ಅಂಬಿಕಾಪುರ: ಛತ್ತೀಸ್ಗಢದ ಅಂಬಿಕಾಪುರದ ಶಾಲೆಯೊಂದರ ಮಕ್ಕಳು ಚಿಪ್ಸ್, ಬಿಸ್ಕೆಟ್ ಮತ್ತು ಇತರ ಆಹಾರ ಪೊಟ್ಟಣಗಳ ಪ್ಲಾಸ್ಟಿಕ್ ಪ್ಯಾಕ್ ಅನ್ನು ಆಯಾ ಕಂಪನಿಗಳಿಗೆ ಕೊರಿಯರ್ ಮೂಲಕ ಪಾರ್ಸೆಲ್ ಮಾಡಿದ್ದಾರೆ. ಆಹಾರಗಳನ್ನು ಪ್ಯಾಕ್ ಮಾಡಲು ಜೈವಿಕವಾಗಿ ಕರಗುವ ವಸ್ತುಗಳನ್ನು ಬಳಸುವಂತೆ ಮಕ್ಕಳು ಕಂಪನಿಗಳಿಗೆ ಮನವಿ ಮಾಡಿದ್ದಾರೆ.
“ನಾವು ನಿಮ್ಮ ಆಹಾರವನ್ನು ಇಷ್ಟಪಡುತ್ತೇವೆ ಆದರೆ ಇದನ್ನು(ರ್ಯಾಪರ್) ಅನ್ನು ಏನು ಮಾಡಬೇಕೆಂದು ನಮಗೆ ತಿಳಿದಿಲ್ಲ, ಆದ್ದರಿಂದ ನಾವು ಅದನ್ನು ನಿಮಗೆ ಕಳುಹಿಸುತ್ತಿದ್ದೇವೆ” ಎಂದು ಪ್ರತಿಯೊಂದು ಪ್ಯಾಕಿನಲ್ಲೂ ಬರೆದು ಕೊರಿಯರ್ ಮಾಡಲಾಗಿದೆ. ಹೋಲಿ ಕ್ರಾಸ್ ಶಾಲೆಯ ಮಕ್ಕಳು ಈ ಕಾರ್ಯವನ್ನು ಮಾಡಿದ್ದಾರೆ.
ಅಲ್ಲದೇ ಆಹಾರಗಳನ್ನು ಪ್ಯಾಕ್ ಮಾಡಲು ಜೈವಿಕವಾಗಿ ಕರಗಬಲ್ಲಂತಹ ವಸ್ತುಗಳನ್ನು ಬಳಸಿ ಎಂದು ಮನವಿಯನ್ನು ಮಕ್ಕಳು ಮಾಡಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಕ್ಕಳು ಈ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ, ಕೆಲವು ಕಂಪನಿಗಳು ಈ ಮಕ್ಕಳನ್ನು ಭೇಟಿಯಾಗಿ ಹಾಗೆ ಮಾಡದಂತೆ ಮನವಿಯನ್ನೂ ಮಾಡಿಕೊಂಡಿದ್ದಾರೆ. ಆದರೆ ಮಕ್ಕಳು ಅವರ ಮಾತಿಗೆ ಜಗ್ಗಲಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸದ ಹೊರತು ನಾವು ಕೊರಿಯರ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಮಕ್ಕಳು ಕಂಪನಿಗಳಿಗೆ ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ಮಾತ್ರವಲ್ಲದೇ ಈ ಮಕ್ಕಳು ಕೆಲವರು ಸ್ವಲ್ಪ ಬಳಸಿ ಬಿಸಾಕುವ ಪೆನ್, ರಬ್ಬರ್, ಪೆನ್ಸಿಲ್ ಮುಂತಾದ ವಸ್ತುಗಳನ್ನು ಕೂಡ ಸಂಗ್ರಹಿಸಿ ಅದನ್ನು ಅಗತ್ಯವಿರುವ ಮಕ್ಕಳಿಗೆ ಹಂಚುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.