ನವದೆಹಲಿ: ಕುಸ್ತಿಯಲ್ಲಿ ಹೆಸರು ಮಾಡುತ್ತಿರುವ ಉದಯೋನ್ಮುಖ ತಾರೆಯರ ಪೈಕಿ ಒಬ್ಬರಾದ ದೀಪಕ್ ಪುನಿಯ ‘ಜೂನಿಯರ್ ಪ್ರೀಸ್ಟ್ಐಲ್ ರಸ್ಲರ್ ಆಫ್ ದಿ ಇಯರ್’ ಎಂಬ ಬಿರುದು ನೀಡಿದೆ.
ಆಗಸ್ಟ್ ತಿಂಗಳ ಅವಧಿಯಲ್ಲಿ ಎಸ್ಟೋನಿಯಾದ ತಾಲಿನ್ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಕಿರೀಟವನ್ನು ಅಲಂಕರಿಸಿದ ನಂತರ ದೀಪಕ್ ಮಿಂಚಿನ ವೇಗದಲ್ಲಿ ಸಾಧನೆಯ ಉತ್ತುಂಗವನ್ನು ಏರುತ್ತಿದ್ದಾರೆ. 18 ವರ್ಷಗಳ ಬಳಿಕ ಈ ಚಾಂಪಿಯನ್ ಶಿಪ್ ಭಾರತಕ್ಕೆ ಒಲಿದಿದೆ. ಪುನಿಯಾ ಅವರು ವಿಶ್ವ ಚಾಂಪಿಯನ್ ಆಗುವ ಸಾಧನೆ ಮಾಡಿದಾಗಿನಿಂದಲೂ ರಸ್ಲಿಂಗ್ ಕ್ಷೇತ್ರದ ಕೇಂದ್ರ ಬಿಂದುವಾಗಿದ್ದಾರೆ. 2019 ರಲ್ಲಿ ಸೀನಿಯರ್ ವರ್ಲ್ಡ್ ರಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಇರಾನ್ನ ಹಸನ್ ಯಾಜ್ದಾನಿ ವಿರುದ್ಧ ಗಾಯದ ಕಾರಣದಿಂದಾಗಿ ಪುನಿಯಾ ಫೈನಲ್ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ, ಹೀಗಿದ್ದಾಗಲೂ ಅವರು ಬೆಳ್ಳಿ ಪದಕ ಜಯಿಸಿ ಟೋಕಿಯೊ 2020 ಒಲಿಂಪಿಕ್ಸ್ಗೆ 86 ಕೆಜಿ ಫ್ರೀಸ್ಟೈಲ್ ರಸ್ಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.
ಪುನಿಯಾ ಅವರ ಶಕ್ತಿ ಮತ್ತು ಉತ್ಸಾಹ ಅಸಾಧಾರಣವಾಗಿದೆ ಮತ್ತು ಅವರು ಈಗಾಗಲೇ ತಮ್ಮ ನಿಜವಾದ ಅರ್ಹತೆಯನ್ನು ಸಾಬೀತುಪಡಿಸಿದ್ದಾರೆ. ಒಲಿಂಪಿಕ್ಸ್ ಆರಂಭವಾಗುವುದಕ್ಕೆ ಕೇವಲ 100 ದಿನಗಳು ಬಾಕಿ ಇದೆ. ಈಗಾಗಲೇ ಪದಕ ಗೆಲ್ಲುವ ವಿಶ್ವಾಸವನ್ನು ಅವರು ತೋರ್ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.