ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದಾಗಿನಿಂದಲೂ, ಅದರ ಸಂಭಾವ್ಯ ಪ್ರಯೋಜನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ.
ಅದರ ಆಡಳಿತಾತ್ಮಕ ವಿಧಾನಗಳನ್ನು ಇನ್ನೂ ಅಂತಿಮಗೊಳಿಸಲಾಗುತ್ತಿರುವ ಸಂದರ್ಭದಲ್ಲೇ, ಈ ಪ್ರದೇಶವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 50,000 ಕೋಟಿ ರೂ.ಗಳ ಮೆಗಾ ಸೌರ ವಿದ್ಯುತ್ ಯೋಜನೆಯ ಉತ್ತೇಜಕ ಸುದ್ದಿಯನ್ನು ಸ್ವೀಕರಿಸಿದೆ, ಇದಕ್ಕೆ ಸರ್ಕಾರವು ಅನುಮೋದನೆಯನ್ನು ನೀಡಿದೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾದ ಸೌರಶಕ್ತಿ ನಿಗಮ (ಎಸ್ಇಸಿಐ) ನಿಂದ ಉತ್ತೇಜಿಸಲ್ಪಟ್ಟ ಈ ಯೋಜನೆಯು 2023 ರ ವೇಳೆಗೆ 7,500 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸುವ ಸೌಲಭ್ಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಲಡಾಖ್ ಭಾರತದ ಸೌರಶಕ್ತಿ ಕೇಂದ್ರವಾಗಲು ಸಾಮರ್ಥ್ಯವನ್ನು ಹೊಂದಿದೆ. ಮಾತ್ರವಲ್ಲದೇ, ಸ್ಥಳೀಯ ಪರಿಸ್ಥಿತಿಗಳು ಅದರ ಅಭಿವೃದ್ಧಿಗೆ ಬಹುತೇಕ ಸೂಕ್ತವಾಗಿವೆ.
“ಲಡಾಖ್ ಭಾರತದಲ್ಲಿ ಸೌರ ವಿಕಿರಣದ ತೀವ್ರತೆಯನ್ನು ಹೊಂದಿದೆ. ಲೇಹ್ ಒಂದು ವರ್ಷದಲ್ಲಿ 320 ಕ್ಕಿಂತ ಹೆಚ್ಚು ಸ್ಪಷ್ಟ ಬಿಸಿಲು ದಿನಗಳನ್ನು ಮತ್ತು ಕಡಿಮೆ ಹವಾಮಾನ ತಾಪಮಾನವನ್ನು ಪಡೆಯುತ್ತದೆ. ಈ ನಡುವೆ ಈ ಪ್ರದೇಶವು, ಸೌರ ಪ್ಯಾನಲ್ಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ”ಎಂದು ಲಡಾಖ್ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯ (ಎಲ್ಆರ್ಇಡಿಎ) ಯೋಜನಾ ನಿರ್ದೇಶಕ ಡಾ. ತ್ಸೆವಾಂಗ್ ಥಿನ್ಲಾಸ್ ಹೇಳುತ್ತಾರೆ.
“ಇಲ್ಲಿನ ಶುಷ್ಕ ಮತ್ತು ಅರೆ-ಶುಷ್ಕ ಭಾಗಗಳು ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಹೆಚ್ಚು ವಿಕಿರಣವನ್ನು ಪಡೆಯುತ್ತವೆ. ಭಾರತದಲ್ಲಿ ಸಮತಲವಾಗಿರುವ ಮೇಲ್ಮೈಯಲ್ಲಿ ಸರಾಸರಿ ವಿಕಿರಣವು 5.6 5.6 kWh m -2 ದಿನ -1 ಮತ್ತು ಜೋಧ್ಪುರದಲ್ಲಿ 6.11 kWh m -2 ದಿನ -1. ಲೇಹ್ ಮತ್ತು ಲಡಾಖ್ ನಲ್ಲಿ ಇರುವ ದೇಶದ ಶೀತ ಶುಷ್ಕ ಪ್ರದೇಶವು ಅತ್ಯಧಿಕ ಪ್ರಮಾಣದ ವಿಕಿರಣವನ್ನು ಪಡೆಯುತ್ತದೆ, ಇದು ಸುಮಾರು 7-7.5 kWh m -2 ದಿನ -1”ಎಂದು ಜೋಧ್ಪುರದ ಕೇಂದ್ರ ಶುಷ್ಕ ವಲಯ ಸಂಶೋಧನಾ ಸಂಸ್ಥೆಯ ಪ್ರಿಯಬ್ರತಾ ಸಾಂತ್ರಾ ಅವರು ಹೇಳಿದ್ದಾರೆ.
ಈ ನಡುವೆ, ಲಡಾಖ್ನಲ್ಲಿ ಸೌರ ಯೋಜನೆ ಸ್ಥಾಪಿಸುವ ಕಾರ್ಯಸಾಧ್ಯತೆಯ ಬಗ್ಗೆ ಅಹಮದಾಬಾದ್ ಮೂಲದ ಸಲಹೆ ಮತ್ತು ಎಂಜಿನಿಯರಿಂಗ್ ಸಂಸ್ಥೆಯಾದ ಜೆನ್ಸೋಲ್ ಸೋಲಾರ್ ಗ್ರೂಪ್ ಕೆಲವು ಉತ್ತೇಜಕ ಸುದ್ದಿಗಳನ್ನು ಕಂಡುಕೊಂಡಿದೆ.
ಭೂ ಗುತ್ತಿಗೆ ಮಾದರಿಯಲ್ಲಿ ಮಾತ್ರ ಸೌರ ಯೋಜನೆಯನ್ನು ಲಡಾಖಿನಲ್ಲಿ ಮುಂದುವರಿಸಬಹುದು ಎಂದು ಲಡಾಖ್ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಹೇಳಿದ್ದಾರೆ.
ಲಡಾಖಿನಲ್ಲಿ ಕೈಗೊಳ್ಳುತ್ತಿರುವ ಪ್ರಮುಖ ಯೋಜನೆಗಳಲ್ಲಿ ಎರಡು ಪ್ರಮುಖ ಮಾದರಿಗಳಿವೆ. ಮೊದಲ ಮಾದರಿ ಕಾರ್ಗಿಲ್ ಜಿಲ್ಲೆಯ ಝಂಕಾರ್ ಸುರು ಪ್ರದೇಶದಲ್ಲಿ 2500 ಮೆಗಾವ್ಯಾಟ್ ಸೌಲಭ್ಯದ ನಿರ್ಮಾಣ, ಕಾಶ್ಮೀರ ಕಣಿವೆಯಲ್ಲಿ ವಿದ್ಯುತ್ ತಲುಪಿಸುವ ಪ್ರಸರಣ ಮಾರ್ಗಗಳನ್ನು ಇದು ಹೊಂದಿರುತ್ತದೆ.
ಲೇಹ್ ಜಿಲ್ಲೆಯ ಪಾಂಗ್ ಪ್ರದೇಶದಲ್ಲಿ 5,000 ಮೆಗಾವ್ಯಾಟಿನ ಎರಡನೇ ಮಾದರಿ ಹಿಮಾಚಲ ಪ್ರದೇಶದ ಮನಾಲಿ ಮೂಲಕ ಹರಿಯಾಣದ ಕೈತಾಲ್ ಕಡೆಗೆ ಪ್ರಸರಣ ಮಾರ್ಗಗಳನ್ನು ಹೊಂದಿರುತ್ತದೆ. ಆ ವಿದ್ಯುತ್ ದೆಹಲಿ-ಎನ್ಸಿಆರ್ ಪ್ರದೇಶಕ್ಕೂ ರವಾನೆಯಾಗಲಿದೆ.
ಸ್ಥಳೀಯ ಅಲೆಮಾರಿ ಸಮುದಾಯಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಸಾಕಷ್ಟು ಭೂಮಿಯನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, 5000 ಮೆಗಾವ್ಯಾಟ್ ಯೋಜನೆಯನ್ನು ಎರಡು ತಾಣಗಳಲ್ಲಿ (2500 + 2500) ವಿಭಜಿಸಲಾಗಿದೆ – ಒಂದು ಪಾಂಗ್ನಲ್ಲಿ, ಮತ್ತು ಇನ್ನೊಂದು ಹ್ಯಾನ್ಲೆಯಲ್ಲಿ.
ಹ್ಯಾನ್ಲೆನಲ್ಲಿರುವ ಬಾಹ್ಯಾಕಾಶ ವೀಕ್ಷಣಾಲಯವು ತನ್ನ ಕೇಂದ್ರದಿಂದ ಕನಿಷ್ಠ 25-40 ಕಿ.ಮೀ ದೂರದಲ್ಲಿ ಸ್ಥಾವರವನ್ನು ನಿರ್ಮಿಸಬೇಕೆಂದು ವಿನಂತಿಸಿದೆ.
“ಆ ವಿನಂತಿಯನ್ನು ಪರಿಗಣಿಸಲಾಗಿದೆ, ಮತ್ತು ನಾವು ಸ್ಥಾವರವನ್ನು ಸ್ಥಳಾಂತರಿಸಿದ್ದೇವೆ. ಈ ನಡುವೆ, ಸ್ಥಳೀಯ ಪ್ರತಿನಿಧಿಗಳು ಸ್ಥಳೀಯರಿಗೆ ಅನುಕೂಲವಾಗುವಂತೆ ಕೆಲವು ಸಿಎಸ್ಆರ್ ಯೋಜನೆಗಳನ್ನು ಕೋರಿದ್ದರು. ಯೋಜನೆಗೆ ಅಂತಿಮ ಬಿಡ್ಡುದಾರರನ್ನು ಆಯ್ಕೆ ಮಾಡಿದ ನಂತರ, ಅವರು ಪರಿಸರ ಪ್ರಭಾವದ ಮೌಲ್ಯಮಾಪನವನ್ನು (ಇಐಎ) ನಡೆಸಬೇಕು ”ಎಂದು ಡಾ ಥಿನ್ಲಾಸ್ ಹೇಳುತ್ತಾರೆ.
ಉದ್ಯೋಗ ನೀಡುವ ಮೂಲಕ ಸ್ಥಳೀಯರು ಈ ಯೋಜನೆಯ ಲಾಭ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದು ಈ ಪ್ರದೇಶದ ಚುನಾಯಿತ ಪ್ರತಿನಿಧಿಗಳ ಬೇಡಿಕೆಗಳಾಗಿವೆ. ಸೌರ ಸ್ಥಾವರ ಸ್ಥಾಪನೆಗಳಿಂದ ಸಾಕಷ್ಟು ಮಂದಿಗೆ ಉದ್ಯೋಗಗಳು ಕೂಡ ಸಿಗುವ ನಿರೀಕ್ಷೆಗಳಿವೆ.
ಲಡಾಖ್ ಭಾರತದ ಸೌರಶಕ್ತಿಯ ಕೇಂದ್ರವಾಗುತ್ತದೆ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಸೌರಶಕ್ತಿ ವಲಯದಲ್ಲಿ ಭಾರತ ದಾಪುಗಾಲು ಹಾಕುತ್ತಿರುವುದರಿಂದ, ಲಡಾಖಿನ ಸಂಭಾವ್ಯ ಅವಕಾಶಗಳನ್ನು ಖಾಸಗಿ ಮತ್ತು ಸರ್ಕಾರಿಯವರು ಪಡೆದುಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.