ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿದೆ. ಸಿಎಎ, ಎನ್ಆರ್ಸಿ ಪ್ರತಿಭಟನೆಯ ಬಳಿಕ ಈಗ ಜೆಎನ್ಯು ದಾಂಧಲೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಪ್ರತಿಭಟನೆಗಳನ್ನು ಸಂವಿಧಾನದ ಮೌಲ್ಯವನ್ನು ಕಾಪಾಡುವ ಸಲುವಾಗಿ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಆದರೆ ಪ್ರತಿಭಟನೆಯ ವೇಳೆ ಪ್ರದರ್ಶಿಸಲಾದ ಪೋಸ್ಟರ್ಗಳು, ಮೊಳಗಿದ ಘೋಷಣೆಗಳು, ನಡೆದ ಹಿಂಸಾಚಾರಗಳು ಮಾತ್ರ ಬೇರೆಯದೇ ಕಥೆಯನ್ನು ಹೇಳುತ್ತಿವೆ.
ಪ್ರತಿಭಟನೆಯ ವೇಳೆ ಹಿಂದೂಗಳ ಪವಿತ್ರ ಸಂಕೇತ ‘ಓಂ’ ಅನ್ನು ನಾಝೀ ಸಂಕೇತವಾಗಿ ಪ್ರದರ್ಶಿಸಲಾಗಿದೆ. ಹಿಂದುತ್ವದ ಬಗ್ಗೆ ಕೆಟ್ಟ ಪದವನ್ನು ಬಳಕೆ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ನಮ್ಮ ವಿರೋಧ ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ವಿರುದ್ಧವೇ ಹೊರತು ಹಿಂದೂಗಳ ವಿರುದ್ಧ ಅಲ್ಲ ಎನ್ನುತ್ತಾರೆ. ಹಾಗಾದರೆ ಹಿಂದೂಗಳ ಬಗ್ಗೆ ಕೆಟ್ಟ ಪದ ಬಳಸಿದ್ದೇಕೆ, ಪವಿತ್ರ ಸಂಕೇತವನ್ನು ತಿರುಚಿದ್ದೇಕೆ? ಅವರು ಉತ್ತರ ನೀಡುವರೇ?
ಭಾರತದಲ್ಲಿ ಕಾಳಿ ಮಾತೆಗೆ ಅಪಾರ ಗೌರವವಿದೆ. ಆಕೆ ಭಕ್ತಿಯಿಂದ ಆರಾಧಿಸಲ್ಪಡುವವಳು. ಕಾಳಿ ಮುಖವನ್ನು ಹಿಜಬ್ನೊಳಗೆ ಇರುವಂತೆ ಚಿತ್ರಿಸಿ ಮಹಿಳೆಯರು ಹಿಂದೂ ರಾಷ್ಟ್ರವನ್ನು ಧ್ವಂಸ ಮಾಡಲಿದ್ದಾರೆ ಎಂಬ ಘೋಷಣೆಯ ಫಲಕವನ್ನು ಪ್ರತಿಭಟನೆಯ ವೇಳೆ ಪ್ರದರ್ಶಿಸಲಾಗಿದೆ.
ಒರಿಸ್ಸಾದ ಭುವನೇಶ್ವರದಲ್ಲಿ ‘ಕಾಫಿರೋಂಸೇ ಆಜಾದಿ’, ‘ಹಮ್ ಲೇಕೆ ರಹೇಂಗೇ ಆಜಾದಿ’ ಎಂಬ ಘೋಷಣೆಗಳನ್ನು ಕೂಗಿದೆ. ಈ ಘೋಷಣೆಗಳ ಅರ್ಥವೇನು? ಎಂಬುದನ್ನು ಪ್ರತಿಭಟನಾಕಾರರು ಸ್ಪಷ್ಟಪಡಿಸುವರೇ? ಅರಬ್ಬೀ ಭಾಷೆಯಲ್ಲಿ ಮುಸ್ಲಿಮೇತರರನ್ನು ಕಾಫಿರ್ ಎನ್ನುತ್ತಾರೆ. ಅಂದರೆ ಅಲ್ಲಾಹುವನ್ನು ನಂಬದವರು ಎಂದರ್ಥ.
ಬೆಂಗಳೂರಿನಲ್ಲಿ ಯುವಕರ ಗುಂಪೊಂದು ಕೆಟ್ಟ ಶಬ್ದದಲ್ಲಿ ಹಿಂದುತ್ವವನ್ನು ನಿಂದಿಸುವ ಫಲಕ ಪ್ರದರ್ಶಿಸಿತ್ತು. ಸಿಎಎ ವಿರೋಧೀ ಪ್ರತಿಭಟನೆಯಲ್ಲಿ ಇದರ ಅವಶ್ಯಕತೆ ಏನಿತ್ತು? ಅಷ್ಟಕ್ಕೂ ಇವರ ಪ್ರತಿಭಟನೆ ಯಾವುದರ ವಿರುದ್ಧವಾಗಿತ್ತು? ಓಂ ಅನ್ನು ಅವಹೇಳನ ಮಾಡುವ ಕಾರ್ಯದ ಹಿಂದಿನ ಅಜೆಂಡಾ ಏನಾಗಿತ್ತು? ಪಾಟ್ನಾದಲ್ಲಿ ಪ್ರತಿಭಟನಾಕಾರರು ದೇಗುಲದ ಮೇಲೆ ದಾಳಿ ನಡೆಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಮುಖ್ಯ ವಾಹಿನಿ ಮಾಧ್ಯಮಗಳು ಇದನ್ನು ಪ್ರಸಾರ ಮಾಡಲಿಲ್ಲ.
ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ‘ಮೂರ್ತಿಗಳು ನಾಶವಾದಾಗ, ಅಲ್ಲಾಹುವಿನ ಹೆಸರೊಂದೇ ಉಳಿಯುತ್ತದೆ’ ಎಂಬ ಘೋಷಣೆಗಳು ಕೇಳಿ ಬಂದವು. ಇಸ್ಲಾಂಗೆ ಸಂಬಂಧಿಸಿದ ಇತರ ಘೋಷಣೆಗಳನ್ನೂ ಕೂಗಲಾಯಿತು. ತಮ್ಮನ್ನು ತಾವು ನಾಸ್ತಿಕರು ಎಂದು ಕರೆದುಕೊಳ್ಳುವ ಎಡಪಂಥೀಯರು ಇಂತಹ ಘೋಷಣೆಗಳನ್ನು ಹೇಗೆ ಮೊಳಗಿಸಿದರು? ಅಥವಾ ಮೊಳಗಿಸಲು ಬಿಟ್ಟರು.
ಪ್ರತಿ ಹಿಂದೂ ಮಂತ್ರದಲ್ಲೂ ಹುಳುಕನ್ನು ಹುಡುಕುವ, ಓಂಕಾರವನ್ನು ಅವಹೇಳನ ಮಾಡುವ ಇವರಿಗೆ ಕಾಫಿರ್ ಎಂಬ ವಾಕ್ಯಗಳು ಹಿತವಾಗಿ ಕೇಳಿಸಿದವೇ?
ಅಷ್ಟಕ್ಕೂ ಸಿಎಎ ಕಾಯ್ದೆಯನ್ನು ತಂದಿದ್ದು ಸರ್ಕಾರ, ಇವರ ಸಿಟ್ಟು ಏನಿದ್ದರೂ ಸರ್ಕಾರದ ವಿರುದ್ಧವಾಗಿರಬೇಕಿತ್ತೇ ಹೊರತು ಈ ದೇಶದ ಬಹುಸಂಖ್ಯಾತರ ನಂಬಿಕೆಯ ವಿರುದ್ಧವಲ್ಲ. ಸಿಎಎ ಹೆಸರಿನಲ್ಲಿ ಹಿಂದೂಗಳನ್ನು ಅವಮಾನಿಸಿದರೆ ದೇಶದಲ್ಲಿ ಸಹಿಷ್ಣುತೆ ಎಂಬುದು ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಎಡಪಂಥೀಯತೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ನಕಲಿ ಬುದ್ಧಿಜೀವಿಗಳು ಅರ್ಥ ಮಾಡಿಕೊಳ್ಳಬೇಕಿತ್ತು.
ಹಿಂದೂ ವಿರೋಧಿಗಳಿಗೆ ಸಿಎಎ ಪ್ರತಿಭಟನೆ ಹಿಂದುತ್ವವನ್ನು ವಿರೋಧಿಸಲು ಒಂದು ಅಸ್ತ್ರವಾಗಿದೆ. ಹಿಂದೂಗಳ ಆತ್ಮಾಭಿಮಾನ ಕಡಿಮೆ ಮಾಡಿ, ಅವರಿಗೆ ಅವರ ಧರ್ಮದ ಮೇಲೆ ಅಸಹನೆ ಮೂಡಿಸುವ ಹುನ್ನಾರ ಅವರದ್ದು. ಇಡೀ ದೇಶವನ್ನು ನಾಸ್ತಿಕವನ್ನಾಗಿಸಿ ಅಲ್ಲಿ ಎಡಪಂಥದ ಪೊಳ್ಳು ಸಿದ್ಧಾಂತವನ್ನು ಸ್ಥಾಪಿಸುವುದು ಮತ್ತು ಹಿಂದೂ ನಂಬಿಕೆಯ ಸಮಾಧಿಯ ಮೇಲೆ ಕಮ್ಯೂನಿಸ್ಟ್ ಸಾಮ್ರಾಜ್ಯವನ್ನು ಕಟ್ಟುವ ಕುತಂತ್ರವೂ ಇದರ ಹಿಂದೆ ಇದೆ.
ಸಾವಿರಾರು ವರ್ಷಗಳ ಕಾಲ ಪರಕೀಯರ ಆಕ್ರಮಣವನ್ನು ಎದುರಿಸಿರುವ ಸನಾತನ ಹಿಂದೂ ಧರ್ಮದ ನಂಬಿಕೆ ಅಚಲ ಮತ್ತು ಸದೃಢವಾಗಿದೆ. ಯಾವುದೇ ಕುತಂತ್ರ ಮತ್ತು ದ್ವೇಷದ ಮಾತುಗಳಿಗೆ ಅದು ಹಿಂದೆಯೂ ಜಗ್ಗಿಲ್ಲ, ಮುಂದೆಯೂ ಜಗ್ಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.