ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿಯೋಜಿಸಲಾದ ಸಿಆರ್ಪಿಎಫ್ ಪಡೆಯ ಶ್ವಾನಗಳಿಗೆ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ವರದಿಗಳ ಪ್ರಕಾರ, ಸಿಆರ್ಪಿಎಫ್ ಆರಂಭದಲ್ಲಿ 25 ಪೊಲೀಸ್ ಡಾಗ್ ಕ್ಯಾಮೆರಾಗಳನ್ನು ಖರೀದಿಸಲಿದೆ. ಈ ಕ್ಯಾಮೆರಾಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ, ಸಿಆರ್ಪಿಎಫ್ ಈ ಕ್ಯಾಮೆರಾಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ವೇಳೆ ಕ್ಯಾಮೆರಾಗಳ ಕಾರ್ಯಾಚರಣೆಯಲ್ಲಿ ಸಮಸ್ಯೆಗಳನ್ನು ಕಂಡುಹಿಡಿದಿದೆ. ಈ ಸಮಸ್ಯೆಗಳನ್ನು ಬಗೆಹರಿಸಿಯೇ 25 ಪೊಲೀಸ್ ಡಾಗ್ ಕ್ಯಾಮೆರಾಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ತನ್ನ K 9 ಘಟಕಕ್ಕೆ ಈ ಕ್ಯಾಮೆರಾಗಳನ್ನು ಖರೀದಿಸಿದ ಮೊದಲ ಭಾರತೀಯ ಪಡೆ ಎಂಬ ಹೆಗ್ಗಳಿಕೆಗೆ ಸಿಆರ್ಪಿಎಫ್ ಪಾತ್ರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಯಾಮೆರಾಗಳನ್ನು ಶ್ವಾನಗಳ ಹಿಂಭಾಗದಲ್ಲಿ ಇರಿಸಲಾಗುತ್ತದೆ. ಶ್ವಾನಗಳು ಏನನ್ನು ಗಮನಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕ್ಯಾಮೆರಾಗಳು ಹ್ಯಾಂಡ್ಲರ್ಗಳಿಗೆ ಸಹಾಯ ಮಾಡುತ್ತದೆ. ಈ ಕ್ಯಾಮೆರಾಗಳು ಹೈ ಡೆಫಿನಿಷನ್, ವಾಟರ್-ಪ್ರೂಫ್ ಮತ್ತು ಸ್ಕ್ರ್ಯಾಚ್-ರೆಸಿಸ್ಟೆಂಟ್ ಸೇರಿದಂತೆ ಅನೇಕ ಗುಣಗಳನ್ನು ಹೊಂದಿವೆ.
ಸಿಆರ್ಪಿಎಫ್ ಅಧಿಕಾರಿಗಳ ಸಮಿತಿಯು ಪೊಲೀಸ್ ಡಾಗ್ ಕ್ಯಾಮೆರಾದ ಅನೇಕ ಮಾದರಿಗಳನ್ನು ವಿಶ್ಲೇಷಿಸುತ್ತದೆ.
“ಶ್ವಾನಗಳು ಮತ್ತು ತರಬೇತುದಾರರಿಗೆ ಈ ಯುದ್ಧ ತಾಂತ್ರಿಕ ಎಲೆಕ್ಟ್ರಾನಿಕ್ ಸಾಧನದ ಮೂಲಭೂತ ತರಬೇತಿಯ ಅಗತ್ಯವಿರುತ್ತದೆ. ಹ್ಯಾಂಡ್ಲರ್ಗಳು ಔಟ್ಪುಟ್ ಸಾಧನವನ್ನು ಹೊಂದಿರಲಿದ್ದು, ಅಲ್ಲಿ ಅವರು ಈ ಕ್ಯಾಮೆರಾಗಳ ಫೀಡ್ ಅನ್ನು ದೂರದಿಂದ ವೀಕ್ಷಿಸಬಹುದು. ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಇಳಿಸುವ ಮೊದಲೇ ಪರಿಸ್ಥಿತಿಯನ್ನು ವಿಶ್ಲೇಷಿಸಲು ಈ ಕ್ಯಾಮೆರಾ ಸಹಾಯಕವಾಗಲಿದೆ “ಎಂದು ಹಿರಿಯ ಸಿಆರ್ಪಿಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.