ಬೆಳ್ತಂಗಡಿ : ಮಕ್ಕಳ ಆಸಕ್ತಿಯನ್ನು ಕೆರಳಿಸುವ ಹಾಗೂ ಉತ್ಸಾಹವನ್ನು ಹೆಚ್ಚಿಸುವ ವಾತಾವರಣವನ್ನು ಶಾಲೆಗಳಲ್ಲಿ ನಿರ್ಮಾಣ ಮಾಡಬೇಕು. ಮಕ್ಕಳ ಸಾಮರ್ಥ್ಯವರ್ಧನೆ ಹಾಗೂ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಇ.ಕಲಿಕಾ ಉಪಕರಣಗಳು ಸಹಕಾರಿಯಾಗಿವೆ. ಆಧುನಿಕ ಕಲಿಕಾ ಉಪಕರಣಗಳನ್ನು ಸರಿಯಾಗಿ ಉಪಯೋಗಿಸಿ ಗ್ರಾಮೀಣ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ರೋಟರಿ ವಲಯ 5 ರ ಸಹಾಯಕ ಗವರ್ನರ್ ಅಶ್ವನಿ ಕುಮಾರ್ ರೈ ಅವರು ಕರೆ ನೀಡಿದರು.
ಅಶ್ವನಿ ಕುಮಾರ್ ರೈ ಅವರು ಬೆಳ್ತಂಗಡಿ ರೋಟರಿ ಕ್ಲಬ್, ಅರ್ಕುಳ ಚಾರಿಟೇಬಲ್ ಟ್ರಸ್ಟ್ ಮತ್ತು ಅರ್ಕುಳ ಶೋಭಾ ಪುರುಷೋತ್ತಮ ಟ್ರಸ್ಟ್ ಸಹಯೋಗದಲ್ಲಿ ಅರ್ಕುಳ ಶ್ರೀ ರಾಮಾ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ರೂ.4.40 ಲಕ್ಷ ಮೌಲ್ಯದ ಸೌಲಭ್ಯಗಳನ್ನು ಶಾಲೆಗೆ ಹಸ್ತಾಂತರಿಸುತ್ತಾ ಮಾತನಾಡುತ್ತಿದ್ದರು.
ಮಕ್ಕಳ ಕಲಿಕೆಯಲ್ಲಿ ಮನೆಯ ಹಾಗೂ ಶಾಲೆಯ ವಾತವರಣ ಮಹತ್ವದ ಪಾತ್ರ ವಹಿಸುತ್ತದೆ. ರೋಟರಿಯ ಉಲ್ಲಾಸದಾಯಕ ಶಾಲೆ ಯೋಜನೆಯನ್ವಯ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಲು ಶಾಲೆಗಳಿಗೆ ವಾದನ ಉಪಕರಣಗಳನ್ನು ಹಾಗೂ ಪ್ರಾಥಮಿಕ ಮಟ್ಟದಲ್ಲಿಯೇ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಇ ಕಲಿಕಾ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಶಾಲೆಗಳಲ್ಲಿ ಸ್ವಚ್ಚತೆ ಮತ್ತು ಆರೋಗ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಬೆಳ್ತಂಗಡಿ ರೋಟರಿ ಅಧ್ಯಕ್ಷ ಡಾ.ಎ.ಜಯ ಕುಮಾರ ಶೆಟ್ಟಿ ತಿಳಿಸಿದರು.
ಸೆಲ್ಕೊಫೌಂಡೇಶನ್ ಹಾಗೂ ಮೆಂಡಾ ಫೌಂಡೇಶನ್ ಸಹಯೋಗದೊಂದಿಗೆ ಒದಗಿಸಲಾದ ರೂ. 1.00 ಲಕ್ಷ ಮೌಲ್ಯದ ಸೋಲಾರ್ ಆಧಾರಿತ ಇ ಕಲಿಕಾ ಉಪಕರಣಗಳನ್ನು ಶಾಲೆಗೆ ಸೆಲ್ಕೋ ಫೌಂಡೇಶನ್ ನ ಅಧಿಕಾರಿಗಳಾದ ಸಂಜಿತ್ ರೈ ಹಾಗೂ ಪರೇಶ್ ಅವರು ಹಸ್ತಾಂತರಿಸಿದರು.
ಅರ್ಕುಳ ಚಾರಿಟೇಬಲ್ ಟ್ರಸ್ಟ್ ಹಾಗೂ ಶಾಲಾ ಆqಳಿತ ಮಂಡಳಿಯ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ರೋಟರಿಯ ಸಹಾಯಕ ಗವರ್ನರ್ ಅಶ್ವನಿಕುಮಾರ್ ರೈ ಅವರನ್ನು ಶಾಲು ಹೊದೆಸಿ ಅಭಿನಂದಿಸಿದರು.
ಶಾಲೆಯ ಸಂಚಾಲಕ ಅರ್ಕುಳ ಗೋವಿಂದ ಶಣೈ ಅವರು ಸ್ವಾಗತಿಸುತ್ತಾ ಆಧುನಿಕ ಕಲಿಕಾ ಉಪಕರಣಗಳು ಹಾಗೂ ಸೌಲಭ್ಯಗಳು ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಹಾಗೂ ಇನ್ನೆರಡು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಲಿರುವ ಶ್ರೀ ರಾಮಾ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ರೋಟರಿಯ ಕೊಡುಗೆ ಅನನ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಅರ್ಕುಳ ಕಂಬಳಕೋಡಿ ಮಂಜುನಾಥ ಶೆಣೈ, ಸದಸ್ಯರಾದ ಅರ್ಕುಳ ದಾಮೋದರ ಹೆಗ್ಡೆ, ಮಂಜುನಾಥ ಕಾಮತ್, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಮ ಶೇಖ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ್ ಕುಮಾರ್ ಕುಂಪನಮಜಲು, ಉಪಾಧ್ಯಕ್ಷ ಚಂದ್ರಶೇಖರ, ಸಹೋದರ ಸೇವಾ ಸಂಘದ ಮಂಟಮೆ ದಿನಕರ ಕರ್ಕೇರ, ವಿಕ್ರಂ, ಶಾಲಾ ಅಧ್ಯಾಪಕರು, ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ದೇವದಾಸ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಅಶ್ವನಿ ಕುಮಾರ್ ರೈ ಅವರು ಬೆಳ್ತಂಗಡಿ ರೋಟರಿ ಕ್ಲಬ್, ಅರ್ಕುಳ ಚಾರಿಟೇಬಲ್ ಟ್ರಸ್ಟ್ ಮತ್ತು ಅರ್ಕುಳ ಶೋಭಾ ಪುರುಷೋತ್ತಮ ಟ್ರಸ್ಟ್ ಸಹಯೋಗದಲ್ಲಿ ಅರ್ಕುಳ ಶ್ರೀ ರಾಮಾ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ರೂ.4.40ಲಕ್ಷ ಮೌಲ್ಯದ ಸೌಲಭ್ಯಗಳನ್ನು ಶಾಲೆಗೆ ಹಸ್ತಾಂತರಿಸುತ್ತಾ ಮಾತನಾಡುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.