ನವದೆಹಲಿ: 2019 ರ ಡಿಸೆಂಬರ್ 15 ರಿಂದ ಫಾಸ್ಟ್ಯಾಗ್ ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಜಾರಿಗೆ ತಂದ ನಂತರ, ಫಾಸ್ಟ್ಟ್ಯಾಗ್ಗಳ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಈಗಾಗಲೇ 1.15 ಕೋಟಿ ಫಾಸ್ಟ್ಟ್ಯಾಗ್ಗಳನ್ನು ನೀಡಲಾಗಿದ್ದು, ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ವಿತರಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಒದಗಿಸುವ ಸಲುವಾಗಿ, ಡಿಜಿಟಲ್ ಇಂಡಿಯಾದ ನಿಜವಾದ ಸಾರವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅನುಕೂಲಕರ ಸಾಧನವಾಗಿ ಫಾಸ್ಟ್ಟ್ಯಾಗ್ ಪ್ರಮುಖ ಪಾತ್ರ ವಹಿಸಿದೆ ಎಂಬುದು ಈಗಾಗಲೇ ಸಾಬೀತಾಗಿದೆ.
ಅಧಿಕಾರಿಗಳ ಸಂಘಟಿತ ಪ್ರಯತ್ನಗಳು ಮತ್ತು ಶ್ರದ್ಧೆಯ ಮೇಲ್ವಿಚಾರಣೆಗಳು ಫಾಸ್ಟ್ಟ್ಯಾಗ್ನ ಆರಂಭಿಕ ಸಮಸ್ಯೆಗಳನ್ನು ದೂರ ಮಾಡುತ್ತಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳು ಫಾಸ್ಟ್ಟ್ಯಾಗ್ ವಹಿವಾಟಿನಲ್ಲಿ ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ಹೊಂದಿಸುತ್ತಿದೆ. ವಹಿವಾಟು ಸಂಖ್ಯೆ 30 ಲಕ್ಷ ದಾಟಿರುವುದರಿಂದ, ದೈನಂದಿನ ವಹಿವಾಟಿನ ಮೌಲ್ಯದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ 52 ಕೋಟಿ ರೂ. ತಲುಪಿದೆ.
ಫಾಸ್ಟ್ಟ್ಯಾಗ್ ಸುಲಭ ವಿಧಾನವಾಗಿರುವುದರಿಂದ ಈಗಾಗಲೇ ಅದು ಸ್ಮಾರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರ ಮನಸ್ಸಿನಲ್ಲಿ ಸಕಾರಾತ್ಮಕ ಪ್ರಭಾವ ಬೀರಿದೆ, ಅವರು ಟ್ರಾಫಿಕ್ನ ತಡೆರಹಿತ ಚಲನೆಯನ್ನು ಖಚಿತಪಡಿಸಿ ಟೋಲ್ ಪ್ಲಾಜಾಗಳಲ್ಲಿನ ತೊಂದರೆಗಳನ್ನು ಕಡಿಮೆ ಮಾಡುತ್ತಿದ್ದಾರೆ.
ಫಾಸ್ಟ್ಟ್ಯಾಗ್ನ ರೀಚಾರ್ಜ್ ಅನ್ನು ಸರಳಗೊಳಿಸುವ ಸಲುವಾಗಿ, ಸರ್ಕಾರವು ಇತ್ತೀಚೆಗೆ ಭೀಮ್ ಯುಪಿಐ ಆ್ಯಪ್ ಅನ್ನು ಇತರ ಹಲವು ರೀಚಾರ್ಜ್ ವಿಧಾನಗಳಲ್ಲಿ ಸೇರಿಸಿದೆ. ಯುಪಿಐ ನೋಂದಾಯಿತ ಯಾವುದೇ ಬ್ಯಾಂಕುಗಳ ಮೂಲಕ ರಿಚಾರ್ಜ್ ಮಾಡಬಹುದಾದ್ದರಿಂದ, ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡುವ ಸಮಸ್ಯೆಯನ್ನು ಸಹ ಪರಿಹರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.