ಜೋಧ್ಪುರ: ಒಂದು ಕಡೆ ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸಿ ವಿಧ್ವಂಸಕ ಕೃತ್ಯ ಎಸಗಲು ಪ್ರೇರಣೆ ನೀಡುತ್ತಿರುವ ಪಾಕಿಸ್ಥಾನ, ಮತ್ತೊಂದೆಡೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಭಾರತದ ಗಡಿಯಲ್ಲಿ ಕಣ್ಗಾವಲು ಇರಿಸುತ್ತಿದೆ.
ದ್ರೋನ್ ಸೇರಿದಂತೆ ಮುಂತಾದ ಸ್ಪೈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪಾಕಿಸ್ಥಾನ ಭಾರತದ ಗಡಿಯ ಮೇಲೆ ನಿಗಾ ಇರಿಸಿದೆ. ಇತ್ತೀಚಿಗಷ್ಟೇ ರಾಜಸ್ಥಾನದಲ್ಲಿನ ಬಿಎಸ್ಎಫ್ ಯೋಧರು ಸುಮಾರು 150-400 ಮೀಟರ್ ಎತ್ತರ ಚಲಿಸುತ್ತಿರುವ ಲೈಟ್ವೊಂದನ್ನು ಪಾಕಿಸ್ಥಾನದ ಗಡಿಯ ಹತ್ತಿರದಲ್ಲಿ ಅಳವಡಿಸಿರುವುದನ್ನು ಪತ್ತೆ ಹಚ್ಚಿದ್ದಾರೆ, ಇದು ದ್ರೋನ್ ಕ್ಯಾಮೆರಾ ಆಗಿರಬಹುದೆಂದು ಅಂದಾಜಿಸಲಾಗಿದೆ. ಭಾರತದ ಗಡಿಯನ್ನು ಸ್ಪೈ ಮಾಡುವ ನಿಟ್ಟಿನಲ್ಲಿ ಇದನ್ನು ಅಳವಡಿಸಲಾಗಿದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಪಾಕಿಸ್ಥಾನದ ಅಧಿಕಾರಿಗಳೊಂದಿಗೆ ವಿಷಯ ಪ್ರಸ್ತಾಪಿಸಿ ಭಾರತದ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಬಳಿಕ ಅದನ್ನು ಅಲ್ಲಿಂದ ತೆಗೆಯಲಾಗಿತ್ತು. ಆದರೆ ಇತರ ಪ್ರದೇಶಗಳಾದ ಬರ್ಮೆರ್, ಜೈಸ್ಲಮೇರ್, ಬಿಕನೇರ್, ಗಂಗಾನಗರ್ಗಳಲ್ಲಿ ಮತ್ತೆ ಇಂತಹ ಕ್ಯಾಮೆರಾಗಳನ್ನು ಪಾಕಿಗಳು ಅಳವಡಿಸಿದ್ದಾರೆ. ಭಾರತ ಮತ್ತೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೆಲವು ಕ್ಯಾಮೆರಾಗಳನ್ನು ತೆಗೆಯಲಾಗಿದೆ, ಕೆಲವು ಇನ್ನೂ ಅದೇ ಪ್ರದೇಶದಲ್ಲಿದೆ.
ನೇರವಾಗಿ ಯುದ್ಧ ಮಾಡುವ ಶಕ್ತಿಯಿಲ್ಲದ ಪಾಕಿಸ್ಥಾನ ಈ ರೀತಿ ಭಾರತದ ಮೇಲೆ ಕಣ್ಗಾವಲು ಇರಿಸಿ ಕಳ್ಳ ದಾರಿಯ ಮೂಲಕ ಭಾರತದ ಮೇಲೆ ಆಕ್ರಮಣ ನಡೆಸುವ ಹುನ್ನಾರ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.