ನವದೆಹಲಿ: ತನ್ನ 166 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು 2018-19ರ ಆರ್ಥಿಕ ವರ್ಷವನ್ನು ತನ್ನ ಸುರಕ್ಷಿತಾ ವರ್ಷವೆಂದು ವರದಿ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೇ ಪ್ರಯಾಣಿಕರ ಸಾವುಗಳು ಅತೀ ವಿರಳವಾಗಿದೆ. ಈ ಮೂಲಕ ರೈಲ್ವೇಯು ಸುರಕ್ಷತಾ ದೃಷ್ಟಿಯಿಂದ ದೊಡ್ಡ ಸಾಧನೆ ಮಾಡಿದೆ.
ಭಾರತೀಯ ರೈಲ್ವೆಯ ಅಂಕಿಅಂಶಗಳ ಪ್ರಕಾರ, ಕಳೆದ 38 ವರ್ಷಗಳಿಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಒಟ್ಟು ಅಪಘಾತಗಳ ಸಂಖ್ಯೆ – ಘರ್ಷಣೆ, ರೈಲುಗಳಲ್ಲಿ ಬೆಂಕಿ, ಲೆವೆಲ್ ಕ್ರಾಸಿಂಗ್ ಅಪಘಾತಗಳು ಮತ್ತು ಹಳಿ ತಪ್ಪುವಿಕೆ ಶೇಕಡಾ 95 ರಷ್ಟು ಕಡಿಮೆಯಾಗಿದೆ.
2017-18ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆ ನೆಟ್ವರ್ಕ್ನಾದ್ಯಂತ 73 ಅಪಘಾತಗಳು ವರದಿಯಾಗಿವೆ. ನಿರಂತರ ಸುರಕ್ಷತಾ ಕ್ರಮಗಳ ಅನುಷ್ಠಾನದಿಂದ ಹಣಕಾಸು ವರ್ಷ 2019ರಲ್ಲಿ ಈ ಸಂಖ್ಯೆ ಮತ್ತಷ್ಟು ಕುಸಿದಿದೆ. ಭಾರತೀಯ ರೈಲ್ವೆ ವರದಿ ಪ್ರಕಾರ, ಹಣಕಾಸು ವರ್ಷ 2019ರ ಅವಧಿಯಲ್ಲಿ 59 ಅಪಘಾತಗಳು ಸಂಭವಿಸಿದೆ. ಅಲ್ಲದೇ, ಪ್ರತಿ ಮಿಲಿಯನ್ ಕಿಲೋಮೀಟರಿಗೆ ಒಟ್ಟು ರೈಲು ಅಪಘಾತಗಳ ಸಂಖ್ಯೆ 2018-19ರಲ್ಲಿ ಸಾರ್ವಕಾಲಿಕ ಕನಿಷ್ಠ 0.06 ಕ್ಕೆ ಇಳಿದಿದೆ.
1960-61ರಲ್ಲಿ ನಡೆದಿದ್ದ 2,131 ಅಪಘಾತಗಳ ಸಂಖ್ಯೆ 1970-71ರಲ್ಲಿ 840 ಕ್ಕೆ ಇಳಿದಿದೆ ಎಂದು ವರದಿಗಳು ತಿಳಿಸುತ್ತವೆ. 1980-81ರಲ್ಲಿ ಒಟ್ಟು ಅಪಘಾತಗಳ ಸಂಖ್ಯೆ 1,013, 1990-91ರಲ್ಲಿ ಇದು 532ಕ್ಕೆ ಇಳಿದಿದೆ. 2010-11ರಲ್ಲಿ ಇಂತಹ 141 ಪ್ರಕರಣಗಳು ದಾಖಲಾಗಿವೆ.
1990-1995ರ ನಡುವೆ ವಾರ್ಷಿಕವಾಗಿ ಸರಾಸರಿ 500 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಸುಮಾರು 2,400 ಸಾವುಗಳು ಮತ್ತು 4,300 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ, 2013-2018ರ ನಡುವೆ ಪ್ರತಿವರ್ಷ ಸರಾಸರಿ 110 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಸುಮಾರು 990 ಜನರು ಸಾವನ್ನಪ್ಪಿದ್ದಾರೆ ಮತ್ತು 1,500 ಮಂದಿ ಗಾಯಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.