ಬ್ರೆಸಿಲಿಯಾ: ಭಯೋತ್ಪಾದನೆಯಿಂದಾಗಿ ಜಾಗತಿಕ ಆರ್ಥಿಕತೆಯು ಸುಮಾರು 1 ಟ್ರಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಅಲ್ಲದೇ, ಭಯೋತ್ಪಾದನೆಯು ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಗೆ ದೊಡ್ಡ ಬೆದರಿಕೆ ಎಂದು ಕರೆದಿದ್ದಾರೆ.
ಬ್ರೆಝಿಲ್ನ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆದ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ, ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳು ವ್ಯಾಪಾರ ಮತ್ತು ವ್ಯವಹಾರವನ್ನು ನೋಯಿಸುತ್ತವೆ. ಇವುಗಳ ವಿರುದ್ಧ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರಯತ್ನಗಳು ಭದ್ರತೆಯ ಸಹಕಾರಕ್ಕೆ ಪ್ರಚೋದನೆಯನ್ನು ನೀಡುತ್ತದೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.
“ಭಯೋತ್ಪಾದನೆ, ಭಯೋತ್ಪಾದಕ ಹಣಕಾಸು, ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳಿಂದ ಸೃಷ್ಟಿಯಾದ ಅನುಮಾನದ ವಾತಾವರಣವು ವ್ಯಾಪಾರ ಮತ್ತು ವ್ಯವಹಾರಗಳಿಗೆ ಹಾನಿ ಮಾಡುತ್ತದೆ. ಭಯೋತ್ಪಾದನೆಯನ್ನು ಎದುರಿಸಲು ಬ್ರಿಕ್ಸ್ ಕಾರ್ಯತಂತ್ರದ ಕುರಿತು ಮೊದಲ ಸೆಮಿನಾರ್ ಆಯೋಜಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಐದು ಉಪ-ಕಾರ್ಯನಿರತ ಗುಂಪುಗಳ ಇಂತಹ ಪ್ರಯತ್ನಗಳು ಮತ್ತು ಚಟುವಟಿಕೆಗಳು ಭಯೋತ್ಪಾದನೆ ಮತ್ತು ಇತರ ಸಂಘಟಿತ ಅಪರಾಧಗಳ ವಿರುದ್ಧ ಬಲವಾದ ಬ್ರಿಕ್ಸ್ ಭದ್ರತಾ ಸಹಕಾರವನ್ನು ಹೆಚ್ಚಿಸುತ್ತದೆ ಎಂದು ನಾವು ಭಾವಿಸುತ್ತೇವೆ ”ಎಂದು ಬ್ರಿಕ್ಸ್ ಶೃಂಗಸಭೆಯ ಸಮಗ್ರ ಅಧಿವೇಶನದಲ್ಲಿ ಮೋದಿ ಹೇಳಿದ್ದಾರೆ.
ಭಾರತದ ವಿಶ್ವದ ಅತ್ಯಂತ ಮುಕ್ತ, ಹೂಡಿಕೆ ಸ್ನೇಹಿ ಆರ್ಥಿಕತೆ ಎಂದು ಒತ್ತಿ ಹೇಳಿದ ಮೋದಿ, ಕಳೆದ ಒಂದು ದಶಕದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಿಂದ 2.25 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. “ಅಂದಾಜಿನ ಪ್ರಕಾರ, ಭಯೋತ್ಪಾದನೆಯಿಂದಾಗಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ನಷ್ಟವಾಗಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯನ್ನು ಶೇಕಡಾ 1.5 ರಷ್ಟು ಕಡಿಮೆ ಮಾಡಿದೆ ”ಎಂದಿದ್ದಾರೆ.
ಜನರಿಂದ ಜನರ ಸಂಬಂಧ ಬೆಳೆಯುವುದರಿಂದ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಭಾಗಿತ್ವ ಹೆಚ್ಚಾಗುತ್ತದೆ ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.