ವಾಷಿಂಗ್ಟನ್: ವರ್ಷಾಂತ್ಯಕ್ಕೆ ಭಾರತೀಯ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 18 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಪೆಂಟಗನ್ ಶನಿವಾರ ತಿಳಿಸಿದೆ. ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ಒಂಬತ್ತನೇ ಭಾರತ-ಯುಎಸ್ ಡಿಫೆನ್ಸ್ ಟೆಕ್ನಾಲಜೀಸ್ ಆ್ಯಂಡ್ ಟ್ರೇಡ್ ಇನಿಶಿಯೇಟಿವ್ ಅಥವಾ ಡಿಟಿಟಿಐ ಗುಂಪು ಸಭೆಗೂ ಮುಂಚಿತವಾಗಿ ಈ ಹೇಳಿಕೆ ಹೊರಬಿದ್ದಿದೆ.
ಮಿಲಿಟರಿ ಯಂತ್ರಾಂಶದ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಅವಕಾಶಗಳನ್ನು ಗುರುತಿಸಲು, ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳಲ್ಲಿ ಸಹಕರಿಸಲು ಮತ್ತು ಮಿಲಿಟರಿ ಸಂಬಂಧವನ್ನು ಹೆಚ್ಚಿಸಲು ಅಗತ್ಯವಾದ ನೀತಿ ಬದಲಾವಣೆಗಳನ್ನು ಜಂಟಿಯಾಗಿ ಅನ್ವೇಷಿಸಲು ಭಾರತ-ಯುಎಸ್ ಡಿಫೆನ್ಸ್ ಟೆಕ್ನಾಲಜೀಸ್ ಮತ್ತು ಟ್ರೇಡ್ ಇನಿಶಿಯೇಟಿವ್ ಪ್ರಯತ್ನಿಸಲಿದೆ.
ಮಿಲಿಟರಿ ನಡುವಣ ಸಂಬಂಧಗಳು ಮತ್ತು ಸಹಕಾರವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಭಾರತದೊಂದಿಗಿನ ತನ್ನ ಸಹಭಾಗಿತ್ವವನ್ನು ಬಲಪಡಿಸಲು ಯುಎಸ್ ಬದ್ಧವಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಎಲ್ಲೆನ್ ಎಂ ಲಾರ್ಡ್ ಹೇಳಿದ್ದಾರೆ.
“ದ್ವಿಪಕ್ಷೀಯ ರಕ್ಷಣಾ ವ್ಯಾಪಾರ 2008ರಲ್ಲಿ ಶೂನ್ಯವಾಗಿದ್ದು, ಈ ವರ್ಷದ ಕೊನೆಯಲ್ಲಿ ಅಂದಾಜು 18 ಬಿಲಿಯನ್ ಯುಎಸ್ ಡಿ ತಲುಪಲಿದೆ” ಎಂದು ಅವರು ಪೆಂಟಗನ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ನಡೆದ ರಕ್ಷಣಾ ನೀತಿ ಸಮೂಹದ ಸಭೆಯು, ಭಾರತ ಮತ್ತು ಯುಎಸ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಏರ್ಪಡುತ್ತಿರುವ ರಕ್ಷಣಾ ವ್ಯಾಪಾರ, ತಂತ್ರಜ್ಞಾನ, ಸಂಗ್ರಹಣೆ, ಉದ್ಯಮ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಮಿಲಿಟರಿ-ಟು-ಮಿಲಿಟರಿ ಸಹಕಾರದ ಬಗ್ಗೆ ಗಮನ ಹರಿಸಿತ್ತು.
ಒಂಬತ್ತನೇ ಭಾರತ-ಯುಎಸ್ ಡಿಫೆನ್ಸ್ ಟೆಕ್ನಾಲಜೀಸ್ ಆ್ಯಂಡ್ ಟ್ರೇಡ್ ಇನಿಶಿಯೇಟಿವ್ ಅಥವಾ ಡಿಟಿಟಿಐ ಗುಂಪು ಸಭೆಯ ಸಹ-ಅಧ್ಯಕ್ಷರಾಗುವ ಸಲುವಾಗಿ ಲಾರ್ಡ್ ಮುಂದಿನ ವಾರ ನವದೆಹಲಿಗೆ ಆಗಮಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.