ಲಕ್ನೋ: ನವೆಂಬರ್ 15ರೊಳಗೆ ಉತ್ತರಪ್ರದೇಶದ ಎಲ್ಲಾ ರಸ್ತೆಗಳು ರಿಪೇರಿಯಾಗಿರಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಾರ್ವಜನಿಕ ಕಾರ್ಯ ಇಲಾಖೆ(PWD) ಗೆ ಆದೇಶಿಸಿದ್ದಾರೆ.
ಆ ರಾಜ್ಯದ ಪಿಡಬ್ಲ್ಯುಡಿ ಇಲಾಖೆಯು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ ಮೌರ್ಯ ಅವರ ನೇತೃತ್ವದಲ್ಲಿದೆ.
ಗುರುವಾರ ರಾತ್ರಿ ನಡೆದ ಪರಿಶೀಲನಾ ಸಭೆಯಲ್ಲಿ, ಪಿಡಬ್ಲ್ಯುಡಿ, ನಗರಾಭಿವೃದ್ಧಿ ಮತ್ತು ನೀರಾವರಿ ಸೇರಿದಂತೆ ನಾಲ್ಕು ಇಲಾಖೆಗಳು ಕಳೆದ ಎರಡು ವರ್ಷಗಳಲ್ಲಿ ನೀಡಿರುವ ಟೆಂಡರ್ಗಳ ಲೆಕ್ಕಪರಿಶೋಧನೆಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೊಣೆಗಾರಿಕೆಯನ್ನು ದೃಢಪಡಿಸಬೇಕು ಮತ್ತು ಯಾವುದೇ ವ್ಯತ್ಯಾಸಗಳು ಕಂಡುಬಂದರೆ ಕ್ರಮ ಕೈಗೊಳ್ಳಬೇಕು ಎಂದರು.
ಯಾವುದೇ ಕೆಲಸ ಮಾಡದೆ ಹಣವನ್ನು ಹಿಂಪಡೆಯಲಾದ ಜಿಲ್ಲೆಗಳ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಅವರು ಪಿಡಬ್ಲ್ಯುಡಿ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಅಗತ್ಯವಿದ್ದರೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ನೋಂದಾಯಿಸಿಕೊಳ್ಳಿ. ರಸ್ತೆಗಳ ಪ್ಯಾಚಿಂಗ್ ಕಾಟಾಚಾರಕ್ಕಾಗಿ ಆಗಿರಬಾರದು, ಗುಣಮಟ್ಟದ ಬಗ್ಗೆ ವಿಶೇಷ ಗಮನ ಹರಿಸಬೇಕು. ಎಲ್ಲಾ ಹಳ್ಳಿ ರಸ್ತೆಗಳ ರಿಪೇರಿ ಕೂಡ ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.