ಬೆಂಗಳೂರು: ತಮಿಳುನಾಡನ್ನು 60 ರನ್ಗಳಿಂದ ಸೋಲಿಸುವ ಮೂಲಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದು ಕರ್ನಾಟಕ ಗೆಲ್ಲುತ್ತಿರುವ 4ನೇ ವಿಜಯ್ ಹಜಾರೆ ಟ್ರೋಫಿಯಾಗಿದೆ.
ಒಂದೂ ಪಂದ್ಯ ಸೋಲದೆಯೇ ಫೈನಲ್ ಪ್ರವೇಶಿಸಿದ ತಮಿಳುನಾಡು, ಫೈನಲ್ ಪಂದ್ಯದಲ್ಲಿ ಹಿನ್ನಡೆಯನ್ನು ಅನುಭವಿಸಿ ಟ್ರೋಫಿಯನ್ನು ಕೈಚೆಲ್ಲಿತು.
ಕರ್ನಾಟಕ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದ್ದು, ಅಭಿಮನ್ಯು ಮಿಥುನ್ ಅದ್ಭುತ ಬೌಲಿಂಗ್, ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಆಕರ್ಷಕ ಬ್ಯಾಟಿಂಗ್ನಿಂದ ತಂಡ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿ ಹಿಡಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 25) ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ತಮಿಳುನಾಡು ತಂಡ, ಅಭಿನವ್ ಮುಕುಂದ್ 85, ಬಾಬ ಅಪರಜಿತ್ 66, ವಿಜಯ್ ಶಂಕರ್ 38, ಶಾರುಖ್ ಖಾನ್ 27 ರನ್ ನೆರವಿನೊಂದಿಗೆ 49.5 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದು 252 ರನ್ ಮಾಡಿತ್ತು.
ವಿಜಯ್ ಹಜಾರೆ ಟ್ರೋಫಿಯನ್ನು 2002-03ರಲ್ಲಿ ರಣಜಿ ಟ್ರೋಫಿ ರಾಜ್ಯ ತಂಡಗಳನ್ನು ಒಳಗೊಂಡ ಸೀಮಿತ ಓವರುಗಳ ಕ್ರಿಕೆಟ್ ಸ್ಪರ್ಧೆಯಾಗಿ ಪ್ರಾರಂಭಿಸಲಾಯಿತು. ಪ್ರಸಿದ್ಧ ಭಾರತೀಯ ಕ್ರಿಕೆಟಿಗ ವಿಜಯ್ ಹಜಾರೆ ಅವರ ಹೆಸರನ್ನು ಈ ಪಂದ್ಯಾವಳಿಗಳಿಗೆ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.