ನವದೆಹಲಿ: ಸಿಖ್ಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ದೇವ್ ಜೀ ಅವರ 550ನೇ ಜನ್ಮ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
“ಇಂದು, ಶ್ರೀ ಗುರುನಾನಕ್ ದೇವ್ ಜೀ ಅವರ 550 ನೇ ಪ್ರಕಾಶ್ ಪರ್ವ. ಈ ಶೇಷ ಸಂದರ್ಭದಲ್ಲಿ, ಎಲ್ಲರಿಗೂ ನನ್ನ ಶುಭಾಶಯಗಳು. ಶ್ರೀ ಗುರುನಾನಕ್ ದೇವ್ ಜೀ ಅವರು ಕಂಡ ನ್ಯಾಯಯುತ, ಅಂತರ್ಗತ ಮತ್ತು ಸಾಮರಸ್ಯದ ಸಮಾಜದ ಕನಸನ್ನು ಈಡೇರಿಸಲು ನಮ್ಮನ್ನು ಸಮರ್ಪಿಸುವ ದಿನ ಇದು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Today, on the very special occasion of the 550th Prakash Parv of Shri Guru Nanak Dev Ji, my greetings to everyone. This is a day to rededicate ourselves to fulfilling Shri Guru Nanak Dev Ji’s dream of a just, inclusive and harmonious society. pic.twitter.com/8LLUU0a3Jg
— Narendra Modi (@narendramodi) November 12, 2019
ನವೆಂಬರ್ 9 ರಂದು ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆಯ ಸಂದರ್ಭದಲ್ಲಿ ತಾನು ಮಾಡಿದ ಭಾಷಣದ ಅಂಶಗಳನ್ನು ಪ್ರದರ್ಶಿಸುವ ವಿಡಿಯೋವೊಂದನ್ನು ಪ್ರಧಾನಿ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಭಾಷಣದಲ್ಲಿ ಅವರು ಗುರುನಾನಕ್ ದೇವ್ ಅವರ ಜೀವನ ಮತ್ತು ಬೋಧನೆಗಳಿಂದ ಪ್ರೇರಣೆಗಳನ್ನು ಪಡೆದುಕೊಳ್ಳುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. “ಗುರುನಾನಕ್ ದೇವ್ ಜಿ ನಮಗೆ ನಿಜವಾದ ಮೌಲ್ಯಗಳೊಂದಿಗೆ ಜೀವಿಸುವುದರ ಮಹತ್ವವನ್ನು ಕಲಿಸಿದರು. ಪ್ರಾಮಾಣಿಕತೆ ಮತ್ತು ಆತ್ಮ ವಿಶ್ವಾಸದ ಆಧಾರದ ಮೇಲೆ ಆರ್ಥಿಕ ವ್ಯವಸ್ಥೆಯನ್ನು ಸಹ ನೀಡಿದರು” ಎಂದು ಹೇಳಿದ್ದರು.
ನವೆಂಬರ್ 9ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಗುರುದಾಸ್ಪುರದಲ್ಲಿ ಕರ್ತಾರ್ಪುರ ಕಾರಿಡಾರ್ ಅನ್ನು ಉದ್ಘಾಟಿಸಿದರು. ಈ ಮೂಲಕ ಭಾರತೀಯ ಯಾತ್ರಿಕರಿಗೆರ ಕರ್ತಾರ್ಪುರ್ ಸಾಹಿಬ್ಗೆ ವೀಸಾ ಮುಕ್ತ ಪ್ರಯಾಣವನ್ನು ಮಾಡುವ ಅನುಕೂಲ ಮಾಡಿಕೊಟ್ಟರು, ಇದು ಗುರುನಾನಕ್ ದೇವ್ ಅವರ ಕೊನೆಯ ವಿಶ್ರಾಂತಿ ಸ್ಥಳವಾಗಿದೆ. ಕಾರಿಡಾರ್ ಭಾರತದ ಪಂಜಾಬ್ನಲ್ಲಿನ ಡೇರಾ ಬಾಬಾ ನಾನಕ್ ಅನ್ನು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯ ಕರ್ತಾರ್ಪುರದಲ್ಲಿ ಸಾಹಿಬ್ಗೆ ಸಂಪರ್ಕಿಸುತ್ತದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟ್ವಿಟ್ ಮಾಡಿ, ಗುರು ನಾನಕ್ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. “ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶದಲ್ಲಿರುವ ನನ್ನ ಎಲ್ಲ ಸಹವರ್ತಿ ನಾಗರಿಕರಿಗೆ, ವಿಶೇಷವಾಗಿ ಸಿಖ್ ಸಮುದಾಯದ ಸಹೋದರ ಸಹೋದರಿಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ” ಎಂದಿದ್ದಾರೆ.
On the 550th birth anniversary of Guru Nanak Dev Ji, greetings to all fellow citizens, especially to our Sikh brothers and sisters in India and abroad.
The life of Guru Nanak Dev Ji inspires us to build a society based on his teachings of equality, compassion and social amity.
— President of India (@rashtrapatibhvn) November 12, 2019
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಮೋದಿ ಸರ್ಕಾರವು ಗುರುನಾನಕ್ ದೇವ್ ಜಿ ಅವರ ಆಲೋಚನೆಗಳು ಮತ್ತು ಬೋಧನೆಗಳಿಗೆ ಸಮರ್ಪಿತವಾಗಿದೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಪ್ರಮುಖ ಧ್ಯೇಯವಾಕ್ಯವಾಗಿರುವುದು ಇದಕ್ಕೆ ಉದಾಹರಣೆ. ಗುರುನಾನಕ್ ದೇವ್ ಜಿ ಅವರ 550 ನೇ ಪ್ರಕಾಶ್ ಪರ್ವ ಸಂದರ್ಭದಲ್ಲಿ ಮೋದಿ ಅವರು ದೇಶವಾಸಿಗಳಿಗೆ ಸಮರ್ಪಿಸಿದ ಐತಿಹಾಸಿಕ ‘ಕರ್ತಾರ್ಪುರ್ ಕಾರಿಡಾರ್’ ಗುರುನಾನಕ್ ದೇವ್ ಜಿ ಅವರಿಗೆ ನಿಜವಾದ ಗೌರವ” ಎಂದಿದ್ದಾರೆ.
मोदी सरकार गुरु नानक देव जी के विचारों व शिक्षाओं के प्रति समर्पित है, सबका साथ-सबका विकास का हमारा मूलमंत्र इसी का परिचायक है।
गुरु नानक देव जी के 550वें प्रकाश पर्व पर मोदी जी द्वारा देशवासियों को समर्पित ऐतिहासिक ‘करतारपुर कॉरिडोर’ गुरुनानक देव जी को सच्ची श्रद्धांजलि है।
— Amit Shah (@AmitShah) November 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.