ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಜನವರಿ 26 ರಂದು ಪ್ರಸಾರವಾಗಲಿದೆ. ಆದರೆ ಈ ಬಾರಿ ಗಣರಾಜ್ಯೋತ್ಸವ ಇರುವ ಹಿನ್ನಲೆಯಲ್ಲಿ ಪ್ರಸಾರದ ಸಮಯವನ್ನು ಬದಲಾಯಿಸಲಾಗಿದೆ, ಸಂಜೆ ಕಾರ್ಯಕ್ರಮವು ರೇಡಿಯೋದಲ್ಲಿ ಪ್ರಸಾರವಾಗಲಿದೆ.
ಮಾಸಿಕ ರೇಡಿಯೊ ಕಾರ್ಯಕ್ರಮವು ಸಾಮಾನ್ಯ ಪ್ರಸಾರ ಸಮಯಕ್ಕೆ ಬೆಳಿಗ್ಗೆ 11 ಗಂಟೆಯ ಬದಲು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಸಮಯದ ಬದಲಾವಣೆಯು ಜನವರಿ 26 ಕ್ಕೆ ಮಾತ್ರ ಸೀಮಿತವಾಗಲಿದೆ. ಮಾಸಿಕ ರೇಡಿಯೊ ಕಾರ್ಯಕ್ರಮದ ಸಮಯವು ಬೆಳಿಗ್ಗೆ ಗಣರಾಜ್ಯೋತ್ಸವದೊಂದಿಗೆ ಘರ್ಷಣೆಯಾಗುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮಯ ಬದಲಾವಣೆಯ ಘೋಷಣೆಯನ್ನು ಬುಧವಾರವೇ ಮಾಡಲಾಗಿದೆ.
ಸಾಮಾನ್ಯವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಮಾಸಿಕ ರೇಡಿಯೋ ಕಾರ್ಯಕ್ರಮದ ಸಮಯವನ್ನು ಪ್ರಧಾನಿ ಮೋದಿ ಬದಲಾಯಿಸಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ರೇಡಿಯೊ ಕಾರ್ಯಕ್ರಮದ ಸಮಯವನ್ನು ಒಂದು ಬಾರಿ ಬದಲಾಯಿಸಲಾಗಿದೆ. ಮೋದಿಯವರು ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರನ್ನು 27 ಜನವರಿ 2015 ರಂದು ಭೇಟಿಯಾದ ಸಂದರ್ಭದಲ್ಲಿ ರೇಡಿಯೊ ಕಾರ್ಯಕ್ರಮವನ್ನು ರಾತ್ರಿ 8 ಗಂಟೆಗೆ ಪ್ರಸಾರ ಮಾಡಲಾಗಿತ್ತು.
ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ನಂತರ 2014 ರಲ್ಲಿ ದೇಶದ ಜನರೊಂದಿಗೆ ನೇರ ರಾಜಕೀಯೇತರ ಸಂವಾದ ನಡೆಸುವ ಪರಿಕಲ್ಪನೆ ಪ್ರಾರಂಭವಾಗಿದೆ. ಅವರ ಈ ರೇಡಿಯೋ ಕಾರ್ಯಕ್ರಮವು ರಾಜಕೀಯೇತರವಾಗಿ ಉಳಿದಿದೆ ಮತ್ತು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ಇಲ್ಲಿ ಚರ್ಚೆಯೂ ನಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.