ನವದೆಹಲಿ: ಭಾರತ ಮತ್ತು ಜರ್ಮನಿ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಸಂರಕ್ಷಣೆಗಾಗಿ ಬಹಳ ನಿಕಟವಾಗಿ ಕೆಲಸ ಮಾಡಲು ಉದ್ದೇಶಿಸಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಶುಕ್ರವಾರ ಹೇಳಿದ್ದಾರೆ.
ಮಾರ್ಕೆಲ್ ಅವರು ಐದನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಯಲ್ಲಿ ಭಾಗಿಯಾಗಲು ತಮ್ಮ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಭಾರತ ಮತ್ತು ಜರ್ಮನಿ ನಿಯೋಗ ಮಟ್ಟದ ಮಾತುಕತೆ ನಡೆಸಿದ್ದು, 2020 ರಿಂದ 2024 ರ ಅವಧಿಯ ಸಮಾಲೋಚನೆಗಾಗಿ ಜಂಟಿ ಘೋಷಣೆ ಮತ್ತು ಹಸಿರು ನಗರ ಚಲನಶೀಲತೆಗಾಗಿ ಇಂಡೋ ಜರ್ಮನ್ ಸಹಭಾಗಿತ್ವದ ಜಂಟಿ ಘೋಷಣೆ ಸೇರಿದಂತೆ ಐದು ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾರ್ಕೆಲ್, “ನಮ್ಮ ಎರಡು ದೇಶಗಳು ಕಾರ್ಯತಂತ್ರದ ಸಂಬಂಧದಿಂದ ಜೋಡಿಸಲ್ಪಟ್ಟಿವೆ, ಮಾತ್ರವಲ್ಲ ಸ್ನೇಹ ಸಂಬಂಧವನ್ನು ಹೊಂದಿವೆ. ನನ್ನ ಭೇಟಿಯ ಸಮಯದಲ್ಲಿ ನಾನು ಭಾರತದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಭಾರತವು ವೈವಿಧ್ಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿರುವುದರಿಂದ ಕಲಿಯಲು ಸಾಕಷ್ಟು ಅವಕಾಶ ಸಿಗುತ್ತದೆ ” ಎಂದಿದ್ದಾರೆ.
“ನಾವು ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಸಂರಕ್ಷಣೆ ಬಗ್ಗೆ ಬಹಳ ನಿಕಟವಾಗಿ ಕೆಲಸ ಮಾಡಲು ಉದ್ದೇಶಿಸಿದ್ದೇವೆ” ಎಂದು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಾ ಹೇಳಿದರು.
“20,000 ಭಾರತೀಯ ಪ್ರಜೆಗಳು ಜರ್ಮನಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನಾವು ಇನ್ನೂ ಹೆಚ್ಚಿನದನ್ನು ನೋಡಲು ಬಯಸುತ್ತೇವೆ. ವೃತ್ತಿಪರ ತರಬೇತಿಯ ವಿಷಯಕ್ಕೆ ಬಂದರೆ, ನಾವು ಶಿಕ್ಷಕರ ವಿನಿಮಯವನ್ನೂ ಹೊಂದಲು ಬಯಸುತ್ತೇವೆ” ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮರ್ಕೆಲ್ ಅವರನ್ನು ಭಾರತದ ಉತ್ತಮ ಸ್ನೇಹಿತೆ ಎಂದು ಕರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.