ನವದೆಹಲಿ: ಶುದ್ಧ ಸಾರಿಗೆಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯವು ದೇಶಾದ್ಯಂತ 24 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 62 ನಗರಗಳಲ್ಲಿ 2,636 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಿದೆ.
FAME India (ಭಾರತದಲ್ಲಿ ವಿದ್ಯುತ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ) ಯೋಜನೆಯಡಿ 19 ಸಾರ್ವಜನಿಕ ಸಂಸ್ಥೆಗಳು 62 ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಸಚಿವಾಲಯ ಅನುಮೋದಿಸಿದೆ.
“ಈ ಎಲ್ಲಾ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ, 4 ಕಿಮೀ x 4 ಕಿಮೀ ಗ್ರಿಡ್ಗಳಲ್ಲಿ ಆಯ್ದ ನಗರಗಳಲ್ಲಿ ಕನಿಷ್ಠ ಒಂದು ಚಾರ್ಜಿಂಗ್ ಸ್ಟೇಷನ್ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ವ್ಯಾಪ್ತಿಯ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ವಿಶ್ವಾಸವನ್ನು ಹೆಚ್ಚಿಸಲಿದೆ, ಆತಂಕ ನಿವಾರಿಸಲಿದೆ” ಎಂದು ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲ ಸಲಕರಣೆಗಳ ತಯಾರಕರು (Original equipment manufacturer) ಗಳಿಗೆ ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಆರಂಭಿಸಲು ಪ್ರೋತ್ಸಾಹಿಸುವುದಾಗಿ ಅವರು ಹೇಳಿದರು.
“ಈ 2,636 ಚಾರ್ಜಿಂಗ್ ಕೇಂದ್ರಗಳಲ್ಲಿ 1,633 ಚಾರ್ಜಿಂಗ್ ಕೇಂದ್ರಗಳು ವೇಗದ ಚಾರ್ಜಿಂಗ್ ಕೇಂದ್ರಗಳಾಗಿವೆ ಮತ್ತು 1,003 ನಿಧಾನ ಚಾರ್ಜಿಂಗ್ ಕೇಂದ್ರಗಳಾಗಿವೆ. ಇದರೊಂದಿಗೆ ಆಯ್ದ ನಗರಗಳಲ್ಲಿ ಸುಮಾರು 14,000 ಸಂಖ್ಯೆಯ ಚಾರ್ಜರ್ಗಳನ್ನು ಸ್ಥಾಪಿಸಲಾಗುವುದು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೇಳಿಕೆಯ ಪ್ರಕಾರ, ಮಹಾರಾಷ್ಟ್ರಕ್ಕೆ 317 ಎಲೆಕ್ಟ್ರಿಕ್ ವಾಹನಗಳು, ಆಂಧ್ರಪ್ರದೇಶಕ್ಕೆ 266, 256 ತಮಿಳುನಾಡು, 228 ಗುಜರಾತ್, 205 ರಾಜಸ್ಥಾನ, 207 ಉತ್ತರ ಪ್ರದೇಶ, 172 ಕರ್ನಾಟಕ, 159 ಮಧ್ಯಪ್ರದೇಶ, 141 ಪಶ್ಚಿಮ ಬಂಗಾಳ, 138 ತೆಲಂಗಾಣ, 131 ಕೇರಳ, 72 ದೆಹಲಿ, 70 ಚಂಡೀಗಢ, 50 ಹರಿಯಾಣ, 40 ಮೇಘಾಲಯ, 37 ಬಿಹಾರ, 29 ಸಿಕ್ಕಿಂಗಳಲ್ಲಿ ಸ್ಥಾಪನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.