ನವದೆಹಲಿ: ಅಕ್ಟೋಬರ್ 8ರಂದು ವಿಜಯದಶಮಿಯ ಪ್ರಯುಕ್ತ ಫ್ರಾನ್ಸಿನಲ್ಲಿ ರಫೆಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆ ನೆರವೇರಿಸಿದ್ದನ್ನು ಟೀಕಿಸಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರುಗಳು ನೀಡುತ್ತಿರುವ ಹೇಳಿಕೆ ಪಾಕಿಸ್ಥಾನಕ್ಕೆ ಬಲ ತುಂಬುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹರಿಯಾಣದ ಕರ್ನೂಲ್ನಲ್ಲಿ ಭಾನುವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ರಫೆಲ್ ಮೇಲೆ ನಾನು ಓಂ ಎಂದು ಬರೆದೆ ಮತ್ತು ಅದಕ್ಕೆ ರಕ್ಷೆಯನ್ನು ಕಟ್ಟಿದೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ವಿವಾದ ಸೃಷ್ಟಿಸಿದರು. ರಫೆಲ್ ಭಾರತಕ್ಕೆ ಹಸ್ತಾಂತರವಾಗುತ್ತಿರವುದನ್ನು ಅವರು ಸ್ವಾಗತಿಸಬೇಕಿತ್ತು. ಅದರ ಬದಲು ಅವರು ಟೀಕೆಯನ್ನು ಆರಂಭಿಸಿದರು. ಕಾಂಗ್ರೆಸ್ ನಾಯಕರುಗಳ ಹೇಳಿಕೆ ಪಾಕಿಸ್ಥಾನವನ್ನು ಬಲಿಷ್ಠಗೊಳಿಸುತ್ತಿದೆ” ಎಂದಿದ್ದಾರೆ.
“ರಫೆಲ್ ನಮ್ಮ ಬಳಿ ಮೊದಲೇ ಇದ್ದಿದ್ದರೆ ಪಾಕಿಸ್ಥಾನಕ್ಕೆ ನುಗ್ಗಿ ವೈಮಾನಿಕ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ಅನ್ನು ನಡೆಸುವ ಪ್ರಮೇಯ ಬರುತ್ತಿರಲಿಲ್ಲ. ಭಾರತದಲ್ಲೇ ಕುಳಿತುಕೊಂಡು ಅಲ್ಲಿರುವ ಉಗ್ರ ಶಿಬಿರಗಳನ್ನು ನಾಶಪಡಿಸಬಹುದಿತ್ತು” ಎಂದು ಸಿಂಗ್ ಹೇಳಿದ್ದಾರೆ.
ಹರಿಯಾಣದಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಅಂಗವಾಗಿ ರಾಜನಾಥ್ ಸಿಂಗ್ ಅವರು ಕರ್ನೂಲ್ನಲ್ಲಿ ಚುನಾವಣಾ ಸಮಾವೇಶವನ್ನು ನಡೆಸಿದರು. 2014ರಲ್ಲಿ ಇಲ್ಲಿನ 90 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗೆದ್ದಕೊಂಡಿರುವ ಬಿಜೆಪಿ ಈ ಬರಿ 75 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.