ಇತ್ತೀಚೆಗೆ, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ ಅವರು ಮುಸ್ಲಿಂ ಧಾರ್ಮಿಕ ವ್ಯವಹಾರಗಳ ಇಲಾಖೆಗೆ ದೇಶದ ಎಲ್ಲಾ ಮದರಸಾಗಳನ್ನು ಇಲಾಖೆಯಲ್ಲಿ ನೋಂದಾಯಿಸುವಂತೆ ಆದೇಶಿಸಿದ್ದರು. ಎಲ್ಲಾ ಮದರಸಾದ ಪಠ್ಯಕ್ರಮವನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಶಿಕ್ಷಣ ಸಚಿವಾಲಯದ ನೆರವಿನೊಂದಿಗೆ ನವೀಕರಿಸಿದ ಪಠ್ಯಕ್ರಮವನ್ನು ಸಿದ್ಧಪಡಿಸುವಂತೆ ಕೂಡ ಅವರು ಮುಸ್ಲಿಂ ಧಾರ್ಮಿಕ ವ್ಯವಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮದರಸಾಗಳು ಕಾರ್ಯನಿರ್ವಹಿಸುವ ವಿಧಾನವನ್ನು ಮತ್ತು ಅದರ ಪಠ್ಯಕ್ರಮವನ್ನು ನವೀಕರಣಗೊಳಿಸುವ ಮೂಲಕ ರಾಜಪಕ್ಷೆ ಆಡಳಿತವು ಕಳೆದ ವರ್ಷ ದ್ವೀಪ ರಾಷ್ಟ್ರದ ಮೇಲೆ ಹಿಡಿತ ಸಾಧಿಸಿದ್ದ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡವ ನಿಟ್ಟಿನಲ್ಲಿ ಬಹುದೊಡ್ಡ ಪ್ರಯತ್ನವನ್ನು ಮಾಡಿದೆ.
ದೇಶದ ಮೂಲಭೂತೀಕರಣದಂತ ಭೀಕರ ಸಮಸ್ಯೆಯನ್ನು ನಿಭಾಯಿಸಲು ಬಯಸುತ್ತಿರುವ ಭಾರತ ದ್ವೀಪ ರಾಷ್ಟ್ರ ಶ್ರೀಲಂಕಾದ ಕ್ರಮದಿಂದ ಪ್ರೇರಣೆಯನ್ನು ಪಡೆದುಕೊಳ್ಳಬೇಕು.
ಅನಿಯಂತ್ರಿತ ಮತ್ತು ನೋಂದಾಯಿಸದ ಮದರಸಾದಲ್ಲಿ ಮೂಲಭೂತವಾದಕ್ಕೆ ಸಂಬಂಧಿಸಿದ ಬೆದರಿಕೆಗಳು ದೀರ್ಘಕಾಲದಿಂದ ಬೆಳಕಿಗೆ ಬಂದಿವೆ. ಮದರಸಾದಲ್ಲಿ ಅಧ್ಯಯನ ಮಾಡುವವರು ಮೂಲಭೂತವಾದ ಅಂಶಗಳಿಗೆ ಸ್ವಾಭಾವಿಕವಾಗಿ ಗುರಿಯಾಗಿದ್ದಾರೆ. ಯುವ ಮನಸ್ಸುಗಳನ್ನು ಮೂಲಭೂತದ ಉಪದೇಶದ ಮೂಲಕ ದಾರಿ ತಪ್ಪಿಸುವುದು ಸುಲಭ. ಸಿಎಎ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಮಕ್ಕಳನ್ನು ಕಲ್ಲು ತೂರಿಸಲು ಪ್ರಚೋದಿಸಿದ್ದಕ್ಕಾಗಿ ಬಂಧಿತ 33 ಆರೋಪಿಗಳ ವಿರುದ್ಧ ಉತ್ತರ ಪ್ರದೇಶದ ಇತ್ತೀಚಿಗೆ ಪ್ರಕರಣವನ್ನು ದಾಖಲಿಸಿದ ಉದಾಹರಣೆಯನ್ನೇ ಇಲ್ಲಿ ತೆಗೆದುಕೊಂಡರೆ ನಮಗೆ ಅರ್ಥವಾಗುತ್ತದೆ.
2016 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹಂಚಿಕೊಂಡ ಮಾಹಿತಿಯ ಪ್ರಕಾರ, ಇಸಿಸ್ಗೆ ಸೇರಿದವರಲ್ಲಿ ಶೇಕಡಾ 20 ರಷ್ಟು ಜನರು ಮದರಸಾಗೆ ಹೋದವರು. ದಕ್ಷಿಣ ಭಾರತದಲ್ಲಿ ಇಸಿಸ್ಗೆ ಸಂಬಂಧಿಸಿದಂತೆ ಇತ್ತೀಚಿಗೆ ನಡೆದ ಬಂಧನಗಳಲ್ಲಿಯೂ ಬೆಳಕಿಗೆ ಬಂದ ಅಂಶವೆಂದರೆ ಕೆಲವು ಸದಸ್ಯರು ಮದರಸಾದಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದು.
ಭಾರತದಲ್ಲಿ ಹಲವಾರು ಮದರಸಾಗಳು ನೋಂದಣಿಯಾಗಿಲ್ಲ ಎಂದು ಭದ್ರತಾ ಸಂಸ್ಥೆಗಳು ಸಹ ಸೂಚಿಸುತ್ತವೆ. ಅವುಗಳಲ್ಲಿ ಕೆಲವು ಆಮೂಲಾಗ್ರ ವಿಧಾನವನ್ನು ಹೊಂದಿವೆ ಮತ್ತು ಆದ್ದರಿಂದ ಅವು ದೇಶದೊಳಗೆ ಆಮೂಲಾಗ್ರೀಕರಣ ಕೇಂದ್ರಗಳಾಗಿ ಪರಿಣಮಿಸಬಹುದು.
ಮೂಲಭೂತವಾದೀಕರಣದ ಹಲವಾರು ಪ್ರಕರಣಗಳು ನಡೆದಿರುವುದರಿಂದ ನಿಜಕ್ಕೂ ಆತಂಕವನ್ನು ಸೃಷ್ಟಿಸಿದೆ. ಕಳೆದ ವರ್ಷ, ಪಂಜಾಬ್ನ ಲುಧಿಯಾನದಲ್ಲಿರುವ ಮಸೀದಿಯಿಂದ ಮದರಸಾ ಶಿಕ್ಷಕನನ್ನು ಎನ್ಐಎ ತಂಡವು ಇಸಿಸ್ ಅಂಗಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಅನುಮಾನದ ಮೇಲೆ ಬಂಧಿಸಿತ್ತು.
ಕಳೆದ ತಿಂಗಳು, ಎನ್ಐಎ ಐಎಸ್ಐಎಸ್-ಪ್ರೇರಿತ ಮಾಡ್ಯೂಲ್ ಅನ್ನು ರಾಷ್ಟ್ರೀಯ ರಾಜಧಾನಿ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿ ಜಗಜ್ಜಾಹೀರು ಮಾಡಿತು. ಇದರಲ್ಲಿ ಬಂಧಿಸಲ್ಪಟ್ಟವರಲ್ಲಿ ಅನೇಕರು ವಿವಿಧ ಮದರಸಾದಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದರು. ಗಣರಾಜ್ಯೋತ್ಸವಕ್ಕೂ ಮುನ್ನ ದೊಡ್ಡ ಭಯೋತ್ಪಾದಕ ದಾಳಿಯನ್ನು ಯೋಜಿಸಿದ್ದೆವು ಎಂಬುದಾಗಿ ಇವರುಗಳು ಹೇಳಿದ್ದಾರೆ ಎಂದು ಭಯೋತ್ಪಾದನಾ ನಿಗ್ರಹ ದಳ ಹೇಳಿಕೊಂಡಿದೆ.
2018 ರಲ್ಲೂ ಕೂಡ ಮದರಸಾ ಮೂಲಭೂತವಾದೀಕರಣ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ವಿಷಯವು ಬೆಳಕಿಗೆ ಬಂದಿತ್ತು. ಆ ಸಮಯದಲ್ಲಿ ಎನ್ಐಎ ಉತ್ತರ ಪ್ರದೇಶದ ಸೀಲಾಂಪುರದ ಮದರಸಾ ಮಾಲೀಕ ಅಬ್ದುಸ್ ಸಾಮಿ ಅವರನ್ನು ಬಂಧಿಸಿತ್ತು. ಸಾಮಿ ‘ಖಲೀಫತ್’ಗೆ ಬೆಂಬಲವಾಗಿ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣಗಳನ್ನು ಮಾಡುತ್ತಿದ್ದ.
ಭಾರತಕ್ಕೆ ಸವಾಲಾಗುತ್ತಿರುವ ಮತ್ತೊಂದು ಪ್ರಮುಖ ವಿಷಯವೆಂದರೆ ಮದರಸಾಗೆ ವಿದೇಶಿ ಧನಸಹಾಯ. ಕೇರಳ ರಾಜ್ಯದ ಹಲವಾರು ಮದರಸಾಗಳು ಮಕ್ಕಳಿಗೆ ವಹಾಬಿ ಇಸ್ಲಾಂ ಧರ್ಮವನ್ನು ಬೋಧಿಸುತ್ತಿವೆ. ಈ ಮದರಸಾಗಳು ಇಸಿಸ್ನಂತಹ ಖಲೀಫತ್ ಕಲ್ಪನೆಯೊಂದಿಗೆ ಯುವ ಮನಸ್ಸುಗಳನ್ನು ಕೆಡಿಸುತ್ತಿವೆ. ವಾಸ್ತವವಾಗಿ, ಸೌದಿ ಬೆಂಬಲಿತ ಸಲಾಫಿಗಳು ಈಗಾಗಲೇ ಕೇರಳ ರಾಜ್ಯದಲ್ಲಿ ಭದ್ರಕೋಟೆಯನ್ನು ಕಟ್ಟಿದ್ದಾರೆ. ಕೇರಳ ಮದರಸಾಗಳು ಭಯೋತ್ಪಾದನೆಗೆ ಸಂಬಂಧಿಸಿರುವ ಸೌದಿ ಪ್ರಾಯೋಜಿತ ಧರ್ಮವಾದ ವಹಾಬಿಸಂ ಅನ್ನು ಬೋಧಿಸುತ್ತಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ.
ಆದರೆ, ಮದರಸಾಗಳಲ್ಲಿ ಮೂಲಭೂತೀಕರಣ ಮತ್ತು ವಿದೇಶಿ ಧನಸಹಾಯದ ವಿಷಯವು ಸೌದಿ ಅರೇಬಿಯಾಕ್ಕೆ ಮಾತ್ರ ಸೀಮಿತವಾಗಿಲ್ಲ. ಪಾಕಿಸ್ಥಾನ ಕೂಡ ಭಾರತದ ಮದರಸಾಗಳಲ್ಲಿ ಆಮೂಲಾಗ್ರ ಪ್ರಚಾರ ಮತ್ತು ಅಪಾಯಕಾರಿ ಬೋಧನೆಯ ಪ್ರಕ್ರಿಯೆಯಲ್ಲಿ ತೊಡಗಿದೆ.
2014 ರಲ್ಲಿ, ಭಾರತ-ನೇಪಾಳ ಗಡಿಯಲ್ಲಿ ಮದರಸಾಗಳ ದುಷ್ಕೃತ್ಯಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಪಾಕಿಸ್ಥಾನ ಪ್ರಾಯೋಜಿತ ಈ ಮದರಸಾಗಳು ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದವು. ಕೇವಲ ಪ್ರಚಾರ ಮಾತ್ರವಲ್ಲ, ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರಿಗೆ ಅದು ಸುರಕ್ಷಿತ ತಾಣಗಳನ್ನು ಸಹ ಒದಗಿಸುತ್ತಿತ್ತು.
ಭಾರತದಲ್ಲಿ ಮದರಸಾಗಳಿಗೆ ಧನಸಹಾಯ ನೀಡುವ ಪಾಕಿಸ್ಥಾನದ ದುಷ್ಕೃತ್ಯದ ಅಜೆಂಡಾವನ್ನು ಬಹಿರಂಗಪಡಿಸುವ ಉದ್ದೇಶದಿಂದ, ಎನ್ಐಎ ಭಾರತಕ್ಕೆ ಹಣವನ್ನು ಪೂರೈಕೆ ಮಾಡುತ್ತಿದ್ದ ಫಲಹ್-ಇ-ಇನ್ಸಾನಿಯತ್ ಮಾಡ್ಯೂಲ್ ಅನ್ನು ಪತ್ತೆಹಚ್ಚಿದೆ. ಫಲಹ್-ಇ-ಇನ್ಸಾನಿಯಾತ್ ಅನ್ನು ಹಫೀಜ್ ಸಯೀದ್ನ ಜಮಾತ್ ಉದಾ ದಾವಾದ “ಚಾರಿಟಿ” ಸಂಘವಾಗಿ ಸ್ಥಾಪಿಸಿದ್ದ. ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಯೋಜಿತವಾಗಿರುವ ಚಾರಿಟಿಯು ವಾಸ್ತವವಾಗಿ ಯುವಕರು ಮತ್ತು ಮಕ್ಕಳನ್ನು ಉಗ್ರವಾದಿಗಳಾಗಿ ಬದಲಿಸುವ ಪ್ರಯತ್ನದಲ್ಲಿ ಮದರಸಾಗಳಿಗೆ ಧನಸಹಾಯ ನೀಡುತ್ತಿತ್ತು.
ವಾಸ್ತವವಾಗಿ, ಲಷ್ಕರ್-ಎ-ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ತನ್ನ ಆರ್ಥಿಕ ವಿಭಾಗವಾದ ಎಫ್ಐಎಫ್ ಮೂಲಕ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಭಯೋತ್ಪಾದಕ ಜಾಲವನ್ನು ಸ್ಥಾಪಿಸಲು ಬಯಸುತ್ತಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. ತನ್ನ ಕೆಟ್ಟ ಅಜೆಂಡಾವನ್ನು ಸಾಧಿಸುವ ಪ್ರಯತ್ನದಲ್ಲಿ, ಹಫೀಜ್ ಸಯೀದ್ ಭಾರತದಲ್ಲಿ ಹಲವಾರು ಮದರಸಾಗಳನ್ನು ಪ್ರಾಯೋಜಿಸುತ್ತಿದ್ದಾನೆ ಎಂದೂ ಹೇಳಲಾಗಿದೆ.
ಉತ್ತರ ಪ್ರದೇಶ, ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಮದರಸಾಗಳು ಉಗ್ರವಾದವನ್ನು ರೂಪಿಸುವ ಭಯಾನಕ ವಿಷಯಗಳು ಬೆಳಕಿಗೆ ಬಂದಿವೆ.
ಆದರೆ, ಈ ಕೃತ್ಯ ಈ ರಾಜ್ಯಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಹರಿಯಾಣದಂತಹ ಪ್ರದೇಶಗಳಲ್ಲಿರುವ ಮದರಸಾಗಳಿಗೂ ಕೂಡ ಹಣ ತಲುಪುತ್ತಿದೆ ಎಂದು ತಿಳಿದುಬಂದಿದೆ.
ಅನಿಯಂತ್ರಿತ ಮತ್ತು ನೋಂದಾಯಿಸದ ಮದರಸಾಗಳು ದುರುಪಯೋಗಕ್ಕೆ ಗುರಿಯಾಗುತ್ತಿದೆ. ಹೀಗಾಗಿ ಭಾರತವು ಕೂಡ ಶ್ರೀಲಂಕಾದ ಮಾದರಿಯಲ್ಲಿ ಮದರಸಾಗಳ ನಿಯಂತ್ರಣವನ್ನು ಮಾಡುವುದು ಅನಿವಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.