ರಾಂಚಿ: ಝಾರ್ಖಾಂಡ್ ರಾಜ್ಯದಲ್ಲಿ ಪ್ರತಿಪಕ್ಷಗಳಿಗೆ ತೀವ್ರ ಸ್ವರೂಪದ ಹಿನ್ನಡೆಯಾಗಿದೆ. ಕಾಂಗ್ರೆಸ್ ಮತ್ತು ಝಾರ್ಖಾಂಡ್ ಮುಕ್ತಿ ಮೋರ್ಚಾದ ಪ್ರಮುಖ ಶಾಸಕರುಗಳು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಝಾರ್ಖಾಂಡ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮತ್ತು ಶಾಸಕ ಸುಖದೇವ್ ಭಗತ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ಶಾಸಕ ಮನೋಜ್ ಯಾದವ್ ಅವರೊಂದಿಗೆ ಬಿಜೆಪಿಯನ್ನು ಸೇರ್ಪಡೆಗೊಂಡರು. ಭಗತ್ ಮತ್ತು ಯಾದವ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಲೋಹರ್ದಗ್ಗ ಮತ್ತು ಚತ್ರಾಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರುಗಳು ತಮ್ಮ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆಂದು ಅಸಮಾಧಾನಕ್ಕೆ ಒಳಗಾಗಿದ್ದ ಇವರಿಬ್ಬರೂ ಕಾಂಗ್ರೆಸ್ ತೊರೆದಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ಇತರ ಶಾಸಕರೆಂದರೆ ಝಾರ್ಖಾಂಡ್ ಮುಕ್ತಿ ಮೋರ್ಚಾದ ಕುನಾಲ್ ಸಾರಂಗಿ ಮತ್ತು ಸ್ವತಂತ್ರ ಶಾಸಕ ಭಾನು ಪ್ರತಾಪ್ ಶಾಹಿ.
ಕೆಲವು ನಿವೃತ್ತ ಅಧಿಕಾರಿಗಳು ಕೂಡ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಮಾಜಿ ಡಿಜಿಪಿ ಡಿಕೆ ಪಾಂಡೆ, ಮಾಜಿ ಐಪಿಎಸ್ ಮತ್ತು ಕಾಂಗ್ರೆಸ್ ಮುಖಂಡ ಅರುಣ್ ಒರಾನ್, ಮತ್ತು ಮಾಜಿ ಐಎಎಸ್ ಸುಚಿತ್ರ, ಅಧಿಕಾರಿಗಳಾದ ಸಿನ್ಹಾ ಮತ್ತು ಆರ್ಪಿ ಶಾಹಿ ಬಿಜೆಪಿಯನ್ನು ಇಂದು ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.