ದುರಾದೃಷ್ಟಕರ ಬೆಳವಣಿಗೆಯಲ್ಲಿ, ಕೋಟಾದ ಜೆ ಕೆ ಲೋನ್ ಆಸ್ಪತ್ರೆಯಲ್ಲಿ ಶಿಶುಗಳ ಮರಣಮೃದಂಗ ಏರುತ್ತಲೇ ಇದೆ. ಈ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 100 ಮಕ್ಕಳು ಸಾವನ್ನಪ್ಪಿದ್ದಾರೆ. ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ದಾಖಲಾದ ಶಿಶುಗಳು ಎಚ್ಐಇ ಅಥವಾ ಹೈಪೋಕ್ಸಿಕ್ ಇಸ್ಕೆಮಿಕ್ ಎನ್ಸೆಫಲೋಪತಿಯಿಂದ ಬಳಲುತ್ತಿದ್ದರು, ಇದು ಗಂಭೀರ ಸ್ಥಿತಿಯಾಗಿದ್ದು, ಮೆದುಳಿಗೆ ಸರಿಯಾದ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಮೆದುಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ.
ಆಸ್ಪತ್ರೆಯ ಅಧೀಕ್ಷಕ ಡಾ. ಸುರೇಶ್ ದುಲಾರಾ ಅವರು ಹೇಳುವಂತೆ, “ಜೆಕೆ ಲೋನ್ ಆಸ್ಪತ್ರೆಯಲ್ಲಿ ಡಿಸೆಂಬರ್ 30 ಮತ್ತು 31 ರಂದು ಕನಿಷ್ಠ ಒಂಬತ್ತು ನವಜಾತ ಶಿಶುಗಳು ಮತ್ತು ಶಿಶುಗಳು ಸಾವನ್ನಪ್ಪಿದ್ದಾರೆ. ಡಿಸೆಂಬರ್ನಲ್ಲಿ ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ತಲುಪಿದೆ. ಡಿಸೆಂಬರ್ 30 ರಂದು ನಾಲ್ಕು ಮಕ್ಕಳು ಸತ್ತಿವೆ ಮತ್ತು ಡಿಸೆಂಬರ್ 31 ರಂದು ಐದು ಮಕ್ಕಳು ಸತ್ತಿವೆ. ಈ ಎಲ್ಲಾ ಮಕ್ಕಳು ಮುಖ್ಯವಾಗಿ ಕಡಿಮೆ ಜನನ ತೂಕ ಮತ್ತು ಜನನ ತೂಕದ ಹೈಪೋಥಿಸಿಸ್ ಕಾರಣದಿಂದ ಸಾವನ್ನಪ್ಪಿದ್ದಾರೆ” ಎಂದಿದ್ದಾರೆ. ಅಲ್ಲದೇ, ಅನಾರೋಗ್ಯಪೀಡಿತ ನವಜಾತ ಶಿಶುಗಳನ್ನು ನೋಡಿಕೊಳ್ಳುವಲ್ಲಿ ಪರಿಣತಿ ಹೊಂದಿರುವ ನವಜಾತ ತೀವ್ರ ನಿಗಾ ಘಟಕದ ಶುಶ್ರೂಷಾ ಉಸ್ತುವಾರಿವನ್ನು ರಿಪ್ಲೇಸ್ ಮಾಡಲಾಗಿದೆ ಎಂದು ಡಾ. ದುಲಾರಾ ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಕೇಂದ್ರ ಆಮ್ಲಜನಕ ಪೂರೈಕೆ ಲೈನ್ ಅನ್ನು ಅಳವಡಿಸಲು ಆದೇಶ ಹೊರಡಿಸಲಾಗಿದ್ದು, ಮುಂದಿನ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ವಿಜಯ್ ಸರ್ದಾನಾ ತಿಳಿಸಿದ್ದಾರೆ. ಸಂಸದರಾದ ಲಾಕೆಟ್ ಚಟರ್ಜಿ, ಕಾಂತಾ ಕಾರ್ಡಮ್ ಮತ್ತು ಜಸ್ಕೌರ್ ಮೀನಾ ಅವರನ್ನೊಳಗೊಂಡ ಬಿಜೆಪಿ ಸಂಸದೀಯ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಅದರ ಮೂಲಸೌಕರ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಒಂದು ದಿನದ ನಂತರ ಈ ನಿರ್ದೇಶನವನ್ನು ನೀಡಲಾಗಿದೆ.
ರಾಜಸ್ಥಾನದ ದುಃಖಕರ ಸ್ಥಿತಿ ಮತ್ತು ಅಲ್ಲಿನ ಸರ್ಕಾರದ ಉದಾಸೀನತೆ ಈ ವಿಷಯದಲ್ಲಿ ಎದ್ದು ಕಾಣುತ್ತಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿನ ರಾಷ್ಟ್ರೀಯ ಆಯೋಗವು (ಎನ್ಸಿಪಿಸಿಆರ್) ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಶೋಕಾಸು ನೋಟಿಸನ್ನು ನೀಡಿದೆ. “ಆಸ್ಪತ್ರೆಯ ಕ್ಯಾಂಪಸ್ ಒಳಗೆ ಹಂದಿಗಳು ಸುತ್ತುತ್ತಿರುವುದು ಕಂಡುಬಂದಿದೆ” ಎಂದು ಅಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಹೇಳಿದ್ದಾರೆ.
ಮಕ್ಕಳ ಸಾವಿನ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದ್ದಾರೆ, ಆದರೆ ರಾಜಸ್ಥಾನದ ಮುಖ್ಯಮಂತ್ರಿ ಈ ವಿಷಯದಲ್ಲಿ ನಿರಾಸಕ್ತಿ ತೋರಿಸಿದ್ದಾರೆ, “ಇದು ಹೊಸ ವಿಷಯವಲ್ಲ, ಈ ವಿಷಯಗಳು ರಾಜ್ಯದಲ್ಲಿ ನಡೆಯುತ್ತಲೇ ಇರುತ್ತವೆ.” ಎನ್ನುವಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ.
ತಕ್ಷಣ ಕ್ರಮ ಕೈಗೊಳ್ಳುವ ಬದಲು ತಮ್ಮ ಸರ್ಕಾರವನ್ನು ರಕ್ಷಿಸಲು ಅಲ್ಲಿನ ಸಿಎಂ ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಸಾವಿನ ಸಂಖ್ಯೆ ವಾಸ್ತವವಾಗಿ ಅತ್ಯಂತ ಕಡಿಮೆ ಎಂದು ಹೇಳಿದ್ದಾರೆ. “ಪ್ರತಿ ಮಗುವಿನ ಸಾವು ದುರದೃಷ್ಟಕರ. ಆದರೆ ಈ ಹಿಂದೆ ಒಂದು ವರ್ಷದಲ್ಲಿ 1,300 ರಿಂದ 1,500 ಸಾವುಗಳು ಸಂಭವಿಸಿವೆ. ಈ ವರ್ಷ, ಅಂಕಿ 900. ಆದರೆ ಏಕೆ 900? ಒಂದು ಮಗು ಕೂಡ ಸಾಯಬಾರದು. ಆದರೆ ರಾಜ್ಯ ಮತ್ತು ದೇಶದ ಪ್ರತಿ ಆಸ್ಪತ್ರೆಯಲ್ಲಿ ಪ್ರತಿದಿನ ಅನೇಕ ಮಕ್ಕಳ ಸಾವುಗಳು ದಾಖಲಾಗುತ್ತಿವೆ. ಇದು ಹೊಸದಲ್ಲ. ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಸಿಎಂ ಪ್ರತಿಪಾದಿಸಿದ್ದಾರೆ.
ಸಿಎಎ ಪ್ರತಿಭಟನೆಯಲ್ಲಿ ಬಂಧಿತರಾದ ದಂಪತಿಯ ಮಗು ಪೋಷಕರಿಂದ ದೂರವಾಗಿದೆ ಎನ್ನುವ ಕಾರಣಕ್ಕೆ ಮೊಸಳೆ ಕಣ್ಣೀರು ಸುರಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜಸ್ಥಾನ ಸರ್ಕಾರದ ಅಸಮರ್ಥತೆಯಿಂದ ಮಕ್ಕಳನ್ನು ಕಳೆದುಕೊಂಡಿರುವ ಬಡ ಕುಟುಂಬಗಳ ದುಃಸ್ಥಿತಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಆದರೆ ಮಕ್ಕಳ ಅಪೌಷ್ಠಿಕತೆಗಾಗಿ ಅವರು ಯೋಗಿ ಆದಿತ್ಯನಾಥ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಕೋಟಾ ಆಸ್ಪತ್ರೆ ದುರಂತದ ಬಗ್ಗೆ ಗಮನ ಹರಿಸದ ಕಾಂಗ್ರೆಸ್ ಮುಖಂಡರ ವಿರುದ್ಧ ಬಿಎಸ್ಪಿ ಮುಖ್ಯಸ್ಥ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
“ಕೋಟಾ ಆಸ್ಪತ್ರೆಯಲ್ಲಿ 100 ಮಕ್ಕಳ ಸಾವಿನ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೌನ ವಹಿಸಿರುವುದು ತುಂಬಾ ದುಃಖಕರವಾಗಿದೆ. ರಾಜ್ಯದಲ್ಲಿ ತನ್ನ ಪಕ್ಷದ ಸರ್ಕಾರದ ನಿರಾಸಕ್ತಿಯಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶುಗಳ ತಾಯಂದಿರನ್ನು ಯುಪಿಯಲ್ಲಿ ಮಾಡಿದಂತೆ ಭೇಟಿಯಾಗಬಹುದಿತ್ತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದುರಂತದಿಂದ ಬಾಧಿತರಾದ ಕೋಟಾ ಕುಟುಂಬಗಳನ್ನು ಹೋಗಿ ಭೇಟಿಯಾಗುವುದಿಲ್ಲ, ಆದರೆ ಉತ್ತರಪ್ರದೇಶದಲ್ಲಿನ ಸಂತ್ರಸ್ತರ ಬಗ್ಗೆ ಅವರ ಕಾಳಜಿ ರಾಜಕೀಯ ಅವಕಾಶವಾದವೆಂದು ಕಾಣುತ್ತದೆ, ಇವರ ಬಗ್ಗೆ ಉತ್ತರ ಪ್ರದೇಶದ ಸಾರ್ವಜನಿಕರು ಎಚ್ಚರದಿಂದಿರಬೇಕು” ಎಂದಿದ್ದಾರೆ.
ಕೋಟಾದಲ್ಲಿ ನಡೆದ 100 ಮಕ್ಕಳ ಸಾವಿನ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ವರ್ತನೆ ಖಂಡನೀಯವಾಗಿದೆ. ಕಾಂಗ್ರೆಸ್ ವರ್ತನೆ ಬೇಜವಾಬ್ದಾರಿಯಿಂದ ಮತ್ತು ಸಹಾನುಭೂತಿಯಿಲ್ಲದ್ದಾಗಿ ಎಂದು ಮಾಯಾವತಿ ಹೇಳಿದ್ದಾರೆ.
ಪ್ರಿಯಾಂಕ ವಾದ್ರಾ ಮೋದಿ ಸರ್ಕಾರವನ್ನು ದೂಷಿಸುವ, ಅವಹೇಳನ ಮಾಡುವ ಗುತ್ತಿಗೆಯನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಅವರ ಪಕ್ಷದ ಸರ್ಕಾರಗಳ ಅಸಮರ್ಥತತೆ ಅವರ ಕಣ್ಣಿಗೆ ಕಾಣಿಸುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.