ನವದೆಹಲಿ: ಕೇಂದ್ರವು ಬುಧವಾರ ಬಿಡುಗಡೆ ಮಾಡಿದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್ಗಢ ಮತ್ತು ಆಂಧ್ರಪ್ರದೇಶ ಇವೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಕೇಂದ್ರ ಸರ್ಕಾರ ಡಿಸೆಂಬರ್ 25 ಅನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತದೆ. ಈ ಹಿನ್ನಲೆಯಲ್ಲಿ ಉತ್ತಮ ಆಡಳಿತ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ.
ಒರಿಸ್ಸಾ, ಬಿಹಾರ, ಗೋವಾ, ಮತ್ತು ಉತ್ತರ ಪ್ರದೇಶಗಳು ಕಳಪೆ ಸಾಧನೆಯನ್ನು ಮಾಡಿವೆ ಮತ್ತು ಪಟ್ಟಿಯಲ್ಲಿ ಜಾರ್ಖಂಡ್ ಎಲ್ಲಾ ರಾಜ್ಯಗಳಿಗಿಂತಲೂ ಕೆಳಗೆ ಇದೆ.
ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ವಿಭಾಗದಲ್ಲಿ ಹಿಮಾಚಲ ಪ್ರದೇಶ ಪ್ರಥಮ ಸ್ಥಾನ ಪಡೆದರೆ, ಉತ್ತರಾಖಂಡ, ತ್ರಿಪುರ, ಮಿಜೋರಾಂ ಮತ್ತು ಸಿಕ್ಕಿಂ ನಂತರದ ಸ್ಥಾನದಲ್ಲಿವೆ. ಜಮ್ಮು ಮತ್ತು ಕಾಶ್ಮೀರ ಆರನೇ ಸ್ಥಾನದಲ್ಲಿದ್ದರೆ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ನಂತರದ ಸ್ಥಾನದಲ್ಲಿವೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುದುಚೇರಿ ಮೊದಲ ಸ್ಥಾನದಲ್ಲಿದೆ. ಚಂಡೀಗಢ ಮತ್ತು ದೆಹಲಿಗಿಂತ ಈ ರಾಜ್ಯ ಉತ್ತಮ ಆಡಳಿತ ನೀಡುತ್ತಿದೆ. ಲಕ್ಷಾದ್ವೀಪ ಕೊನೆಯ ಸ್ಥಾನದಲ್ಲಿದೆ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಮತ್ತು ಉತ್ತಮ ಆಡಳಿತ ಕೇಂದ್ರವು ಈ ಶ್ರೇಯಾಂಕಗಳನ್ನು ಪ್ರಾರಂಭಿಸಿದೆ. ಈ ಸೂಚ್ಯಂಕವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಸ್ಥಿತಿ ಮತ್ತು ವಿವಿಧ ಪಾಲುದಾರಿತ್ವದ ಪರಿಣಾಮವನ್ನು ನಿರ್ಣಯಿಸಲು ಒಂದು ಏಕರೂಪದ ಸಾಧನವಾಗಿದೆ.
“ಈ ಸೂಚ್ಯಂಕವನ್ನು ಆಡಳಿತದ ವಿವಿಧ ನಿಯತಾಂಕಗಳನ್ನು ಆಧರಿಸಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ” ಎಂದು ರಾಜ್ಯ ಖಾತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಸೂಚ್ಯಂಕವನ್ನು ಬಿಡುಗಡೆ ಮಾಡುವಾಗ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.