ಬೆಂಗಳೂರು : ಜೆ.ಡಿ.ಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗಾಗಿ ಸಾಂತ್ವನ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.
ಖಾಸಗಿಯಾಗಿ ಸಾಲಪಡೆದ ಮತ್ತು ಬ್ಯಾಂಕ್ಗಳಿಂದ ಸಾಲಪಡೆದ ರೈತರ ಆಸ್ಥಿಯನ್ನು ಮುಟ್ಟುಗೂಲು ಹಾಕಲು ಬ್ಯಾಂಕ್ ಅಧಿಕಾರಿಗಳು ಅಥವಾ ಖಾಸಗಿಯವರು ಬಂದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಕಾಡಿಸಿದಲ್ಲಿ ಸಹಾಯವಾಣಿ ಸಂಖ್ಯೆ 9900031555, 9900025777 ಹಾಗೂ ಸ್ಥಿರ ದೂರವಾಣಿ-080 23619909 ಕರೆ ಮಾಡಿದರೆ ಜೆಡಿಎಸ್ ಮುಖಂಡರು ಆ ರೈತರ ಸಹಾಯಕ್ಕೆ ಧಾವಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರಕಾರಕ್ಕೆ ರೈತರ ಹಿತವನ್ನು ಕಾಪಾಡುವ ಯೋಚನೆಯಿದೆ ಎಂದು ಅನ್ನಿಸುತ್ತಿಲ್ಲ. ಈ ವಿಷಯವನ್ನು ನಾನು ಕಲಾಪದ ಸಮಯದಲ್ಲಿ ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಒಟ್ಟು 60ಲಕ್ಷ ರೈತರಿದ್ದು ಕೇವಲ 20ಲಕ್ಷ ರೈತರಿಗೆ ರಿಯಾಯಿತಿ ಸಾಲ ದೊರಕುತ್ತಿದೆ. ಇನ್ನುಳಿದಂತೆ ಇತರ ರೈತರು ಖಾಸಗಿ ಅಥವಾ ಬೇರೆ ಮೂಲಗಳಿಂದ ಸಾಲ ಪಡೆಯುತ್ತಿದ್ದಾರೆ’ ಎಂದರು.
ಅಲ್ಲದೇ ರೈತರು ಸಾವಿಗೆ ಶರಣಾಗಬಾರದು. ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಹಿತಕಾಯಲು ಬೇಕಾದ ಸೂಕ್ತ ಕಾನೂನು ತರಲು2-3ವರ್ಷ ತಾಳ್ಮೆಯಿಂದ ಕಾಯಿರಿ ಎಂದರು. ಸಾಲದ ಹೊರೆಯಿಂದ ಸತ್ತ ರೈತ ಕುಟುಂಬಗಳಿಗೆ ಜೆಡಿಎಸ್ನ 40 ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲಿದ್ದಾರೆಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.