋಧಿ ಪ್ರತಿಭಟನೆಗೆ ಭಾರಿ ಹೊಡೆತ ಬಿದ್ದಿತು. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಮಸ್ಯೆ ಎಂಬಷ್ಟು ಮಟ್ಟಕ್ಕೆ ಪ್ರತಿಭಟನೆಯನ್ನು ಶೆಹ್ಲಾ ಕೊಂಡೊಯ್ದರು. ಸಹಜವಾಗಿಯೇ, ಶೆಹ್ಲಾ ಅವರ ಸಿದ್ಧಾಂತದ ವಿರುದ್ಧ ಹೋದ ಅಥವಾ ಶೆಹ್ಲಾರ ಪ್ರತಿಭಟನೆಯಿಂದ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದವರನ್ನು ಟ್ರೋಲ್ಗಳಿಗೆ ಒಳಗಾದರು ಮತ್ತು ತಮ್ಮ ಬುದ್ಧಿಜೀವಿ ಸ್ಥಾನವನ್ನು ಕಳೆದುಕೊಂಡು. ಇದಕ್ಕೆ ಶಶಿ ತರೂರ್ ಅವರೇ ಉದಾಹರಣೆ.
ಶಾಹೀನ್ ಬಾಗ್ ಪ್ರತಿಭಟನೆಯ ಪಿಆರ್-ಮಿಶನರಿಯು ಶಹೀನ್ ಬಾಗ್ ಚಿತ್ರಣವನ್ನು ಭಾರತೀಯ ಧ್ವಜಗಳು, ರಾಷ್ಟ್ರಗೀತೆ ಮತ್ತು ಇತರ ಬಲವಂತದ ದೇಶಭಕ್ತಿಯ ನಿದರ್ಶನಗಳಿಂದ ರೂಪಿಸಲು ಪ್ರಯತ್ನಿಸುತ್ತಿದ್ದರೆ, ಅತ್ತ ಪ್ರತಿಭಟನೆಯ ಹಿಂದಿನ ಪ್ರಮುಖ ವ್ಯಕ್ತಿ ಶಾರ್ಜೀಲ್ ಇಮಾಮ್ ನಿಖರವಾದ ಉದ್ದೇಶಗಳನ್ನು ಬಹಿರಂಗಪಡಿಸಿದ್ದಾನೆ. ಪ್ರತಿಭಟನೆಯ ನಾಯಕರು ಮೊದಲಿನಿಂದಲೂ ತಮ್ಮ ಹೃದಯದಲ್ಲಿ ಹೊಂದಿದ್ದ ಭಾವನೆಗಳನ್ನು ಆತ ವ್ಯಕ್ತಪಡಿಸಿದ್ದಾನೆ.
ಕನ್ಹಯ್ಯ ದೇಶವನ್ನು ಒಡೆಯುವ ಕನಸು ಮಾತ್ರ ಕಾಣುತ್ತಿದ್ದಾನೆ, ಆದರೆ ಜೆಎನ್ಯುನ ಪಿಎಚ್ಡಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ಈಗಾಗಲೇ ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿದ್ದಾನೆ. ಕೇವಲ 5 ಲಕ್ಷ ಜನರ ಸಹಾಯದಿಂದ, ತನ್ನ ಗ್ಯಾಂಗ್ ಈಶಾನ್ಯ ಭಾರತವನ್ನು ದೇಶದ ಇತರ ಭಾಗಗಳಿಂದ ಕತ್ತರಿಸುವ ಮೂಲಕ ಭಾರತದ ವಿಭಜನೆಯನ್ನು ಸುಲಭವಾಗಿ ರೂಪಿಸುತ್ತದೆ ಎಂದು ಇಮಾಮ್ ಹೇಳಿದ್ದಾನೆ. “ಅಸ್ಸಾಂ ಅನ್ನು ಕತ್ತರಿಸುವುದು ನಮ್ಮ ಜವಾಬ್ದಾರಿ. ಅಸ್ಸಾಂ ಮತ್ತು ಭಾರತವನ್ನು ಬೇರ್ಪಡಿಸಿದಾಗ ಮಾತ್ರ ಅವರು ನಮ್ಮ ಮಾತನ್ನು ಕೇಳುತ್ತಾರೆ. ಅಸ್ಸಾಂ, ಸಿಎಎ, ಎನ್ಆರ್ಸಿಯಲ್ಲಿ ಮುಸ್ಲಿಮರ ಸ್ಥಿತಿ ಏನು ಎಂದು ನಿಮಗೆ ತಿಳಿದಿದೆ, ಜನರನ್ನು ಬಂಧನ ಶಿಬಿರಗಳಲ್ಲಿ ಎಸೆಯಲಾಗಿದೆ ಮತ್ತು ಅಲ್ಲಿ ಹತ್ಯಾಕಾಂಡ ನಡೆಯುತ್ತಿದೆ ಆದರೆ ಮುಂದಿನ 6-8 ತಿಂಗಳಲ್ಲಿ ನಾವು ಅದಕ್ಕೆ ಉತ್ತರ ಕಂಡುಕೊಳ್ಳುತ್ತೇವೆ, ಹಿಂದೂ ಅಥವಾ ಮುಸ್ಲಿಂ ಆಗಿರಲಿ ಎಲ್ಲಾ ಬಂಗಾಳಿಗಳನ್ನು ಕೊಲ್ಲಲಾಗುತ್ತದೆ. ಇದಕ್ಕಾಗಿ ನಾವು ಅಸ್ಸಾಂಗೆ ಸಹಾಯ ಮಾಡಲು ಬಯಸಿದ್ದೇವೆ, ಇದಕ್ಕಾಗಿ ನಾವು ಉತ್ತರ ಪೂರ್ವದ ಗೇಟ್ವೇ ಅನ್ನು ಮುಚ್ಚಬೇಕಾಗುತ್ತದೆ ”ಎಂದು ಶಾರ್ಜೀಲ್ ಇಮಾಮ್ ಹೇಳಿದ್ದಾನೆ. ರೈಲುಮಾರ್ಗಗಳನ್ನು ನಿರ್ಬಂಧಿಸಲು ಆತ ಸಲಹೆ ನೀಡಿದ್ದಾನೆ, ಇದರಿಂದ ಭಾರತದಿಂದ ಯಾವುದೇ ವಸ್ಪೂತುರೈಕೆಯಾಗುವುದಿಲ್ಲ, ಮುಖ್ಯವಾಗಿ ಭಾರತೀಯ ಸೈನ್ಯವು ಅಸ್ಸಾಂಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾನೆ.
ಇಂತಹ ಮಹತ್ವದ ಸಂದರ್ಭದಲ್ಲಿ ಸಿಎಎ ವಿರೋಧಿಗಳು ತಮ್ಮ ರಾಷ್ಟ್ರಪ್ರೇಮವನ್ನು ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ರಾಷ್ಟ್ರೀಯತಾವಾದಿಯಾಗಿ ತಮ್ಮನ್ನು ಬ್ರಾಂಡ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ಅಸಾವುದುದ್ದೀನ್ ಒವೈಸಿ ‘ಜೈ ಶ್ರೀ ರಾಮ್’ ಮತ್ತು ‘ವಂದೇ ಮಾತರಂ’ ಎಂದು ಹೇಳದ ಕಾರಣ ಭಾರತದಲ್ಲಿ ಮುಸ್ಲಿಮರು ಇಂದು ಭಯಭೀತರಾಗುತ್ತಿದ್ದಾರೆ ಎಂದು ಹೇಳಿಕೊಂಡಿದ್ದ. ಅಲ್ಲದೇ ‘ವಂದೇ ಮಾತರಂ’ ಎಂದು ಹೇಳಲು ನಿರಾಕರಿಸಿದ್ದ. ಆದರೆ ಮೊನ್ನೆ ನಡೆದ ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಮಾತೆಯನ್ನು ಶ್ಲಾಘಿಸಿದ್ದು ಮಾತ್ರವಲ್ಲ ತನ್ನ ಬೆಂಬಲಿಗರೊಂದಿಗೆ ರಾಷ್ಟ್ರ ಧ್ವಜವನ್ನೂ ಹಾರಿಸಿದ್ದಾನೆ.
ಪತ್ರಕರ್ತೆ ಅರಫಾ ಖಾನಮ್, ಮುಸ್ಲಿಮೇತರರ ಸಹಾಯ ಪಡೆಯಲು ರಾಷ್ಟ್ರಪ್ರೇಮವನ್ನು ತೋರ್ಪಡಿಸುವ ಅನಿವಾರ್ಯತೆಯನ್ನು ತಮ್ಮ ಸಂಗಡಿಗ ಸಿಎಎ ವಿರೋಧಿಗಳಿಗೆ ಒತ್ತಿ ಹೇಳಿದ್ದಾರೆ. ಆದರೆ ಅವರ ಮನಸ್ಸಿನೊಳಗಿನ ಭಾವನೆ ಮಾತ್ರ ಖಲೀಫತ್ ನಿರ್ಮಾಣವೇ ಹೊರತು ಬೇರೇನೂ ಅಲ್ಲ.
ಒಟ್ಟಿನಲ್ಲಿ ಸಿಎಎ ವಿರೋಧಿಗಳು ರಾಷ್ಟ್ರವಾದಿ ಸಿದ್ದಾಂತವನ್ನು ತೋರ್ಪಡಿಸಿಕೊಳ್ಳುವ ಅನಿವಾರ್ಯತೆಗೆ ಒಳಪಟ್ಟಿದ್ದಾರೆ. ಹೀಗಾಗಿ ವಂದೇ ಮಾತರಂ ಘೋಷಣೆಯನ್ನು ಹಾಕುತ್ತಿದ್ದಾರೆ, ರಾಷ್ಟ್ರಧ್ವಜ ಹಾರಿಸುತ್ತಿದ್ದಾರೆ. ಇವರ ಈ ನಡವಳಿಕೆ ಸರ್ಕಾರದ ನಿಜವಾದ ಉದ್ದೇಶವನ್ನು ಪೂರೈಸುತ್ತಿದೆ. ಭವ್ಯ ಭಾರತ ಬದಲಾಗುತ್ತಿದೆ ಎಂಬುದಕ್ಕೆ ಇದುವೇ ನಿದರ್ಶನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.