ನಿಸ್ವಾರ್ಥ ಸೇವೆಯ ಸೌಂದರ್ಯ ಮತ್ತು ಹೊಳಪು ಕೆಲವೊಮ್ಮೆ ಈ ಭೂಮಿಯಲ್ಲಿ ಕಾಣಸಿಗುವುದಿಲ್ಲ ಮತ್ತು ಪ್ರಶಂಸೆಗೂ ಪಾತ್ರವಾಗುವುದಿಲ್ಲ. ಹಿಂದುಳಿದ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆಯನ್ನುಂಟು ಮಾಡುವ ಹಲವು ಸಂಸ್ಥೆಗಳ ಮಾನವೀಯತೆ, ಪ್ರೀತಿ ಮತ್ತು ಸೇವೆಯಿಂದ ಪ್ರೇರಿತವಾದ ನಿಜವಾದ ಸಮರ್ಪಣೆಯ ಬಗ್ಗೆ ಜಗತ್ತು ತಿಳಿದುಕೊಳ್ಳಬೇಕು. “ಆರುಷಾ ಕ್ರಿಯೇಷನ್ಸ್” ಅಂತಹ ಕೆಲಸವನ್ನು ಮಾಡುತ್ತಿದೆ. ಇಂತಹ ಸೇವಾ ಸಂಸ್ಥೆಗಳ ಕಾರ್ಯವನ್ನು ತೆರೆ ಮರೆಯಿಂದ ಹೊರತರುವ ಗುರಿಯನ್ನು ಹೊಂದಿದೆ. ಸಮರ್ಪಣ್ ಎನ್ನುವುದು ಎನ್ಜಿಓಗಳ ಅಥವಾ ಸಾಮಾಜಿಕ ಸಂಸ್ಥೆ ಅಥವಾ ಸೇವಾ ಸಂಸ್ಥೆಗಳು ಮಾಡಿದ ಕೆಲಸದ ಕುರಿತು ಜನರಿಗೆ ಅರಿವನ್ನು ಮೂಡಿಸುವ ಟಿವಿ ಧಾರಾವಾಹಿ ಸರಣಿಯಾಗಿದೆ.
ಪೌರಾಣಿಕ ಮರಾಠಿ ಚಲನಚಿತ್ರಗಳಲ್ಲಿ ಪಳಗಿರುವ ನಿರ್ಮಾಪಕ ಶ್ರೀ ರಾಜ್ದುತ್ಜಿ ಅವರೊಂದಿಗೆ ತರಬೇತಿ ಪಡೆದ ಏಕನಾಥ ಸತ್ಪುರ್ಕರ್ ಅವರು ಮಹತ್ವದ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು “ಆರುಶಾ ಕ್ರಿಯೇಷನ್ಸ್” ಅನ್ನು ಸ್ಥಾಪಿಸಿದರು. ಸಮೂಹ ಮಾಧ್ಯಮದ ಸಾಮರ್ಥ್ಯವನ್ನು ಕೇವಲ ಮನರಂಜನೆ ಮತ್ತು ಆಕರ್ಷಕ ಸುದ್ದಿಗಳಿಗಿಂತಲೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವುದು ಅವರ ಉದ್ದೇಶ.
ಸೇವಾ ಸಂಸ್ಥೆಗಳ ಸಾಮಾಜಿಕ ಎಂಜಿನಿಯರಿಂಗ್ ಅನ್ನು ಸಮಾಜದ ಮುಂದೆ ಪ್ರದರ್ಶಿಸುವುದು ಅವರ ಯೋಜನೆಯಾಗಿದೆ. ಅನೇಕ ಪ್ರಯೋಗಗಳು ಮತ್ತು ಕ್ಲೇಶಗಳನ್ನು ನಿವಾರಿಸಿಕೊಂಡ ಬಳಿಕ ಆರುಷಾ ಕ್ರಿಯೇಷನ್ಸ್ “ತಪಸ್ಯ” ಸರಣಿಯನ್ನು ಅಭಿವೃದ್ಧಿಪಡಿಸಿತು, ಇದು ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಸ್ಥಿರವಾದ ದೃಢ ನಿಶ್ಚಯದಿಂದ ನಿವಾರಿಸುತ್ತಿರುವ ಸಂಸ್ಥೆಗಳನ್ನು ಎತ್ತಿ ತೋರಿಸುತ್ತದೆ. ಈ ಸೇವಾ ಸಂಸ್ಥೆಗಳು ಮತ್ತು ಅವರಿಗಾಗಿ ಕೆಲಸ ಮಾಡುವ ಜನರು ಹಣಕಾಸಿನ ನೆರವು ಇಲ್ಲದೆ ಕೆಲಸ ಮಾಡುತ್ತಾರೆ, ಹೆಸರಿಲ್ಲ, ಖ್ಯಾತಿಯಿಲ್ಲ, ಆದರೂ ಅವರು ಸೇವೆ ನಿರಂತರ. “ತಪಸ್ಯ” ಧಾರಾವಾಹಿಯ ಮಾಧ್ಯಮದ ಮೂಲಕ ಇಂತಹ ಕೆಲಸವನ್ನು ಸಾರ್ವಜನಿಕರ ಗಮನಕ್ಕೆ ತರುವುದು ಆರುಷಾ ಕ್ರಿಯೇಷನ್ಸ್ನ ಪ್ರಾಥಮಿಕ ಗುರಿಯಾಗಿದೆ.
ಈ ಧಾರಾವಾಹಿ ವಿಕಲಚೇತನರು, ನಿರುದ್ಯೋಗಿಗಳು, ಮಹಿಳೆಯರು, ಕುರುಡರು, ವನವಾಸಿಗಳು, ವೈದ್ಯಕೀಯ ಆರೈಕೆಯ ಅಗತ್ಯವಿರುವ ಜನರಿಗಾಗಿ ಕೆಲಸ ಮಾಡುವ ಜನರ ಮತ್ತು ಸಂಸ್ಥೆಯ ಕೆಲಸಗಳ ಮೇಲೆ ಕೇಂದ್ರೀಕರಿಸಿದೆ. ಅದರ 52 ಸಂಚಿಕೆಗಳಲ್ಲಿ ಸೆಲೆಬ್ರಿಟಿಗಳೂ ಇದ್ದರು ಮತ್ತು ಸಹ್ಯಾದ್ರಿ ದೂರದರ್ಶನ ಚಾನೆಲ್ನಲ್ಲಿ ಇದು ಪ್ರಸಾರವಾಯಿತು.
ಈ ಧಾರಾವಾಹಿ ಪ್ರಧಾನಿ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಗಮನವನ್ನು ಕೂಡ ಸೆಳೆದಿದೆ. ಈ ಧಾರಾವಾಹಿ ರಾಷ್ಟ್ರದ ಯುವಕರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದರು. “ತಪಸ್ಯ ಡಿವಿಡಿ ಸೆಟ್” ನ ಮೊದಲ ಭಾಗವನ್ನು ಸಂಘದ ಡಾ.ಅನಿಲ್ ಕಾಕೋಡ್ಕರ್ ಮತ್ತು ಅರುಣ್ ನಲವಾಡೆ, ಡಾ. ಅಶೋಕ್ ಕುಕಾಡೆ ಅವರು ಪ್ರಾರಂಭಿಸಿದರು. 2 ನೇ ಸೆಟ್ ಅನ್ನು ಡಾ.ಮೋಹನ್ ಭಾಗವತ್ ಅವರಿಂದ ಬಿಡುಗಡೆಗೊಳಿಸಲಾಗಿದೆ.
“ತಪಸ್ಯ” ಧಾರವಾಹಿಯ ನಂತರ, ಏಕನಾಥ್ ಸತ್ಪುರ್ಕರ್ ಅವರು “ಸಮರ್ಪಣ್” ಎಂಬ ಪರಿಕಲ್ಪನೆಯತ್ತ ಹೊರಳಿದರು. “ತಪಸ್ಯ” ಯಶಸ್ಸಿನ ನಂತರ ವಿಶ್ರಾಂತಿ ಪಡೆದ ಬಳಿಕ ಅವರು ಮುಂದಿನ ದೊಡ್ಡ ಯೋಜನೆಯನ್ನು ತಕ್ಷಣ ವಾಸ್ತವಕ್ಕೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು.
ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಅಂತ್ಯವಿಲ್ಲ. ಆದಾಗ್ಯೂ, ಅಂತಹ ಕಾರಣಗಳಿಗಾಗಿ ಹೋರಾಡಲು ಸಿದ್ಧರಿರುವ ಜನರಿಗೆ ಯಾವುದೇ ಕೊರತೆಯಿಲ್ಲ. “ಸಮರ್ಪಣ್” ಧಾರಾವಾಹಿ ಸಂಸ್ಥೆಗಳು ಮತ್ತು ಅಂತಹ ಸಮಸ್ಯೆಗಳೊಂದಿಗೆ ಹೋರಾಡುವ ಜನರ ಮೇಲೆ ಕೇಂದ್ರೀಕರಿಸುತ್ತದೆ.
ಇಂತಹ ಸಂಸ್ಥೆಗಳನ್ನು ಜನರು ತಮ್ಮ ಮನಸ್ಸಿನಿಂದ ಹೊರಹಾಕಲು ಸಾಧ್ಯವಿಲ್ಲ ಮತ್ತು ಇವುಗಳ ಬಗ್ಗೆ ಕೆಲಸದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುತ್ತಾರೆ. ಇಂತಹ ಸಂಸ್ಥೆಗಳಿಗೆ ಸಹಾಯವನ್ನು ಮಾಡಲು ಬಯಸುತ್ತಾರೆ. ತಮ್ಮ ಸ್ಥಳೀಯ ನಗರಗಳಲ್ಲಿನ ಸಂಸ್ಥೆಗಳು ಮತ್ತು ಸ್ವಯಂಸೇವಕರಿಗೆ ಸಹಾಯ ಮಾಡಲು ಬಯಸುವ ಜನರಿಗೆ ಇಂತಹ ಸಂಸ್ಥೆಗಳನ್ನು ಹುಡುಕಿಕೊಡಬೇಕು ಎಂಬುದು ಈ ಧಾರಾವಾಹಿಯ ನಿಜವಾದ ಉದ್ದೇಶವಾಗಿದೆ.
“ತಪಸ್ಯ”ದಿಂದ ಪ್ರೇರಿತರಾಗಿ ಅನೇಕ ಜನರು ಸಾಮಾಜಿಕ ಸೇವೆಯನ್ನು ಮಾಡುವ ಹೊಸ ಸಂಸ್ಥೆಗಳನ್ನು ಸ್ಥಾಪಿಸಿದರು. ಹೀಗಾಗಿ, ಮಾದರಿ ಬದಲಾದರೂ, ಕೃತಿಯ ಮೂಲ ಸ್ವರೂಪ ಒಂದೇ ಆಗಿರುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಚಲಿತದಲ್ಲಿರುವ ಈ ಸಾಮಾಜಿಕ ಸೇವೆಯ ಸಂಪ್ರದಾಯವನ್ನು ಮುಂದುವರಿಸಲು ಭವಿಷ್ಯದ ಪೀಳಿಗೆಗೆ ಪ್ರೇರಣೆ ನೀಡುವುದು “ಸಮರ್ಪಣ್”ನ ಪ್ರಾಥಮಿಕ ಆಲೋಚನೆ. ಅಂತಹ ಉದಾತ್ತ ಕಾರ್ಯವನ್ನು ಜನಸಾಮಾನ್ಯರ ಗಮನಕ್ಕೆ ತರುವ ಮಾಧ್ಯಮವಾಗಬೇಕೆಂಬ ಗುರಿ ಹೊಂದಿದೆ.
“ತಪಸ್ಯ” ಧಾರಾವಾಹಿ ಮಹಾರಾಷ್ಟ್ರದಲ್ಲಿರುವ ಅಂತಹ ಸಂಸ್ಥೆಗಳ ಮೇಲೆ ಮಾತ್ರ ಕೇಂದ್ರೀಕರಿಸಿತ್ತು, ಆದರೆ “ಸಮರ್ಪಣ್” ದೇಶದೆಲ್ಲೆಡೆ ಇರುವಂತಹ ಸಂಸ್ಥೆಗಳನ್ನು ಕೆಲಸದ ಕುರಿತು ತೋರಿಸುತ್ತದೆ.
ಈ ಧಾರಾವಾಹಿಯ ಚಿತ್ರೀಕರಣಕ್ಕಾಗಿ 5 ಘಟಕಗಳಿವೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಯಶಸ್ಸಿಗೆ ಶ್ರದ್ಧೆಯಿಂದ ಶ್ರಮಿಸುತ್ತಿರುವ 50-60 ಜನರ ತಂಡವನ್ನು ಒಳಗೊಂಡಿದೆ, ಅವರು ರಾಷ್ಟ್ರವ್ಯಾಪಿ ಕೆಲಸ ಮಾಡುತ್ತಾರೆ. ಸಿನಿ ಪ್ರಪಂಚದ ಹಿರಿಯ ಬರಹಗಾರರು “ಸಮರ್ಪಣ್” ನ ಕಂತುಗಳನ್ನು ಬರೆದಿದ್ದಾರೆ. ಅವರಲ್ಲಿ ಅಭಿರಾಮ್ ಭಡ್ಕಂಕರ್, ಪ್ರಸಾದ್ ಗರ್ಭೆ, ಅನುರಿಚಾ ಸಿಂಗ್, ಚಿಡ್ವಿಲಾಸ್ ಕ್ಷೀರಸಾಗರ್, ವಿಜಯಲಕ್ಷ್ಮಿ ಸಿಂಗ್, ಕೆಟ್ಕಿ ಕುಲಕರ್ಣಿ ಮುಂತಾದವರು ಸೇರಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಪ್ರಸಾದ್ ಪಾಟ್ಕಿ, ಚಂದ್ರಶೇಖರ್ ಕುಲಕರ್ಣಿ ಮತ್ತು ಕಮಲ್ ನಾಥ್ ವಹಿಸಿಕೊಂಡಿದ್ದಾರೆ. ಶೀರ್ಷಿಕೆ ಗೀತೆಯನ್ನು ಸುರೇಶ್ ವಾಡ್ಕರ್ ಮತ್ತು ದೇವ್ಕಿ ಪಂಡಿತ್ ಹಾಡಿದ್ದಾರೆ ಮತ್ತು ಸಂಗೀತವನ್ನು ಅಶೋಕ್ ಪಾಟ್ಕಿ ಸಂಯೋಜಿಸಿದ್ದಾರೆ. ಈ ಸಂಸ್ಥೆಗಳ ಕಾರ್ಯಗಳನ್ನು ತಿಳಿಸಲು ಪರೇಶ್ ರಾವಲ್, ವಿವೇಕ್ ಒಬೆರಾಯ್, ಮನೋಜ್ ಜೋಶಿ, ಸಚಿನ್ ಖೇದೇಕರ್, ಸೋನಾಲಿ ಕುಲಕರ್ಣಿ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳನ್ನು ಸೇರಿಸಲಾಗಿದೆ.
ನ್ಯಾಷನಲ್ ದೂರದರ್ಶನ – ಡಿಡಿ 1 ನಲ್ಲಿ ನವೆಂಬರ್ 17 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 10:00 ಗಂಟೆಗೆ “ಸಮರ್ಪಣ್” ಪ್ರಸಾರವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.