ನವದೆಹಲಿ: ಭಾರತೀಯ ಸ್ಟಾರ್ಟ್ ಅಪ್ಗಳಲ್ಲಿನ ಆರಂಭಿಕ ಹಂತದ ಅನುದಾನದಲ್ಲಿ ಭಾರೀ ಹೆಚ್ಚಳವಾಗಿದೆ. 2018ರಲ್ಲಿ 334 ಕೋಟಿ ರೂಗಳ ಅನುದಾನ ನಡೆದಿತ್ತು, 2019 ರಲ್ಲಿ ಇದು 693 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಶುಕ್ರವಾರ ವರದಿ ತಿಳಿಸಿದೆ.
ಇದು ವ್ಯವಹಾರಗಳ ಸಂಖ್ಯೆಯಲ್ಲಿ ಶೇಕಡಾ 22 ರಷ್ಟು ಹೆಚ್ಚಳ ಮತ್ತು ಒಪ್ಪಂದದ ಗಾತ್ರದಲ್ಲಿ 70 ಪ್ರತಿಶತದಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪ್ರಮುಖ ಸಾಲ ಸಂಸ್ಥೆಯಾದ ಇನ್ನೋವೆನ್ ಕ್ಯಾಪಿಟಲ್ ವರದಿ ತಿಳಿಸಿದೆ.
ಆದಾಯಕ್ಕೂ ಮೊದಲಿನ ಹಂತದಲ್ಲಿ ಹೂಡಿಕೆದಾರರು ಸ್ಟಾರ್ಟ್ ಅಪ್ಗಳಿಗೆ ಧನಸಹಾಯ ನೀಡಲು ಹೆಚ್ಚು ಮುಕ್ತರಾಗಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ, ಇದು 2018 ರ ಶೇಕಡಾ 12 ರಿಂದ ಈ ವರ್ಷ ಶೇಕಡಾ 17 ಕ್ಕೆ ಏರಿಕೆಯಾಗಿದೆ.
ಹೂಡಿಕೆದಾರರು ಹೆಚ್ಚು ಅನುಭವಿ ಸಂಸ್ಥಾಪಕರನ್ನು ಬೆಂಬಲಿಸಲು ಆದ್ಯತೆ ನೀಡುತ್ತಲೇ ಇದ್ದಾರೆ ಎಂದು ವರದಿಯು ಬಹಿರಂಗಪಡಿಸಿದೆ, ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರುವ ಸಂಸ್ಥಾಪಕರ ಪ್ರಮಾಣವು 2017 ರಲ್ಲಿ 55 ಪ್ರತಿಶತದಿಂದ ಈ ವರ್ಷ ಶೇಕಡಾ 82 ಕ್ಕೆ ಏರಿದೆ.
“ಹೆಚ್ಚಿನ ಪ್ರಮಾಣದ ಒಪ್ಪಂದದ ಹರಿವು, ದೊಡ್ಡ ವಹಿವಾಟು ಗಾತ್ರಗಳು ಮತ್ತು ಹೆಚ್ಚಿನ ಮೌಲ್ಯಮಾಪನಗಳೊಂದಿಗೆ ಈ ವರ್ಷದ ಆರಂಭಿಕ ಹಂತದ ಹೂಡಿಕೆ ಚಟುವಟಿಕೆಯು ತುಂಬಾ ದೃಢವಾಗಿ ಸಾಗಿದೆ” ಎಂದು ಇನ್ನೋವೆನ್ ಕ್ಯಾಪಿಟಲ್ ಇಂಡಿಯಾದ ಸಿಇಒ ಆಶಿಶ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಆರಂಭಿಕ ಹಂತದಲ್ಲಿ ಸ್ಪರ್ಧಾತ್ಮಕ ತೀವ್ರತೆಯು ಹೆಚ್ಚಾಗಿದೆ, ಹೆಚ್ಚಿನ ಸಂಖ್ಯೆಯ ಸಾಂಸ್ಥಿಕ ಹೂಡಿಕೆದಾರರು ಸರಿಯಾದ ಅವಕಾಶಗಳನ್ನು ಹುಡುಕುತ್ತಿದ್ದಾರೆ” ಎಂದು ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.