ಬೆಂಗಳೂರು: ಕರ್ನಾಟಕ ಸರ್ಕಾರವು ರೆಗ್ಯುಲೇಟರಿ ಸ್ಯಾಂಡ್ಬಾಕ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ಕಾನೂನು ನಿಯಮ ತರಲು ಯೋಜಿಸುತ್ತಿದೆ, ಇದು ತಂತ್ರಜ್ಞಾನ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಸುಲಲಿತ ವಿಧಾನದಲ್ಲಿ ಪರೀಕ್ಷೆಗೊಳಪಡಿಸಲು ಅನುವು ಮಾಡಿಕೊಡುತ್ತದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರದಿಂದ ಅತೀ ದೊಡ್ಡ ಘೋಷಣೆ ಇದಾಗಿದೆ.
ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಅಂತಹ ಕಾನೂನನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಲ್ಲಿಯವರೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ), ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಮಾತ್ರ ರೆಗ್ಯುಲೇಟರ್ ಸ್ಯಾಂಡ್ಬಾಕ್ಸ್ ಚೌಕಟ್ಟುಗಳನ್ನು ಪ್ರಾರಂಭಿಸಿವೆ.
‘ಸ್ಯಾಂಡ್ಬಾಕ್ಸ್’ ನಿಯಮದ ಅಡಿಯಲ್ಲಿ, ಕಂಪನಿಗಳು ವಾಣಿಜ್ಯ ಉಡಾವಣೆಗೆ ಹೋಗುವ ಮೊದಲು ಲೈವ್ ಪರಿಸ್ಥಿತಿಯಲ್ಲಿ ತಮ್ಮ ಆವಿಷ್ಕಾರಗಳ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಬಹುದು.
ರೆಗ್ಯುಲೇಟರಿ ಸ್ಯಾಂಡ್ಬಾಕ್ಸ್ ಎಂಬುದು, ನಿಯಂತ್ರಿತ ಪರಿಸರದಲ್ಲಿ ಹೊಸ ಉತ್ಪನ್ನಗಳ ಅಥವಾ ಸೇವೆಗಳ ನೇರ-ಪರೀಕ್ಷೆ (live-testing)ಗೆ ಅನುವು ಮಾಡಿಕೊಡುವ ಒಂದು ಚೌಕಟ್ಟಾಗಿದೆ.
ರೆಗ್ಯುಲೇಟರಿ ಸ್ಯಾಂಡ್ ಬಾಕ್ಸ್ಗಳು ಕಠಿಣ ನಿರ್ಬಂಧಗಳ ಹೊರೆಯನ್ನು ತೆಗೆದು ಹಾಕುತ್ತವೆ, ಇದು ಸುಲಲಿತ ಉದ್ಯಮವನ್ನು ಸಾಧ್ಯವಾಗಿಸುತ್ತದೆ ಮತ್ತು ಸ್ಥಳಿಯ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಉದ್ಯೋಗವಕಾಶಗಳು ಹೆಚ್ಚುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.