ನವದೆಹಲಿ : ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ (JuM) ಭಾರತದಲ್ಲಿ ತನ್ನ ಕಾರ್ಯಾಚರಣೆಯ ಪ್ರದೇಶವನ್ನು ವಿಸ್ತರಿಸುತ್ತಿದೆ. ಬಿಹಾರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಇದು ಹೊಂದಿದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ನಿರ್ದೇಶಕ ಯೋಗೇಶ್ ಚಂದರ್ ಮೋದಿ ಬಹಿರಂಗಪಡಿಸಿದ್ದಾರೆ.
ಭಯೋತ್ಪಾದನಾ ವಿರೋಧಿ ದಳ (ಎಟಿಎಸ್)ದ ಮುಖ್ಯಸ್ಥರನ್ನು ಮತ್ತು ಎಲ್ಲಾ ರಾಜ್ಯಗಳ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮುಖ್ಯಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದ ವೇಳೆ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶಿ ವಲಸಿಗರ ಹೆಸರಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದಿರುವ ಅವರು, ಈ ಸಂಘಟನೆಗೆ ಸೇರಿದ ಸುಮಾರು 25 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಮತ್ತು ಅವರನ್ನು ಪತ್ತೆ ಹಚ್ಚುವ ಸಲುವಾಗಿ ಪಟ್ಟಿಯನ್ನು ಎಲ್ಲಾ ರಾಜ್ಯಗಳಿಗೂ ರವಾನೆ ಮಾಡಲಾಗಿದೆ ಎಂದಿದ್ದಾರೆ.
“ನಾವು ಎಲ್ಲಾ ರಾಜ್ಯಗಳ ಸಹಾಯದಿಂದ ಇಂತಹ ಭಯೋತ್ಪಾದಕ ಸಂಘಟನೆಗಳ ಸವಾಲನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದ್ದೇವೆ ಮತ್ತು ಸಿದ್ಧರಾಗಿದ್ದೇವೆ. ನಾವು ಕೇಂದ್ರ ತನಿಖಾ ಸಂಸ್ಥೆಯಾಗಿ ಭಯೋತ್ಪಾದನೆಯನ್ನು ನಿಭಾಯಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ರೀತಿಯ ಇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ರಾಷ್ಟ್ರವ್ಯಾಪಿ ದೃಢವಾದ ಭಯೋತ್ಪಾದನಾ-ವಿರೋಧಿ ಗ್ರಿಡ್ ರಚಿಸುವ ಉದ್ದೇಶದಿಂದ, ಎಲ್ಲಾ ರಾಜ್ಯಗಳ ಎಟಿಎಸ್ ಮತ್ತು ಎಸ್ಟಿಎಫ್ ಮುಖ್ಯಸ್ಥರು ನವದೆಹಲಿಯಲ್ಲಿ ಭಾನುವಾರದಿಂದ ಆರಂಭವಾಗಿದೆ. ಎರಡು ದಿನಗಳ ಸಭೆಯನ್ನು ಎನ್ಐಎ ಸಮನ್ವಯಗೊಳಿಸುತ್ತಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾರತದ ಉನ್ನತ ಪೊಲೀಸರನ್ನು ಉದ್ದೇಶಿಸಿ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳ ಸಾಮಾನ್ಯ ಕಾರ್ಯತಂತ್ರದ ಬಗ್ಗೆ ಇಂದು ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.