ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗಳು ಗರಿಗೆದರುತ್ತಿವೆ. ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ 2022ಕ್ಕೂ ಮೊದಲು ದೇವಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರವು ದೇವಾಲಯ ಮತ್ತು ಅದರ ಸಮೀಪ ನಿರ್ಮಿಸಲು ಪ್ರಸ್ತಾಪಿಸಲಾದ ರಾಮ ಪ್ರತಿಮೆ ಹೇಗಿರಲಿದೆ ಎಂಬುದರ ಚಿತ್ರವನ್ನು ಬಿಡುಗಡೆ ಮಾಡಿದೆ. ರಾಮ ವಿಗ್ರಹ ಪೂರ್ಣಗೊಳ್ಳಲು ಮೂರು ವರ್ಷ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ದೇವಾಲಯದ ಸಂಕೀರ್ಣದಲ್ಲಿ ಪ್ರಾರ್ಥನಾ ಮಂದಿರ, ರಾಮಕಥ ಕುಂಜ್ (ಉಪನ್ಯಾಸ ಭವನ), ವೈದಿಕ್ ಪಾಠಶಾಲೆ (ಶೈಕ್ಷಣಿಕ ಸೌಲಭ್ಯ), ಸಂತ ನಿವಾಸ (ಸಂತರ ನಿವಾಸ) ಮತ್ತು ಯಾತ್ರಿ ನಿವಾಸ್ (ಸಂದರ್ಶಕರಿಗೆ ವಸತಿ ನಿಲಯ) ಇರಲಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ವಿಗ್ರಹದ ಸುತ್ತಲೂ ಡಿಜಿಟಲ್ ಮ್ಯೂಸಿಯಂ, ಪವಿತ್ರ ಗ್ರಂಥಗಳ ಕೇಂದ್ರ, ಗ್ರಂಥಾಲಯ, ಕೆಫೆಟೇರಿಯಾ ಮತ್ತು ಪಾರ್ಕಿಂಗ್ ಸ್ಥಳದಂತಹ ಇತರ ಸೌಲಭ್ಯಗಳು ಇರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.