ಗುಜರಾತ್ನ ಸಬರ್ಕಥಾ ಜಿಲ್ಲೆಯ ಗ್ರಾಮವನ್ನು “ಆದರ್ಶ ಗ್ರಾಮ” ಎಂದು ಘೋಷಿಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮತ್ತು ದೇಶದ ಯಾವುದೇ ಮಹಾನಗರಗಳೊಂದಿಗೆ ಸ್ಪರ್ಧಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ 6000 ಜನಸಂಖ್ಯೆ ಹೊಂದಿರುವ ಪುನ್ಸಾರಿ ಗ್ರಾಮವು ಆದರ್ಶ ಗ್ರಾಮವಾಗಿ ಹೊರಹೊಮ್ಮಿದೆ.
ಹೊಸ ಮೂಲಸೌಕರ್ಯಗಳೊಂದಿಗೆ ನವೀಕರಿಸಲ್ಪಟ್ಟ ಮತ್ತು ಉತ್ತಮವಾಗಿ ನಿರ್ವಹಿಸಲ್ಪಡುವ ಶಾಲೆಗಳು ಅಥವಾ ಅಂಗನವಾಡಿ ಕೇಂದ್ರಗಳು ಇಲ್ಲಿ ಇವೆ. ಇಲ್ಲಿನ ರಸ್ತೆಗಳು ಸ್ವಚ್ಛ ಮತ್ತು ಕಸ ಮುಕ್ತವಾಗಿವೆ. ಎಲ್ಲಾ ರೀತಿಯ ಮಾಹಿತಿಯನ್ನು ಜನರಿಗೆ ತಲುಪಿಸಲು ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಲು ಗ್ರಾಮದ ಮೂಲೆ ಮೂಲೆಯಲ್ಲಿ ಸ್ಪೀಕರ್ಗಳನ್ನು ಸ್ಥಾಪಿಸಲಾಗಿದೆ.
ಇದಲ್ಲದೆ, ಹಳ್ಳಿಯ ಜನರು ತಮ್ಮ ಹಳ್ಳಿಯೊಳಗೆ ಸ್ಥಳಗಳಿಗೆ ಮತ್ತು ಹತ್ತಿರದ ಇತರ ಹಳ್ಳಿಗಳಿಗೆ ಪ್ರಯಾಣಿಸಲು ಬಸ್ ಸೌಲಭ್ಯ ಕೂಡ ಸಮರ್ಪಕವಾದ ರೀತಿಯಲ್ಲಿದೆ. ಇಲ್ಲಿ ಪ್ರತಿಯೊಂದು ಮೂಲಭೂತ ಅಗತ್ಯವನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ, ಇದರಿಂದ ಗ್ರಾಮಸ್ಥರ ಜೀವನಶೈಲಿ ಸುಧಾರಿಸಿದೆ.
ಹಳ್ಳಿಯನ್ನು ರೂಪಾಂತರಗೊಳಿಸಿದ ಮನ್ನಣೆ ಹಿಮಾಂಶು ಪಟೇಲ್ ಅವರಿಗೆ ಸಲ್ಲುತ್ತದೆ. ಅವರು 2006 ರಿಂದ 2014 ರವರೆಗೆ ಹಳ್ಳಿಯ ಸರಪಂಚ್ ಆಗಿ ಕಾರ್ಯನಿರ್ವಹಿಸಿದ್ದರು. ಪುನ್ಸಾರಿಯ ಯಶಸ್ಸಿಗೆ ಪಟೇಲ್ ಯಾವುದೇ ಹೊಸ ಉಪಕ್ರಮವನ್ನು ಪ್ರಾರಂಭಿಸಿಲ್ಲ, ಬದಲಾಗಿ ಸರ್ಕಾರವು ಪ್ರಾರಂಭಿಸಿದ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಬಳಸಿಕೊಂಡು ಅವರು ತಮ್ಮ ಗ್ರಾಮವನ್ನು ಆದರ್ಶ ಗ್ರಾಮವಾಗಿ ಪರಿವರ್ತಿಸಿದರು.
ಮುದ್ರಾ ಯೋಜನೆ, ಜನ ಧನ್ ಯೋಜನೆ ಅಥವಾ ಉಜ್ವಾಲಾ ಯೋಜನೆ ಬಗ್ಗೆ ಜನರಿಗೆ ಶಿಕ್ಷಣ ನೀಡುವುದರಿಂದ ಹಿಡಿದು ಗ್ರಾಮಕ್ಕೆ ರಾಜ್ಯ ಪ್ರಾಯೋಜಿತ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸುವವರೆಗೂ ಅವರು ಅವರು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಸುಸಜ್ಜಿತ ನಗರಗಳಲ್ಲಿ ಇರುವಂತೆಯೇ ಪುನ್ಸಾರಿಯಲ್ಲೂ ಉತ್ತಮ ರಸ್ತೆಗಳು, ಶುದ್ಧ ನೀರು, ವಿದ್ಯುತ್, ಸಿಸಿಟಿವಿ, ಆರ್ಒ ವಾಟರ್ ಪ್ಲಾಂಟ್, ತ್ಯಾಜ್ಯ ಸಂಗ್ರಹ, ಆರೋಗ್ಯ ಕೇಂದ್ರ, ಕೌಶಾಲ್ಯಭಿವೃದ್ಧಿ ಕೇಂದ್ರ, ಡಿಜಿಟಲ್ ಶಾಲೆಗಳಿವೆ. ಪ್ರತಿ ಇಂಟರ್ಸೆಕ್ಷನ್ಗಳಲ್ಲಿ ಬಸ್ ನಿಲ್ದಾಣ ಮತ್ತು ಧ್ವನಿ ವ್ಯವಸ್ಥೆಯಂತಹ ಸೌಲಭ್ಯಗಳು ಈ ಗ್ರಾಮದಲ್ಲಿವೆ.
ಪುನ್ಸಾರಿಯನ್ನು ಯಶಸ್ವಿ ನಗರವಾಗಿ ಪರಿವರ್ತನೆ ಮಾಡಿರುವ ಹಿಮಾಂಶು ಪಟೇಲ್ ಅವರು ಈಗ ಭಾರತದ ಸುಮಾರು 10,000 ಹಳ್ಳಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ, ಅವುಗಳನ್ನು ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತಿದ್ದಾರೆ. ಇವರು ಅಭಿವೃದ್ಧಿಪಡಿಸಿರುವ ಪುನ್ಸಾರಿ ಗ್ರಾಮವನ್ನು ನೋಡಲು, ಅಲ್ಲಿನ ಆಡಳಿತದ ಮಾದರಿಯನ್ನು ಅರಿತುಕೊಳ್ಳಲು ಸುಮಾರು 2 ಲಕ್ಷ ಜನರು ಇದುವರೆಗೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಪಟೇಲ್ ಅವರು ಇತರ ಸರಪಂಚರಿಗೆ ತಮ್ಮ ಗ್ರಾಮಗಳನ್ನು ಆದರ್ಶ ಗ್ರಾಮವನ್ನಾಗಿ ಮಾಡುವಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ, ಇದಕ್ಕಾಗಿ ಇತರ ಗ್ರಾಮಗಳ ಸರಪಂಚರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವ ತಂಡವನ್ನು ರಚನೆ ಮಾಡಿದ್ದಾರೆ. ಪುನ್ಸಾರಿ ಗ್ರಾಮದಲ್ಲಿ ಅವರು ಮಾಡಿದ ಕೆಲಸಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಮತ್ತು ಮನ್ನಣೆಯನ್ನು ಗಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.