ಅಬುಧಾಬಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಅಬುಧಾಬಿಯಲ್ಲಿ ನಡೆದ ಅಬುಧಾಬಿ ಅಂತರರಾಷ್ಟ್ರೀಯ ಪೆಟ್ರೋಲಿಯಂ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ (ADIPEC) ಇಂಡಿಯನ್ ಪೆವಿಲಿಯನ್ ಅನ್ನು ಉದ್ಘಾಟಿಸಿದರು. ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್ಒಸಿ) ಸಿಇಒ ಸುಲ್ತಾನ್ ಅಲ್ ಜಾಬರ್ ಅವರಿಗೆ ಸಾಥ್ ನೀಡಿದರು.
ಇಂಡಿಯನ್ ಪೆವಿಲಿಯನ್ ಅನ್ನು ಫೆಡರೇಶನ್ ಆಫ್ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿ (ಎಫ್ಐಪಿಐ), ಡೈರೆಕ್ಟರೇಟ್ ಜನರಲ್ ಆಫ್ ಹೈಡ್ರೋಕಾರ್ಬನ್ಸ್ (ಡಿಜಿಹೆಚ್) ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸ್ಥಾಪಿಸಿವೆ.
“ಅಪ್ಸ್ಟ್ರೀಮ್, ಮಿಡ್ಸ್ಟ್ರೀಮ್, ಡೌನ್ಸ್ಟ್ರೀಮ್ ಮತ್ತು ಎಂಜಿನಿಯರಿಂಗ್ ವಿಭಾಗಗಳ 9 ಭಾರತೀಯ ತೈಲ ಮತ್ತು ಅನಿಲ ಕಂಪನಿಗಳು ADIPEC 2019 ರಲ್ಲಿ ಪ್ರದರ್ಶನವನ್ನು ನೀಡಲು ಫೆಡರೇಶನ್ ಆಫ್ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿ ಜೊತೆಗೆ ಬಂದಿವೆ” ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.
Inaugurated the India Pavilion at @ADIPECOfficial along with H.E Sultan Al Jaber, Min. of State & CEO, @AdnocGroup. 9 Indian oil & gas companies from the upstream, midstream, downstream and engineering segments have come along with @fipiind to set up an exhibition at ADIPEC 2019. pic.twitter.com/xsJyjh0ruy
— Dharmendra Pradhan (@dpradhanbjp) November 11, 2019
“ಸಂಭಾವ್ಯತೆಗಳನ್ನು ಸ್ವೀಕರಿಸಲು ಮತ್ತು ಪರಸ್ಪರ ಸಹಕಾರ ಮತ್ತು ಬೆಳವಣಿಗೆಗೆ ಅವಕಾಶಗಳನ್ನು ಅನ್ವೇಷಿಸಲು ನಮ್ಮ ಕಂಪನಿಗಳೊಂದಿಗೆ ಸಂವಹನ ನಡೆಸಲು ವಿಶೇಷ ಸಭೆಯನ್ನು ನಡೆಸಿದ್ದೇಚೆ. ತೈಲ ಮತ್ತು ಅನಿಲ ಉದ್ಯಮಕ್ಕೆ ಅವರು ಏನು ನೀಡಬೇಕೆಂಬುದನ್ನು ಪ್ರದರ್ಶಿಸುವಲ್ಲಿ ನಮ್ಮ ಪ್ರತಿಯೊಂದು ಕಂಪನಿಗಳು ತಮ್ಮ ಅತ್ಯುತ್ತಮ ಹೆಜ್ಜೆಯನ್ನು ಮುಂದಿಟ್ಟಿವೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.