ಅಯೋಧ್ಯಾ: 1989ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ‘ಶಿಲಾನ್ಯಾಸ’ ನೆರವೇರಿಸುವ ಸಲುವಾಗಿ ದೇಶದಾದ್ಯಂತದಿಂದ ಸಂಗ್ರಹಿಸಲಾದ ‘ರಾಮ ಶಿಲೆ’ ಅಂದರೆ ‘ಶ್ರೀರಾಮ್’ ಎಂದು ಬರೆಯಲಾದ ಇಟ್ಟಿಗೆಯನ್ನೇ, ಶೀಘ್ರದಲ್ಲೇ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರದ ಶಿಲಾನ್ಯಾಸಕ್ಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
ಈ ಇಟ್ಟಿಗೆಗಳು ಭಾವನಾತ್ಮಕ ಬಾಂಧವ್ಯವವನ್ನು ಹೊಂದಿವೆ, ಹೀಗಾಗಿ ಇದನ್ನು ರಾಮ ಮಂದಿರ ಚಳುವಳಿಯಲ್ಲಿ ಭಾಗಿಯಾದವರ ಸ್ಮರಣಾರ್ಥ ನಿರ್ಮಾಣ ಮಾಡಲಾಗುವ ಮೆಮೊರಿಯಲ್ ವಾಲ್ನಲ್ಲೂ ಬಳಕೆ ಮಾಡಲು ನಿರ್ಧರಿಸಲಾಗಿದೆ.
“1989ರಲ್ಲೂ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಲಾಗಿತ್ತು, ಆ ವೇಳೆ ಸುಮಾರು 50 ಸಾವಿರ ಇಟ್ಟಿಗೆಗಳನ್ನು ಬಳಕೆ ಮಾಡಲಾಗಿತ್ತು. ಉಳಿದ ಇಟ್ಟಿಗೆಗಳು ವಿಶ್ವ ಹಿಂದೂ ಪರಿಷತ್ತಿನ ಸುಪರ್ದಿಯಲ್ಲಿ ಕಳೆದ 30 ವರ್ಷಗಳಿಂದ ಇದೆ” ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.
ಗುಜರಾತಿ, ಮರಾಠಿ, ಪಂಜಾಬಿ, ಬೆಂಗಾಳಿ, ತಮಿಳು, ತೆಲುಗು, ಕನ್ನಡ ಮುಂತಾದ ಭಾಷೆಗಳಲ್ಲಿ ‘ಶ್ರೀರಾಮ್’ ಎಂದು ಬರೆಯಲಾದ ಸುಮಾರು 2 ಲಕ್ಷ ಇಟ್ಟಿಗೆಗಳನ್ನು ಕಳೆದ 3 ದಶಕಗಳಿಂದ ವಿಶ್ವ ಹಿಂದೂ ಪರಿಷತ್ ಸಂಗ್ರಹ ಮಾಡಿದೆ. ಮಂದಿರ ಚಳುವಳಿಯು ಉತ್ತುಂಗದಲ್ಲಿದ್ದ ವೇಳೆ ಅನಿವಾಸಿ ಭಾರತೀಯರೂ ಕೂಡ ‘ರಾಮಶಿಲೆ’ಗಳನ್ನು ಕಳುಹಿಸಿಕೊಟ್ಟಿದ್ದರು.
‘ರಾಮ ಶಿಲೆ’ ಎಂದು ಕರೆಯಲಾಗುವ ಈ ಇಟ್ಟಿಗೆಗಳು ರಾಮ ಮಂದಿರಕ್ಕೆ ಜನಸಾಮಾನ್ಯನ ಕೊಡುಗೆಯನ್ನು ಪ್ರತಿಬಿಂಬಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.