ನವದೆಹಲಿ: ಚಂದ್ರಯಾನ -2 ಯೋಜನೆಯ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -3 ಯೋಜನೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ, ಇದಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಿದೆ.
“ಅಗತ್ಯವಿರುವ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲು ಇಸ್ರೋ ಚಂದ್ರ ಪರಿಶೋಧನಾ ಕಾರ್ಯಗಳ ಮಾರ್ಗಸೂಚಿಯನ್ನು ರೂಪಿಸಿದೆ. ಈ ಮಾರ್ಗಸೂಚಿಯನ್ನು ಬಾಹ್ಯಾಕಾಶ ಆಯೋಗದ ಮುಂದೆ ಪ್ರಸ್ತುತಪಡಿಸಲಾಗಿದೆ. ತಜ್ಞರ ಸಮಿತಿಯ ಅಂತಿಮ ವಿಶ್ಲೇಷಣೆ ಮತ್ತು ಶಿಫಾರಸುಗಳ ಆಧಾರದ ಮೇಲೆ, ಭವಿಷ್ಯದ ಚಂದ್ರಯಾನ ಕಾರ್ಯವು ಪ್ರಗತಿಯನ್ನು ಕಾಣಲಿದೆ” ಎಂದು ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, “ತಜ್ಞರ ಸಮಿತಿಯು ಫ್ಲೈಟ್ ಡಾಟಾವನ್ನು ವಿಶ್ಲೇಷಿಸಿದೆ ಮತ್ತು ಹಾರಾಟದ ನಡವಳಿಕೆಯನ್ನು ಮರುನಿರ್ಮಾಣ ಮಾಡಲು ವ್ಯಾಪಕವಾದ ಸಿಮ್ಯುಲೇಶನ್ಗಳನ್ನು ನಡೆಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು. “ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಮುಂದಿನ ಚಂದ್ರಯಾನ ಯೋಜನೆಯಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಹೇಳಿದ್ದಾರೆ.
ಅನೇಕ ಸಂಸ್ಥೆಗಳು ಮತ್ತು ಹಿರಿಯ ವಿಜ್ಞಾನಿಗಳನ್ನು ಒಳಗೊಂಡ ಸಮಿತಿಯು ಚಂದ್ರಯಾನ -2 ರ ಸಮಸ್ಯೆಗಳನ್ನು ಮತ್ತು ಅದರ ಕಠಿಣ ಇಳಿಯುವಿಕೆಯ ಹಿಂದಿನ ಕಾರಣಗಳನ್ನು ಅಧ್ಯಯನ ಮಾಡಲು ಕೆಲಸ ಮಾಡುತ್ತಿದೆ ಎಂದು ಇಸ್ರೋ ವಕ್ತಾರ ವಿವೇಕ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.